Advertisement
ಈ ಕಾತುರಕ್ಕೆ ಸಕಾರಣವೂ ಇದೆ. ಅದು- ಬಜೆಟ್ ಮಂಡನೆ ಮಾಡುತ್ತಿರುವ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹಾಗೂ ರೈಲ್ವೆ ಖಾತೆ ರಾಜ್ಯ ಸಚಿವ ಸುರೇಶ ಅಂಗಡಿ ಇವರಿಬ್ಬರೂ “ನಮ್ಮವರೇ’ ಎಂಬ ಅಭಿಮಾನ. ಈ ಅಂಶವು ಬೆಂಗಳೂರಿಗರ ನಿರೀಕ್ಷೆಯನ್ನು ಸಹಜವಾಗಿ ಇಮ್ಮಡಿಗೊಳಿಸಿದೆ. ಹಾಗಾಗಿ, ಸಂಪುಟದಲ್ಲಿ ಈ ಯೋಜನೆ ಅನುಮೋದನೆ ಆಗಿಲ್ಲದಿದ್ದರೂ ಕಳೆದೆರಡು ವರ್ಷಗಳಿಗಿಂತ ಹೆಚ್ಚಿನ ಅನುದಾನ “ನಮ್ಮವರಿಂದ’ದಕ್ಕಬಹುದು. ಜತೆಗೆ “ಆರ್ಥಿಕ ವ್ಯವಹಾರಗಳ ಮೇಲಿನ ಸಚಿವಸಂಪುಟ (ಸಿಸಿಎ)ದ ಅನುಮೋದನೆ ದೊರೆಯಲಿದೆ’ ಎಂದು ಹಣಕಾಸು ಸಚಿವರು ಭರವಸೆಯಾದರೂ ನೀಡಬಹುದು ಎಂದು ಜನ ಎದುರುನೋಡುತ್ತಿದ್ದಾರೆ.
Related Articles
Advertisement
ಭವಿಷ್ಯದ ದೃಷ್ಟಿಯಿಂದ ಚಿಕ್ಕಜಾಲದಲ್ಲಿ ಮತ್ತೂಂದು ಟರ್ಮಿನಲ್ ಘೋಷಿಸಬೇಕು. ಹಾಗೂ ಇದಕ್ಕಾಗಿ ಅನುದಾನ ಮೀಸಲಿಡಬೇಕು. ಇದರಿಂದ ಹೊರಭಾಗದಲ್ಲಿ ರೈಲುಗಳ ಕಾಯುವಿಕೆ ತಪ್ಪುತ್ತದೆ. ಪ್ರಯಾಣಿಕರಿಗೂ ಸಮಯ ಉಳಿತಾಯವಾಗಲಿದೆ ಎಂದು ರೈಲ್ವೆ ಹೋರಾಟಗಾರ ರಘೋತ್ತಮ್ ರಾವ್ ಆಗ್ರಹಿಸುತ್ತಾರೆ. ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಪಕ್ಕದಲ್ಲಿ ಹಾಲ್ಟ್ ಸ್ಟೇಷನ್ ನಿರ್ಮಿಸಲಾಗುತ್ತಿದೆ. ಇದಕ್ಕೆ ಅನುಗುಣವಾಗಿ ಆ ಮಾರ್ಗದ ವಿದ್ಯುದ್ದೀಕರಣವೂ ಆಗಬೇಕು. ಗಂಟೆಗೊಂದು ರೈಲು ಸೇವೆ ಅಲ್ಲಿ ಕಲ್ಪಿಸಬೇಕು. ಇದು ಬಜೆಟ್‌ನ ಪ್ರಮುಖ ನಿರೀಕ್ಷೆಯಲ್ಲೊಂದು ಎಂದು ಕೃಷ್ಣಪ್ರಸಾದ್ ತಿಳಿಸುತ್ತಾರೆ.
ಟೇಕ್‌ಆಫ್ ಆಗದ ಯೋಜನೆ? : ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ನಿಲ್ದಾಣ, ಕಂಟೋನ್‌ಮೆಂಟ್ ನಿಲ್ದಾಣ ಹಾಗೂ ಯಶವಂತಪುರ ನಿಲ್ದಾಣಗಳನ್ನು ಆಧುನೀಕರಣ ಗೊಳಿಸಿ, ಮರುವಿನ್ಯಾಸಗೊಳಿಸುವುದು ಸರ್ಕಾರದ ಮಹಾತ್ವಾಕಾಂಕ್ಷಿ ಯೋಜನೆ. ಇದಲ್ಲದೆ, ಕಾರ್ಪೋರೇಟ್ ಸಾಮಾಜಿಕ ಹೊಣೆಗಾರಿಕೆ ಅಡಿ ಹಲವು ಅಭಿವೃದ್ಧಿ ಕಾರ್ಯ ಕೈಗೆತ್ತಿಕೊಳ್ಳಲು ಉದ್ದೇಶಿಸಲಾಗಿತ್ತು. ಇನ್ನೂ ಟೇಕ್‌ಆಫ್ ಆಗಿಲ್ಲ.
ಬರಲಿ ಎಮು ರೈಲು : ಡೆಮು, ಮೆಮು ಬಳಿಕ ಈಗ ಎಮು (ಎಲೆಕ್ಟ್ರಿಕ್ ಮೇನ್‌ಲೈನ್ ಯೂನಿಟ್) ಬರಲಿ! ಡೆಮು ರೈಲುಗಳು ಡೀಸೆಲ್ ಆಧಾರಿತವಾಗಿದ್ದು, ಈ ಮಾದರಿಯ ರೈಲುಗಳು ಈಗಾಗಲೇ ನಿರುಪಯುಕ್ತ ಆಗುತ್ತಿವೆ. ಅವುಗಳ ಜಾಗವನ್ನು ಮೆಮು ರೈಲು (ಮೇನ್‌ಲೈನ್ ಎಲೆಕ್ಟ್ರಿಕಲ್ ಮಲ್ಟಿಪಲ್ ಯೂನಿಟ್)ಗಳು ತುಂಬುತ್ತಿವೆ. ಬೆಂಗಳೂರಿನಂಥ ಮಹಾನಗರಕ್ಕೆ ಭವಿಷ್ಯದಲ್ಲಿ ಎಮು ರೈಲುಗಳನ್ನು ಪರಿಚಯಿಸುವ ಅಗತ್ಯವಿದೆ. ಯಾಕೆಂದರೆ, ಎಮು ರೈಲುಗಳ ವಿನ್ಯಾಸ ತುಸು ಭಿನ್ನವಾಗಿದ್ದು, ಮೆಮು ರೈಲುಗಳಿಗೆ ಹೋಲಿಸಿದರೆ ಪ್ರಯಾಣಿಕರನ್ನು ಕೊಂಡೊಯ್ಯುವ ಶೇ. 40 ಅಧಿಕ. ಅಲ್ಲದೆ, ಪ್ರವೇಶ ದ್ವಾರಗಳು ಅಗಲವಾಗಿರುತ್ತವೆ. ಆದರೆ, ಈ ಮಾದರಿಯ ರೈಲುಗಳಿಗೆ ಮೆಟ್ಟಿಲು ಇರುವುದಿಲ್ಲ. ಮೆಟ್ರೋದಂತೆಯೇ ನೇರ ಪ್ರವೇಶವಿರುತ್ತದೆ. ಹಾಗಾಗಿ, ಅದಕ್ಕೆ ಅನುಗುಣವಾಗಿ ಪ್ಲಾಟ್ ಫಾರಂಗಳ ರಚಿಸಬೇಕಾಗುತ್ತದೆ ಎನ್ನುತ್ತಾರೆ ತಜ್ಞರು.
ನಿರೀಕ್ಷೆಗಳೇನು?:
- ಬೆಂಗಳೂರು ನಗರದಿಂದ ಮಂಡ್ಯ, ತುಮಕೂರು, ವೈಟ್ ಪೀಲ್ಡ್- ಬಂಗಾರಪೇಟೆ ಮಾರ್ಗಗಳ ನಡುವೆ ಆಟೋಮೆಟಿಕ್ ಸಿಗ್ನಲ್ ವ್ಯವಸ್ಥೆಗೆ ಅನುಮೋದನೆ.
- 130 ಕೋಟಿ ರೂ. ವೆಚ್ಚದಲ್ಲಿ ಯಶವಂತಪುರ ಕೋಚಿಂಗ್ ಟರ್ಮಿನಲ್ ಪೂರ್ಣಗೊಳ್ಳಬೇಕು (ಹಲವು ಬಾರಿ ಗಡುವು ವಿಸ್ತರಣೆ ಆಗಿದೆ).
- 23 ಕಿ.ಮೀ. ಉದ್ದದ ಯಲಹಂಕ-ದೇವನಹಳ್ಳಿ ಮಾರ್ಗವನ್ನು 20 ಕೋಟಿ ರೂ. ವೆಚ್ಚದಲ್ಲಿ ವಿದ್ಯುದ್ದೀಕರಣ.
- ಚಿಕ್ಕಬಾಣಾವರ-ಹಾಸನ ಜೋಡಿ ಮಾರ್ಗ ನಿರ್ಮಾಣ.
- ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲು ನಿಲ್ದಾಣ ಮರುವಿನ್ಯಾಸಗೊಳಿಸಿ, ರೈಲುಗಳ ನಿಲುಗಡೆ ಸಾಮರ್ಥ್ಯ ವೃದ್ಧಿಸಬೇಕು.
- ನಗರದಲ್ಲಿ 30ಕ್ಕೂ ಅಧಿಕ ಲೆವೆಲ್ ಕ್ರಾಸಿಂಗ್‌ಗಳಿದ್ದು, ಅವುಗಳ ತೆರವಿಗೆ ಕ್ರಮ.