Advertisement
ಮನೆಯ ಎಮ್ಮೆ ಹಾಕಿದ ಗಂಡು ಕರುವನ್ನು ಪ್ರೀತಿಯಿಂದ ಮನೆಯ ಸದಸ್ಯನಂತೆ ಸಾಕಿದ್ದಾರೆ. ಅದಕ್ಕೆ ಬುಜ್ಜಿ ಮತ್ತು ಭೀಮ ಎಂದು ಹೆಸರಿಟ್ಟಿದ್ದಾರೆ. ಒಂದು ವರ್ಷ ತುಂಬಿದ ಬುಜ್ಜಿ ಗೆ ಸಂಭ್ರಮದಿಂದ ಬರ್ತಡೇ ಮಾಡಿದರು.
Related Articles
Advertisement
ಕೋಣ ಎಂಬುದು ದಡ್ಡನಿಗೆ ಬಳಸುವ ಬೈಗುಳ ಮತ್ತು ಯಮನ ವಾಹನ ಎಂಬ ನಕಾರಾತ್ಮಕ ಸಂಬೋಧನೆ ಎಂಬ ಅಭಿಪ್ರಾಯವಿದೆ. ಎಮ್ಮೆ ಸಾಕಿದರೆ ಹೈನು, ಕೋಣ ಸಾಕಿದರೆ ಏನು? ಎಂಬ ತಾತ್ಸಾರವೂ ಜನರಲ್ಲಿದೆ. ಎಮ್ಮೆ ಗಂಡು ಕರುವಿಗೆ ಜನ್ಮವಿತ್ತರೆ ಅಯ್ಯೋ ಕೋಣ ಹುಟ್ಟಿತು ಎಂದು ಮೂಗು ಮುರಿಯುವವರೂ ಇದ್ದಾರೆ. ಈ ಎಲ್ಲ ಉದ್ಗಾರಗಳ ಮಧ್ಯೆ ಕೋಣವನ್ನು ಪ್ರೀತಿಯಿಂದ ಸಾಕಿ, ಮಮತೆಯಿಂದ ಮೇಯಿಸಿ ಕುಟುಂಬ ಸದಸ್ಯರಂತೆ ಆರೈಕೆ ಮಾಡುತ್ತಿರುವ ರೈತನ ಕಾರ್ಯ ಇತರರಿಗೆ ಮಾದರಿಯಾಗಿದೆ. – ಶಿವಲಿಂಗ ಸಿದ್ನಾಳ, ಉಪನ್ಯಾಸಕ ಮಹಾಲಿಂಗಪುರ
ಮೊದಲಿನಿಂದಲೂ ಜಾನುವಾರುಗಳೆಂದರೆ ಹೆಚ್ಚು ಪ್ರೀತಿ, ನಾವು ಅವುಗಳನ್ನು ಸಾಕುತ್ತೇವೆ ಎನ್ನುವುದಕ್ಕಿಂತ ಅವುಗಳೇ ನಮಗೆ ಲಾಭದಾಯಕ ಜೀವಿಗಳು. ಆದ್ದರಿಂದ ಈ ಕರುವಿಗೆ ಸಾತ್ವಿಕ ಆಹಾರ ತಿನ್ನಿಸಿ ಆಜಾನುಬಾಹುವಾಗಿ ಬೆಳೆಸಿದ್ದೇನೆ. ನೋಡಲು ದೊಡ್ಡ ಗಾತ್ರವಿದ್ದರೂ ಯಾರನ್ನೂ ಹಾಯಿವುದಿಲ್ಲ, ಮಕ್ಕಳಾದಿಯಾಗಿ ಎಲ್ಲರೊಂದಿಗೆ ಆಪ್ತವಾಗಿ ಸ್ಪಂದಿಸುತ್ತದೆ. ಅದರ ಮಾನವೀಯ ಗುಣ ನೋಡಿ ನಮಗೂ ಪ್ರೀತಿ ಹೆಚ್ಚಾಗಿ ನಮ್ಮಂತೆ ಅದಕ್ಕೂ ಬರ್ತಡೇ ಮಾಡಿ ಕೇಕ್ ತಿನ್ನಿಸಿದೆವು. – ಸಿದ್ದು ಮಹಾದೇವ ಧರಿಗೌಡರ ಕೋಣದ ಮಾಲೀಕ, ರನ್ನಬೆಳಗಲಿ-ಮಹಾಲಿಂಗಪುರ
– ಚಂದ್ರಶೇಖರ ಮೋರೆ