Advertisement
ಮಂಗಳಗಂಗೋತ್ರಿ ಅತಿಥಿಗೃಹದಲ್ಲಿ ಅಧಿಕಾರಿಗಳ ಪ್ರಗತಿ ಪರಿಶೀಲನೆ ಬಳಿಕ ಮಾಧ್ಯಮ ಗೋಷ್ಠಿಯಲ್ಲಿ ಮಾತನಾಡಿ, ಜಿಲ್ಲೆಯಲ್ಲಿ ಫಾರಂ 50ರ 3,000 ಅರ್ಜಿ ವಿಲೇವಾರಿಯಾಗಿದ್ದು ಇನ್ನೂ 694 ಅರ್ಜಿ ಬಾಕಿ ಇದೆ. ಫಾರಂ 54ರ 15,671 ಅರ್ಜಿಗಳಲ್ಲಿ 12,256 ಬಾಕಿ ಇದ್ದು ಡಿಸೆಂಬರ್ ಒಳಗಡೆ ಇತ್ಯರ್ಥ ಮಾಡಲು ಅಧಿಕಾರಿಗಳಿಗೆ ಸೂಚನೆ ನೀಡಿದ್ದಾಗಿ ತಿಳಿಸಿದರು. ಡೀಮ್ಡ್ ಫಾರೆಸ್ಟ್ ವಿಚಾರದಲ್ಲಿ ಪ್ರಕರಣಗಳು ಬಾಕಿ ಇದ್ದು, ಸರಕಾರದಿಂದ ಕೊಡುವು ವಿಚಾರದಲ್ಲಿ ತೀರ್ಮಾನ ಮಾಡುತ್ತೇವೆ. ಗೋಮಾಳದಲ್ಲಿ ಸಾಗುವಳಿ ವಿಚಾರದಲ್ಲಿ ಹೈಕೋರ್ಟ್ ನಿಂದ ತಡೆ ಇದ್ದರೆ, ತಿಂಗಳೊಳಗೆ ನಿಯಮಾ ವಳಿ ತಿದ್ದಪಡಿ ಮಾಡಿ ಸಮಸ್ಯೆ ಬಗೆಹರಿಸಲಾಗುವುದು ಎಂದರು.
ಸರಕಾರ ಜಾಗದಲ್ಲಿ ಮನೆ ನಿವೇಶನ ಮಂಜೂರಿಗೆ 94ಸಿ, 94ಸಿಸಿ ಕೊಡಲು 77,814 ಅರ್ಜಿ ಸ್ವೀಕಾರ ವಾಗಿದೆ. 73,397 ಅರ್ಜಿ ವಿಲೇವಾರಿ ಯಾಗಿದ್ದು 4,417 ಅರ್ಜಿ ಬಾಕಿ ಉಳಿದಿವೆ. 35,577 ಹಕ್ಕು ಪತ್ರ ನೀಡಲಾಗಿದೆ. 94ಸಿಸಿಯಡಿ 30,872 ಅರ್ಜಿ ಸ್ವೀಕಾರವಾಗಿದ್ದು 9,309 ವಿಲೇ ವಾರಿ ಯಾಗಿ 21,563 ಬಾಕಿ ಉಳಿದಿವೆ. ಮಹತ್ತರ ವಾದ ಯೋಜನೆ ಜಾರಿಗೆ ತರುವಾಗ ಅಧಿಕಾರಿ ಗಳ ನಿರ್ಲಕ್ಷ é ದಿಂದ ವಿಳಂಬವಾಗುತ್ತಿದೆ. ಇದೀಗ 3ನೇ ಹಂತದ ಪರಿಶೀಲನೆ ಕಾರ್ಯ ಮಂಗಳೂ ರಿಂದ ಪ್ರಾರಂಭಿಸಲಾಗಿದೆ. ಸಂಬಂಧಿತ ಅಧಿ ಕಾರಿ ಗಳು ವಾರಕ್ಕೊಂದು ಸಭೆ ನಡೆಸಿ ಪ್ರಗತಿ ಪರಿ ಶೀಲನೆ ಮಾಡಬೇಕು. ಯಾವುದೇ ಜನ ಪ್ರತಿನಿಧಿ ಗಳು ಹಸ್ತಕ್ಷೇಪ ಮಾಡಬಾರದು. ಹಕ್ಕುಪತ್ರಕ್ಕೆ ಸಂಬಂಧಿಸಿದಂತೆ ಹಣಕಾಸಿನ ತೊಂದರೆ ಯಾದರೆ ಅವರಿಗೆ ಬದಲಿ ವ್ಯವಸ್ಥೆ ಮಾಡಲು ಸ್ಥಳೀಯಾಡ ಳಿತ ಸಂಸ್ಥೆಗಳು ಮತ್ತು ಜನಪ್ರತಿನಿಧಿಗಳು ಸಹಕರಿಸಲಿದ್ದಾರೆ. ಆಯಾ ಗ್ರಾಮದ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಬೇಕು ಎಂದರು. ಮಾಧ್ಯಮಗೋಷ್ಠಿಯಲ್ಲಿ ಸಚಿವ ಯು.ಟಿ. ಖಾದರ್, ಜಿಲ್ಲಾಧಿಕಾರಿ ಡಾ| ಕೆ.ಜಿ. ಜಗದೀಶ್ ಮತ್ತು ಇಲಾಖಾ ಅಧಿಕಾರಿಗಳು, ಮುಖಂಡರು ಭಾಗವಹಿಸಿದ್ದರು.
Related Articles
ಉಳ್ಳಾಲ: ಕಂದಾಯ ಇಲಾಖೆ ವತಿ ಯಿಂದ ಅರ್ಹ ಫಲಾನುಭವಿಗಳಿಗೆ 94ಸಿ, 94ಸಿಸಿ ಹಕ್ಕುಪತ್ರ ವಿತರಣೆಯನ್ನು ಕಂದಾಯ ಸಚಿವ ಕಾಗೋಡು ತಿಮ್ಮಪ್ಪ ಅವರು ನೆರವೇರಿಸಿದರು.
Advertisement
ಗುರುವಾರ ಕುರ್ನಾಡು ಪದವಿ ಪೂರ್ವ ಕಾಲೇಜು ಕ್ರೀಡಾಂಗಣದಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಮಾತನಾಡಿದ ಕಾಗೋಡು, ರಾಜ್ಯದ ಜನರಿಗೆ ನೆಮ್ಮದಿ ಯಿಂದ ಬದುಕಲು ನೆಲದ ಒಡೆತನ ನೀಡುವ ನಿಟ್ಟಿನಲ್ಲಿ ಮುಖ್ಯಮಂತ್ರಿ ಸಿದ್ದ ರಾಮಯ್ಯ ನೇತೃತ್ವದಲ್ಲಿ ರಾಜ್ಯ ಸರಕಾರ ದಿಟ್ಟ ಹೆಜ್ಜೆ ಯನ್ನು ಇಟ್ಟಿದೆ. ಅದರ ಫಲ ವಾಗಿ ಲಕ್ಷಾಂತರ ಮಂದಿ ಅರ್ಹ ಫಲಾನು ಭವಿ ಗಳು ಹಕ್ಕುಪತ್ರ ಪಡೆದು ನೆಲದ ಒಡೆಯ ರಾಗುತ್ತಿದ್ದಾರೆ. ಈ ಯೋಜನೆ ಜಾರಿಗೆ ತಂದ ಕೀರ್ತಿ ಕಾಂಗ್ರೆಸ್ ಸರಕಾರದ್ದು ಎಂದರು.
ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಯು.ಟಿ. ಖಾದರ್ ಮಾತನಾಡಿ, ಸರಕಾರ ಮನೆ ಇಲ್ಲದವರಿಗೆ ಮನೆ, ನಿವೇಶನ ಇಲ್ಲದವರಿಗೆ ನಿವೇಶನ ಹಂಚಿದೆ. ಇದಕ್ಕೆ ಅನುದಾನ ಬೇಕಾಗಿಲ್ಲ. ಕೇವಲ ಮನಸ್ಸು ಮಾತ್ರ ಬೇಕಾಗಿತ್ತು. ರಾಜ್ಯದಲ್ಲಿ ಕಳೆದ 10 ವರ್ಷ ಗಳಿಂದ ಲಕ್ಷಾಂತರ ಜನರಿಗೆ ಕೊಡಲು ಬಾಕಿ ಇರುವ ಹಕ್ಕುಪತ್ರ ವಿತ ರಣೆಗೆ ರಾಜ್ಯ ಸರಕಾರ ಮುಂದಾಗಿದ್ದು, ಜನಪರ ಕಾಳಜಿಯೇ ಮುಖ್ಯವಾಗಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ತುಳು ಅಕಾಡೆಮಿಯ ಅಧ್ಯಕ್ಷ ಎ.ಸಿ. ಭಂಡಾರಿ, ಜಿಲ್ಲಾಧಿ ಕಾರಿ ಡಾ| ಕೆ.ಜಿ. ಜಗದೀಶ್, ದಕ್ಷಿಣ ಕನ್ನಡ ಜಿಲ್ಲಾ ಮುಖ್ಯ ಕಾರ್ಯ ನಿರ್ವಹಣಾ ಅಧಿಕಾರಿ ಡಾ| ಎಂ.ಆರ್. ರವಿ, ಮಂಗಳೂರು ತಾಲೂಕು ಪಂಚಾಯತ್ ಅಧ್ಯಕ್ಷ ಮಹಮ್ಮದ್ ಮೋನು, ಬಂಟ್ವಾಳ ತಾಲೂಕು ಪಂಚಾಯತ್ ಅಧ್ಯಕ್ಷ ಚಂದ್ರಹಾಸ ಪಿ. ಕರ್ಕೆàರ, ಮುಡಿಪು ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಅಬ್ದುಲ್ ಜಲೀಲ್ ಮೋಂಟುಗೋಳಿ, ಉಳ್ಳಾಲ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸಂತೋಷ್ ಕುಮಾರ್ ಶೆಟ್ಟಿ ಅಸೈಗೋಳಿ, ಮಾಣಿ ಜಿಲ್ಲಾ ಪಂಚಾಯತ್ ಕ್ಷೇತ್ರದ ಸದಸ್ಯೆ ಮಂಜುಳಾ ಮಾಧವ, ತುಂಬೆ ಜಿ.ಪಂ. ಸದಸ್ಯ ರವೀಂದ್ರ ಕಂಬಳಿ, ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಸದಸ್ಯ ಪ್ರಶಾಂತ್ ಕಾಜವ, ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ಎಸ್ ಅಬ್ಟಾಸ್, ಕೆಪಿಸಿಸಿ ಕಾರ್ಯದರ್ಶಿ ರಾಜಕುಮಾರ್, ಎಸಿ ರೇಣುಕಾ ಪ್ರಸಾದ್, ಬಂಟ್ವಾಳ ತಾ.ಪಂ. ಸದಸ್ಯ ನವೀನ್ ಪಾದಲ್ಪಾಡಿ ಹಾಗೂ ಹೈದರ್ ಕೈರಂಗಳ, ಬಾಳೆಪುಣಿ ಗ್ರಾ.ಪಂ. ಅಧ್ಯಕ್ಷೆ ಲೀಲಾವತಿ, ಕುರ್ನಾಡು ಗ್ರಾ.ಪಂ. ಅಧ್ಯಕ್ಷೆ ಶೈಲಜಾ ಮಿತ್ತಕೋಡಿ, ಮಾಜಿ ಅಧ್ಯಕ್ಷ ದೇವದಾಸ್ ಭಂಡಾರಿ ಕುರ್ನಾಡು, ಪುತ್ತೂರು ಎಸಿ ರಘುನಂದನ್, ಪದ್ಮಶ್ರೀ, ಸಿಪ್ರಿಯಾನ್ ಮಿರಾಂಡ ಹಾಗೂ ಪದ್ಮನಾಭ ನರಿಂಗಾನ, ಎನ್‌ಎಸ್ ಕರೀಂ, ಗ್ರಾ.ಪಂ. ಅಧ್ಯಕ್ಷರಾದ ಶೌಖತ್ ಆಲಿ, ಸೀತಾರಾಮ ಶೆಟ್ಟಿ , ಮಹಮ್ಮದ್ ಮುಸ್ತಫಾ ಮತ್ತಿತರರು ಉಪಸ್ಥಿತರಿದ್ದರು. ಜಿ.ಪಂ. ಸದಸ್ಯೆ ಮಮತಾ ಡಿ.ಎಸ್. ಗಟ್ಟಿ ಸ್ವಾಗತಿಸಿದರು. ಅಬ್ದುಲ್ ರಝಾಕ್ ಕುಕ್ಕಾಜೆ ಕಾರ್ಯಕ್ರಮ ನಿರೂಪಿಸಿದರು.