Advertisement
ಎಮ್ಮೆ ಹಾಲಿಗೆ ಬೇಡಿಕೆಯಿರುವ ಹಿನ್ನೆಲೆ ಯಲ್ಲಿ ಕರ್ನಾಟಕ ಹಾಲು ಮಹಾಮಂಡಳ (ಕೆಎಂಎಫ್) ಶೀಘ್ರದಲ್ಲೆ ಮಾರು ಕಟ್ಟೆಗೆ ಪರಿಚಯಿ ಸಿದಲಿದೆ. ಈ ನಿಟ್ಟಿನಲ್ಲಿ ಕೆಎಂಎಫ್ ಆಡಳಿತ ಮಂಡಳಿ ಎಲ್ಲ ಸಿದ್ಧತೆ ಮಾಡಿಕೊಳ್ಳುತ್ತಿದೆ.
Related Articles
Advertisement
ವಿಜಯಪುರ ಭಾಗಗಳಲ್ಲಿ ಖರೀದಿ: ಈಗಾಗಲೇ ರಾಜ್ಯವ್ಯಾಪಿ ಹಲವು ಒಕ್ಕೂಟಗಳು ಕೆಎಂಎಫ್ಗೆ ಹಾಲು ಪೂರೈಸುತ್ತಿವೆ. ಆದರೆ ಎಲ್ಲ ರೈತರಲ್ಲಿ ಎಮ್ಮೆ ಹಾಲು ಪೂರೈಸುತ್ತಿಲ್ಲ. ಅಧಿಕ ಸಂಖ್ಯೆ ಯಲ್ಲಿ ರಾಸು ಹಸುಗಳ ಹಾಲನ್ನೇ ಸರಬರಾಜು ಮಾಡುತ್ತಿದ್ದಾರೆ. ಹೀಗಾಗಿ ವಿಜಯಪುರ ಮತ್ತು ಬೆಳಗಾವಿ ಭಾಗದ ರೈತರಿಂದ ಎಮ್ಮೆಹಾಲನ್ನು ಖರೀದಿಸಲಾಗುತ್ತಿದೆ. ಉತ್ತರ ಕರ್ನಾಟಕದಲ್ಲಿ ಸಾಕಷ್ಟು ಎಮ್ಮೆಗಳಿದ್ದು, ಆ ಭಾಗದ ರೈತರಿಂದ ಹಾಲು ಸಂಗ್ರಹಿಸಲಾಗುವುದು. ಮಾರುಕಟ್ಟೆ ಮತ್ತು ಬೇಡಿಕೆಗೆ ಅನುಗುಣವಾಗಿ ಎಮ್ಮೆ ಹಾಲು ಸಂಗ್ರಹಿಸಲಾಗುವುದು ಎಂದು ಕೆಎಂಎಫ್ನ ಅಧಿಕಾರಿಗಳು ಹೇಳಿದ್ದಾರೆ.
ಎಮ್ಮೆ ಹಾಲಿನ ದರದ ಬಗ್ಗೆ ಕೆಎಂಎಫ್ ಇನ್ನೂ ನಿರ್ಧಾರ ಮಾಡಿಲ್ಲ. ಪ್ರತಿ ಲೀಟರ್‌ಗೆ 70 ರೂ. ನಿಗದಿಪಡಿಸುವ ಸಾಧ್ಯತೆಯಿದೆ. ಅಂತಿಮ ಬೆಲೆ ನಿರ್ಧಾರವನ್ನು ಕೆಎಂಎಫ್ನ ಆಡಳಿತ ಮಂಡಳಿ ತೀರ್ಮಾನ ಕೈಗೊಳ್ಳಲಿದೆ. ಕರ್ನಾಟಕ ಮಹಾಮಂಡಲ ಈಗ ಪ್ರತಿದಿನ 46 ಲಕ್ಷ ಲೀಟರ್ ಹಾಲನ್ನು ಮಾರಾಟ ಮಾಡುತ್ತಿದೆ. ಈ ಪೈಕಿ 10 ಲಕ್ಷ ಲೀಟರ್ ಮೊಸರನ್ನು ರಾಜ್ಯ ಮತ್ತು ಹೊರ ರಾಜ್ಯಗಳಿಗೆ ಮಾರಾಟ ಮಾಡುತ್ತಿದೆ ಎಂದಿದ್ದಾರೆ.
ಎಮ್ಮೆ ಹಾಲು ಪೂರೈಸುತ್ತೇವೆ. ನಮಗೆ ಮಾರುಕಟ್ಟೆ ಮಾಡಿ ಕೊಡಿ ಎಂದು ಬೆಂಗಳೂರು ಹಾಲು ಒಕ್ಕೂಟಕ್ಕೆ ಕೆಎಂಎಫ್ ಮನವಿ ಮಾಡಿದೆ. ಹೀಗಾಗಿ ಎಮ್ಮೆ ಹಾಲು ಮಾರಾಟಕ್ಕೂ ಆದ್ಯತೆ ನೀಡಲಾಗುತ್ತಿದೆ. ಎಮ್ಮೆ ಹಾಲಿಗೂ ಬೆಂಗಳೂರು ವ್ಯಾಪ್ತಿಯಲ್ಲಿ ಬೇಡಿಕೆಯಿದೆ. ಕೆಎಎಫ್ಎಂ ಈಗ ಎಮ್ಮೆ ಹಾಲಿನ ಮಾರಾಟಕ್ಕೆ ಮುಂದಾಗಿರುವುದು ರೈತರಿಗೆ ಅನುಕೂಲವಾಗಲಿದೆ.-ಎಚ್.ಪಿ.ರಾಜಕುಮಾರ್, ಬೆಂಗಳೂರು ಹಾಲು ಒಕ್ಕೂಟದ ಅಧ್ಯಕ್ಷ
ಮಾರುಕಟ್ಟೆಯಲ್ಲಿ ಎಮ್ಮೆ ಹಾಲಿಗೂ ಬೇಡಿಕೆ ಬಂದಿದೆ. ಹೀಗಾಗಿ ಕೆಎಂಎಫ್ ಶೀಘ್ರದಲ್ಲೇ ಎಮ್ಮೆ ಹಾಲನ್ನು ಗ್ರಾಹಕರಿಗೆ ಮಾರಾಟ ಮಾಡಲಿದೆ. ವಿಜಯಪುರ ಮತ್ತು ಬೆಳಗಾವಿ ಭಾಗಗಳ ರೈತರಿಂದ ಹಾಲು ಖರೀದಿಸಲಾಗುತ್ತಿದೆ.-ಎಂ.ಕೆ.ಜಗದೀಶ್, ಕೆಎಂಎಫ್ ವ್ಯವಸ್ಥಾಪಕ ನಿರ್ದೇಶಕ
– ದೇವೇಶ ಸೂರಗುಪ್ಪ