Advertisement
ವಾಣಿಜ್ಯೋದ್ಯಮಿಗಳ ಸಂಬಂಧವಾಗಿ ಕೈಗಾರಿಕೋದ್ಯಮಿಗಳಿಗೆ ಧನ ಸಂಪತ್ತು ಬಹು ಮುಖ್ಯವಾದ ಅಡಿಪಾಯವನ್ನು ನೀಡುತ್ತದೆ. ಕೋಟಿಗಟ್ಟಲೆ ದುಡ್ಡು ಹಾಕಿ ಕೈಸುಟ್ಟುಕೊಂಡು ಬೀದಿಗೆ ಬಂದು ಪಾಪರ್‌ಗಳಾದ, ನಿರ್ಗತಿಕ ವರ್ತಮಾನಕ್ಕೆ ಬಂಧಿಯಾದ ಸಾವಿರಾರು ಉದಾಹರಣೆಗಳುಂಟು. ಯಾವುದೇ ರೀತಿಯ ಧನಬಲರದೆ ಏನೋ ಒಂದು ತೀರಾ ಅಲ್ಪರೀತಿಯ ಹೊಟ್ಟೆಪಾಡಿಗಾಗಿನ ಕೈಂಕರ್ಯ ಸಣ್ಣಪುಟ್ಟ ಕೆಲಸಕಾರ್ಯ ಮಾಡಿಕೊಂಡು ಅಗಾಧದ ದೊಡ್ಡ ಕೈಗಾರಿಕೆಯನ್ನೋ ವಾಣಿಜ್ಯ ಘಟಕವನ್ನೋ ನಿರ್ಮಿಸಿ ಬಹು ಯಶಸ್ವೀ ವೃತ್ತಿಯಾಗಿ ಮಿಂಚಿದವರ ಸಂಖ್ಯೆಯೂ ಸಾವಿರಾರು ಉಂಟು. ಒಟ್ಟಿನಲ್ಲಿ ಯಾವುದೋ ಅಮೂರ್ತವಾದ ಒಂದು ದಿವ್ಯ, ಒಂದು ಉದ್ಯಮದ ವಾಣಿಜ್ಯದ ಘಟಕಗಳ ಬೆಂಬಲಕ್ಕೆ ಬರುತ್ತದೆ. ಆದರೆ ಅದು ವಿದಿಯೇ ಅದೃಷ್ಟವೇ ಅಥವಾ ಏನೂ ಆಗಿರದೆ ಕೇವಲ ನಿಸ್ಪೃಹವಾದ ದುಡಿತದ ಫಲವೇ ಕಾಯಕವೇ ಕೈಲಾಸ ಎಂಬ ಮಾಹಿತಿಗೆ ಸೀಮಿತವಾದ ಸಂಪನ್ನತೆಯ ಫಲವೇ ತಿಳಿಯದ ಜಿಜಾnಸೆಯಾಗಿದೆ. ಏನನ್ನೇ ಹೇಳಿದರೂ, ತರ್ಕದಲ್ಲಿರಿಸಿ ತೂಗಿದರೂ, ಶಿಸ್ತು ದುಡಿಮೆ ತೀವ್ರವಾದ ಪರಿಶ್ರಮಕ್ಕೆ ಯಶಸ್ಸಿದೆ ಎಂಬುದು ಸರಿಯಾದರೂ ಯಶಸ್ಸಿಗಾಗಿ ಮುನ್ನುಗ್ಗಿಸಿ ಈ ಶಿಸ್ತನ್ನು ದುಡಿಮೆಯನ್ನು, ಪರಿಶ್ರಮಗಳನ್ನು ಒಬ್ಬ ವ್ಯಕ್ತಿಯಲ್ಲಿ ಒಗ್ಗೂಡಿಸಿ ಮುನ್ನುಗ್ಗಿಸುವ ಗ್ರಹಬಲ ಒಂದು ಮುಖ್ಯವಾಗಿ ಬೇಕೇ ಬೇಕು.
ಸತ್ಯಂ ಕಂಪ್ಯೂಟರ್ಸ್‌ನ ರಾಮಲಿಂಗಂ ರಾಜು ಅವರ ಕುಂಡಲಿಯನ್ನು ಗಮನಿಸುವುದಾದರೆ ವಾಣಿಜ್ಯ ಸಂಬಂಧವಾದ ಅದ್ಭುತ ಧೀ ಶಕ್ತಿಯನ್ನು ಉತ್ಛನಾದ ಬುಧ ಒದಗಿಸಿದ್ದಾನೆ. ದಿಕºಲ ಪಡೆದವರ ಗ್ರಹ ಜಾತಕದ ಧನಾಧಿಪತಿ ಗುರುವಿನ ನಕ್ಷತ್ರದಲ್ಲಿ ಕುಳಿತು ಅಪಾರವಾದ ಪರಿಶ್ರಮ ದುಡಿಮೆ ಬೆವರು ಹರಿಸಿ ಮುನ್ನುಗ್ಗುವ ಸಕಲ ಧಿಮಂತಿಕೆಯನ್ನು ಕೊಟ್ಟಿದ್ದಾನೆ. ಕಂಪ್ಯೂಟರ್ ಟೆಕ್ನಾಲಜಿಯಲ್ಲಿ ರಾಮಲಿಂಗಂ ಮುಟ್ಟಿದ್ದೆಲ್ಲ ಚಿನ್ನವಾಗುತ್ತಲೇ ಹೋಯಿತು. ಹೀಗೆ ಬುಧ ಹಾಗೂ ರವಿಗ್ರಹಗಳ ದಿವ್ಯ ನಿಕ್ಷೇಪ ರಾಮಲಿಂಗಂ ಅವರ ಜಾತಕದಲ್ಲಿ ಅದ್ಭುತ ಹಾಗೂ ರಮ್ಯವಾಗಿದೆ. ಆದರೆ ಯಾತನಾಮಯವಾದ ದಾರಿಗೆ ಮುನ್ನುಗ್ಗಿಸಲು ಪಣತೊಟ್ಟಂತೆ ಇದ್ದ ಶನೈಶ್ಚರ ಸ್ವಾಮಿ ನಷ್ಟಭಾವದಲ್ಲಿ ಬಲಾಡ್ಯನಾಗಿ ಕುಳಿತದ್ದು ಜತೆಗೆ ಇದೇ ಶನಿ ರಾಹು ಬಾಧಿತವಾದ ಮಂಗಳನನ್ನು ದೃಷ್ಟಿಸಿ ದುಸ್ಥಾನ ಸ್ಥಿತ (ಸೆರೆವಾಸ ಅಥವಾ ಏಕಾಂತ ಸ್ಥಿತಿ) ಚಂದ್ರನನ್ನು ಪಂಚಮ ಶನಿಕಾಟಕ್ಕೆ ಬಗ್ಗಿಸಿ ರಾಹುದಶಾ ಕಾಲದಲ್ಲಿ ರಾಹುವನ್ನೇ ಬಳಸಿಕೊಂಡು ಸಂಪನ್ನತೆಗೆ ಭಂಗ ತಂದಿದ್ದಾನೆ. ಇಷ್ಟು ವಿವರಗಳು ಸಾಕು. ವಾಣಿಜ್ಯೋದ್ಯಮ, ಕೈಗಾರಿಕೋದ್ಯಮ ಮತ್ತು ಧನಯೋಗ
ಧನಯೋಗಗಳು ಹೇರಳವಾಗಿದ್ದರೆ ವಾಣಿಜ್ಯ ಕೈಗಾರಿಕೆ ಸಂಬಂಧವಾದ ವಹಿವಾಟುಗಳಿಗೆ ಯಶಸ್ಸು ಕಟ್ಟಿಟ್ಟ ಬುತ್ತಿ. ಶನಿಕಾಟ, ರಾಹುಕಾಟ ದುಷ್ಟಸ್ಥಾನ ಸ್ಥಿತ ಅಥವಾ ದುಷ್ಟಸ್ಥಾನ ಅಧಿಪತ್ಯ ಹೊಂದಿದ ಗ್ರಹಗಳು ವರ್ತಮಾನದಲ್ಲಿ ತಮ್ಮ ಪಾತ್ರಗಳನ್ನು ನಿರ್ವಹಿಸಲು ಬಂದಾಗ ಪರದಾಟಗಳು ಶುರುವಾಗುತ್ತದೆ. ಎಷ್ಟೇ ಧನಬಲ ಯೋಗಗಳಿದ್ದರೂ ಬಲಾಡ್ಯವಾದ ಬಿರುಗಾಳಿಯೊಂದು ತತ್ತರಿಸುವಂಥ ಹೊಯ್ದಾಟಗಳನ್ನು ತಂದಿಡುತ್ತದೆ. ಸಣ್ಣ ನಿರ್ಲಕ್ಷ್ಯ ಸಣ್ಣ ತಪ್ಪು ಕೋಲಾಹಲ ತರುತ್ತದೆ. ಒಬ್ಬ ವ್ಯಕ್ತಿ ದೈತ್ಯಾಕಾರದಲ್ಲಿ ಬೆಳೆದು ನಿಂತು ವಿರೋಧಿಯಾಗುತ್ತಾನೆ. ಕಾರ್ಮಿಕರ ಮುಷ್ಕರ ಕಚ್ಛಾವಸ್ತುಗಳ ಕೊರತೆ ಸರ್ರನೆ ಎದುರಾಗಬಹುದಾದ ಸರಕಾರಿ ಅಥವಾ ಕಾಯ್ದೆ ಕಾನೂನುಗಳ ಅಡೆತಡೆ ಬೆಂಕಿ ಅನಾಹುತ ಪ್ರಾಕೃತಿಕ ಅನಾಹುತ ಇತ್ಯಾದಿಗಳು ಬೆನ್ನೆಲುಬನ್ನೇ ಮುರಿದು ಮೇಲಕ್ಕೆದ್ದು ನಿಲ್ಲಲಾಗದಂತೆ ತಡೆಯೊಡ್ಡಬದು. ಏನೇ ಪರಿಶ್ರಮಗಳಿದ್ದರೂ ಅವು ಗೌಣವಾಗುತ್ತದೆ.
Related Articles
ಅರವತ್ತರ ದಶಕದ ಮಧ್ಯಭಾಗ ಕೊನೆಯ ಭಾಗ ಎಪ್ಪತ್ತರ ದಶಕದ ಮೊದಲ ವರ್ಷಗಳ ಸಂದರ್ಭದ ರಾಜಕಪೂರ್ ಎದುರಿಸಿದ ಆರ್ತಿಕ ಮುಗ್ಗಟ್ಟು ಭಾರಿ ಇತ್ತು. ಸಂಗಂ, ಮೇರಾ ನಾಮ್ ಜೋಕರ್ ಇತ್ಯಾದಿ ಅದ್ಭುತ ಸಿನಿಮಾಗಳನ್ನು ನೀಡಿ ಪ್ರಶಂಸೆಗೊಳಗಾದರೂ ಮೇರಾ ನಾಮ್ ಜೋಕರ್ ಇನ್ನಿಲ್ಲದ ಸಾಲದಲ್ಲಿ ರಾಜ್‌ರನ್ನು ಮುಳುಗಿಸಿತು. ಅಷ್ಟಮ ಶನಿಕಾಟದಿಂದಾಗಿ ಶನೈಶ್ಚರ ಸುಖಕ್ಕೆ ಧಕ್ಕೆ ತಂದಿದ್ದ. ರಾಜ್ ಕಪೂರರು ಎದುರಿಸಿದ ಪರದಾಟಗಳು ಅನೇಕ. ಅದರ ವಿವರಗಳು ಈಗ ಬೇಡ. ಅಮಿತಾಬ್ ಬಚ್ಚನ್ ಕೂಡಾ ಇದೇ ಅಷ್ಟಮ ಶನಿಕಾಟದಲ್ಲಿ ಪಾಪರ್ ಆದರು. ಅಕ್ಷರಶಃ ಸಾಲಗಳಿಂದ ಜರ್ಝರಿತರಾಗಿ ಒಂದು ಕಾಲದ ಮಹಾನ್ ಚಲನಚಿತ್ರ ಸಾಮ್ರಾಟ ದಿಕ್ಕು ತಪ್ಪಿದಂತಾದರು.
Advertisement
ಕುಜದೋಷಯುಕ್ತ ಕುಜನ ಸಂಯೋಜನೆ ಉತ್ತಮವಾದ ಬುಧನನ್ನು ಬಾಧಿಸಿದ್ದರಿಂದ ಶನಿಕಾಟದ ಸಂದರ್ಭದಲ್ಲಿ ಶನೈಶ್ಚರನ ದೌರ್ಬಲ್ಯದಿಂದಲೇ ಅಮಿತಾಬ್ ವರ್ಚಸ್ಸಿಗೆ ಚ್ಯುತಿ ಬಂದಿತ್ತು. ವರ್ಚಸ್ಸಿಗೆ ಕಾರಣವಾಗುವ ಶನೈಶ್ಚರನೇ ಹಾಗೂ ಶುಕ್ರರು ರಾಜ್ ಕಪೂರ್ ಪಾಲಿಗೆ ಪರದಾಟ ನಿಲ್ಲಿಸಲಾಗಲಿಲ್ಲ. ಶುಕ್ರದಶಾದಲ್ಲಿ ರಾಜ್ ತುಂಭಾ ಏರಿಳಿತಗಳನ್ನು ಕಂಡರು, ಇದೇ ಶುಕ್ರ ದಶಾದಲ್ಲೇ ರಾಜ್ ಕಪೂರ್ ವಿಧಿವಶಾರಾರೂ ಕೂಡಾ. ಶುಕ್ರಗ್ರಹ ಇವರಿಗೆ ಪರಮೋತ್ಛ ಮಾರಕ ಗ್ರಹವಾಯ್ತು.
ಕೈಗಾರಿಕೋದ್ಯಮ ವಾಣಿಜ್ಯೋದ್ಯಮ ಹಾಗೂ ಶಕ್ತಿ ಪೂಜೆಶಕ್ತಿ ಶಾಂಭ, ತ್ರಿಪುರಾಂಬಾ ನಾದರೂಪಾಂಬಿಕಾ ದೇವಿ ಅವರನ್ನು ಪೂಜಿಸಬೇಕು. ಭೂಪುರ ತ್ರೆ„ಲೀಕ್ಯ ಮೋಹನ ಚಕ್ರ ಸರ್ವಾರ್ಥ ಸಾಧಕ ಬೀಜಾಕ್ಷರ ಮಂತ್ರ ಬಿಳಿತಾವರೆ ವಜ್ರ ಲೇಪಿತ ಸಿದ್ಧಿ ಲಕ್ಷಿ$¾ ಸಂಕಲ್ಪ, ಜಪಗಳು ಶಕ್ತಿಯನ್ನು ಸಂವರ್ಧಿಸಬಲ್ಲದು. ಶಕ್ತಿ ಶಾಂಭಯ ಪೂಜೆಯಿಂದ ದುಷ್ಟ ಹಾಗೂ ದುರ್ಬಲ ಗ್ರಹಗಳ ದುಷ್ಟ ಕಂಪನಗಳು ಲಯವಾಗಿ ಯಶಸ್ಸಿನ ಸೋಪಾನಕ್ಕೆ ದಾರಿಯಾಗುತ್ತದೆ. ಉತ್ತಮ ಸ್ಪಟಿಕ ಸಂಪನ್ನ ಕರ್ಪೂರ ಔದುಂಬರದತ್ತ ಸಂಯುಕ್ತ ಪಠಣಾದಿಗಳು ಶಕ್ತಿಗೆ ಪೂರಕವಾಗುತ್ತದೆ. ಜಾತಕ ಕುಂಡಲಿಯ ದಶಮಭಾವ, ಹಸ್ತರೇಖೆಯಲ್ಲಿನ ಲಿವರ್ ಲೈನ್ ಕಾಯಕ ಮುಖೇನ ಅನ್ನ ಸಿದ್ಧಿಯ ರೇಖೆಗಳನ್ನು ಎಷ್ಟು ಹೆಚ್ಚು ಹೆಚ್ಚು ಶಕ್ತಿಯುತಗೊಳಿಸಬಹುದೆಂಬುದನ್ನು ಅರಿತು ಯಶಸ್ಸು ಗಳಿಸಬೇಕು. ಅನಂತಶಾಸ್ತ್ರಿ