Advertisement

ಆರೋಗ್ಯ ಕ್ಷೇತ್ರಕ್ಕೆ ಈ ಬಾರಿ ದುಪ್ಪಟ್ಟು ಅನುದಾನ ಸಾಧ್ಯತೆ

08:33 AM Feb 01, 2021 | Team Udayavani |

ಹೊಸದಿಲ್ಲಿ: ಕೇಂದ್ರ ಬಜೆಟ್‌ಗೆ ಇನ್ನು 4 ದಿನಗಳಷ್ಟೇ ಬಾಕಿಯಿದ್ದು, ಈ ಬಾರಿ ಕೇಂದ್ರ ಸರ್ಕಾರವು ಆರೋಗ್ಯ ಕ್ಷೇತ್ರದ ಅನುದಾನವನ್ನು ದುಪ್ಪಟ್ಟುಗೊಳಿಸುವ ಸಾಧ್ಯತೆಯಿದೆ ಎಂದು ಮೂಲಗಳು ತಿಳಿಸಿವೆ.

Advertisement

ಮುಂದಿನ 4 ವರ್ಷಗಳಲ್ಲಿ ಆರೋಗ್ಯ ಕ್ಷೇತ್ರದ ಬಜೆಟ್‌ ಮೊತ್ತವನ್ನು ದೇಶದ ಜಿಡಿಪಿಯ ಶೇ.4ರಷ್ಟು ಹೆಚ್ಚಳ ಮಾಡಲು ಸರಕಾರ‌ ಉದ್ದೇಶಿಸಿದೆ. ಪ್ರಸ್ತುತ ಕೋವಿಡ್ ಸೋಂಕಿನ ಸಮಸ್ಯೆಯಿರುವ ಕಾರಣ, ಆರೋಗ್ಯ ವ್ಯವಸ್ಥೆಯಲ್ಲಿ ಸುಧಾರಣೆ ತರಲು ನಿರ್ಧರಿಸಲಾಗಿದ್ದು, ಅದರಂತೆ ಈ ದೊಡ್ಡ ಪ್ರಮಾಣದ ಬದಲಾವಣೆ ತರಲು ಉದ್ದೇಶಿಸಲಾಗಿದೆ.

2021ರ ಎಪ್ರಿಲ್‌ 1ರಂದು ಆರಂಭವಾಗಲಿರುವ ಹಣಕಾಸು ವರ್ಷಕ್ಕೆ ಆರೋಗ್ಯ ವೆಚ್ಚವು 1.2 ಲಕ್ಷ ಕೋಟಿಯಿಂದ 1.3 ಲಕ್ಷ ಕೋಟಿವರೆಗೆ ಹೆಚ್ಚಳವಾಗುವ ನಿರೀಕ್ಷೆಯಿದೆ. ಪ್ರಸ್ತುತ ವಿತ್ತ ವರ್ಷದಲ್ಲಿ ಆರೋಗ್ಯ ಕ್ಷೇತ್ರಕ್ಕೆ 626 ಶತಕೋಟಿ ರೂ.ಗಳನ್ನು ಮೀಸಲಿಡಲಾಗಿತ್ತು.

ಮುಂದಿನ ಸೋಮವಾರ ಬಜೆಟ್‌ ಮಂಡನೆಯಾಗಲಿದ್ದು, ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌ ಅವರು ಹೊಸ ಆರೋಗ್ಯಸೇವಾ ಯೋಜನೆಯನ್ನು ಘೋಷಿಸುವ ಸಾಧ್ಯತೆಯಿದೆ. ಹಲವು ದಶಕಗಳಿಂದಲೂ ಭಾರತದ ಆರ್ಥಿಕ ಪ್ರಗತಿ ದರ ಉತ್ತಮವಾಗಿದ್ದರೂ ಜಿಡಿಪಿಯ ಕೇವಲ ಶೇ.1.3ರಷ್ಟು ಮೊತ್ತವನ್ನು ಮಾತ್ರ ಆರೋಗ್ಯ ಕ್ಷೇತ್ರಕ್ಕೆ ಮೀಸಲಿಡಲಾಗುತ್ತಿದೆ. ಬ್ರಿಕ್ಸ್‌ನ ಇತರ ಅಭಿವೃದ್ಧಿ ಹೊಂದಿದ ದೇಶಗಳಿಗೆ ಹೋಲಿಸಿದರೆ ಈ ಮೊತ್ತವು ಅತ್ಯಂತ ಕನಿಷ್ಠ ಎಂದು ಹೇಳಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next