Advertisement
ಭಾರತದಲ್ಲಿ ಯುವ ಸಂಪನ್ಮೂಲ ಸಮರ್ಪಕ ಹಾಗೂ ಪರಿಣಾಮಕಾರಿ ಬಳಕೆ ಹಿನ್ನೆಲೆಯಲ್ಲಿ ಸಣ್ಣ ಮತ್ತು ಮಧ್ಯಮ ಕೈಗಾರಿಕೋದ್ಯಮಗಳ ಆರಂಭ, ಪುನರುಜ್ಜೀವನಕ್ಕೆ 50 ವರ್ಷಗಳ ಕಾಲ ಶೂನ್ಯ ಬಡ್ಡಿ ದರದಲ್ಲಿ ಸಾಲ ಸೌಲಭ್ಯ ನೀಡಲಿದೆ. ಸಕಾಲಕ್ಕೆ ಹಣಕಾಸು ಸಹಾಯ ಮಾಡುವುದರ ಜತೆಗೆ ಕೇಂದ್ರ ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳ ಸಚಿವಾಲಯ ಹೊಸ ಹೊಸ ತಂತ್ರಜ್ಞಾನ, ಕೌಶಲ್ಯಾಭಿವೃದ್ಧಿ ತರಬೇತಿ ನೀಡಲಿದ್ದು, ಜಾಗತಿಕ ಮಟ್ಟ ದಲ್ಲಿ ಸ್ಪರ್ಧಾತ್ಮಕವಾಗಿ ಗುರುತಿಸಿಕೊಳ್ಳಲು ಬೆನ್ನೆಲುಬಾಗಿ ನಿಲ್ಲಲಿದೆ.
Related Articles
ಬಹುದೊಡ್ಡ ಬಂಡವಾಳ ನೆರವು ತಾಂತ್ರಿಕ ವಾಗಿ ನೈಪುಣ್ಯ ಹೊಂದಿರುವ ಹಾಗೂ ಹೊಸ ಉತ್ಸಾಹದಲಿರುವ ಯುವ ಜನತೆಗೆ ವರದಾನವಾಗಿದೆ. ಸಕಾಲಕ್ಕೆ ಸೂಕ್ತ ನಿರ್ಧಾರದ ಮೂಲಕ ಸ್ಟಾರ್ಟಪ್ ಆರಂಭಿಸುವವರಿಗೆ ಇದು ಶುಕ್ರದೆಸೆ ಎಂದರೆ ಅತಿಶಯೋಕ್ತಿ ಅಲ್ಲ.
Advertisement
ಕ್ರೀಡೆಗೆ ಇಲ್ಲ ಉತ್ತೇಜನಭಾರೀ ನಿರೀಕ್ಷೆ ಇಟ್ಟುಕೊಂಡಿದ್ದ ಕ್ರೀಡಾ ಕ್ಷೇತ್ರಕ್ಕೆ ಈ ಬಾರಿ ನಿರಾಸೆ ಎದುರಾಗಿದೆ. ಕಳೆದ ಬಾರಿ ನೀಡಿದ್ದ 3397.32 ಕೋಟಿ ರೂ. ಅನುದಾನವನ್ನು ಈ ಬಾರಿ 3,398 ಕೋಟಿ ರೂ.ಗೆ ನಿಗದಿಗೊಳಿಸಲಾಗಿದೆ. ಹೀಗಾಗಿ ಹೆಚ್ಚುವರಿ ಅನುದಾನ ನೀಡಿಲ್ಲ. ಪ್ಯಾರಿಸ್ ಒಲಿಂಪಿಕ್‌ಗೆ ಸಿದ್ಧತೆ ನಡೆಸುತ್ತಿದ್ದ ಕ್ರೀಡಾಳುಗಳಿಗೆ ಇದು ನಿರಾಸೆ ಮೂಡಿಸಿದೆ. ಎನ್‌ಇಪಿಗೆ ಆದ್ಯತೆ
ರಾಷ್ಟ್ರೀಯ ಶಿಕ್ಷಣ ನೀತಿಗೆ ಹೆಚ್ಚಿನ ಒತ್ತು ನೀಡಲು ನಿರ್ಧರಿಸುವ ಕೇಂದ್ರ ಸರ್ಕಾರ ಇದನ್ನು ಇನ್ನಷ್ಟು ಪರಿಣಾಮ ಕಾರಿಗೊಳಿಸಲು ಸಜ್ಜಾಗಿದೆ. ಎನ್‌ಇಪಿಗೆ ಕೆಲವು ಮಾರ್ಪಾಡಿನೊಂದಿಗೆ ವಿಶೇಷ ಆದ್ಯತೆ ನೀಡುವುದಾಗಿ ಘೋಷಿಸಿದೆ. ಉನ್ನತ ಶಿಕ್ಷಣಕ್ಕೆ ಒತ್ತು
ದೇಶದಲ್ಲಿ 2014ರಿಂದ ಉನ್ನತ ಶಿಕ್ಷಣಕ್ಕಾಗಿ 7 ಐಐಟಿ, 16 ಐಐಐಟಿ, 7 ಐಐಎಂ, 15 ಎಐಐಎಂಎಸ್ ಹಾಗೂ 390 ವಿಶ್ವವಿದ್ಯಾಲಯಗಳನ್ನು ಸ್ಥಾಪಿಸಲಾಗಿದೆ. ಭಾರತದ ಉದಯಕ್ಕಾಗಿ ಪಿಎಂ ಸ್ಕೂಲ್‌ಗುಣಮಟ್ಟದ ಬೋಧನೆ ನೀಡುತ್ತಿದೆ. ದೇಶಾದ್ಯಂತೆ 3 ಸಾವಿರ ಹೊಸ ಐಟಿಐಗಳನ್ನು ತೆರೆಯಲಾಗಿದೆ ಎಂದು ಕೇಂದ್ರ ಸರಕಾರ ತಿಳಿಸಿದೆ. 10 ವರ್ಷಗಳಲ್ಲಿ ಅರ್ಥ ವ್ಯವಸ್ಥೆಯೇ ಬದಲು
ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಇಡೀ ದೇಶದ ತೆರಿಗೆ ವ್ಯವಸ್ಥೆಯನ್ನು ಜಿಎಸ್‌ಟಿ ಮೂಲಕ ಕ್ರೋಢಿಕರಿಸಲಾಗಿದೆ. 2017ರ ಜುಲೈಯಿಂದ ಜಾರಿಗೆ ಬಂದ ಜಿಎಸ್‌ಟಿಯು ಅತ್ಯಂತ ಯಶಸ್ವಿಯಾಗಿ ಅನುಷ್ಠಾನಗೊಂಡಿದೆ. ಜನವರಿಯಲ್ಲಿ 1.72 ಲಕ್ಷ ಕೋಟಿ ರೂ ಜಿಎಸ್‌ಟಿ ತೆರಿಗೆ ಸಂಗ್ರಹವಾಗಿದೆ. ಯುಪಿಐ
ವಿಶ್ವದ ಮುಂಚೂಣಿ ದೇಶಗಳು ಸಹ ಭಾರತದ ಯುಪಿಐ ವ್ಯವಸ್ಥೆ ಅದರ ಮೂಲ ಸೌಕರ್ಯ ಮತ್ತು ಸಾಮಾನ್ಯ ಜನರು ಸಹ ಬಳಸುವ ಪರಿಗೆ ಬೆರಗಾಗಿದ್ದಾರೆ. ಇಂದು ವಿಶ್ವದಲ್ಲೇ ಅತಿಹೆಚ್ಚು ಡಿಜಿಟಲ್ ಪಾವತಿ ಮಾಡುವ ದೇಶವಾಗಿ ಭಾರತ ಬೆಳೆದಿದೆ. ಪ್ರಸ್ತುತ ದೇಶದಲ್ಲಿ ಪ್ರತಿ ತಿಂಗಳು 12 ಬಿಲಿಯನ್‌ನಷ್ಟು ಹಣ ಯುಪಿಐ ಮೂಲಕ ವರ್ಗಾವಣೆಯಾಗುತ್ತಿದೆ. ಜನಧನ್ ಯೋಜನೆ
ದೇಶದ ಪ್ರತಿಯೊಬ್ಬರೂ ಬ್ಯಾಂಕ್ ಖಾತೆ ಹೊಂದಿರಬೇಕು ಎಂಬ ಗುರಿಯೊಂದಿಗೆ 2014ರಲ್ಲಿ ಪ್ರಧಾನ ಮಂತ್ರಿ ಜನಧನ್ ಯೋಜನೆಯನ್ನು ಆರಂಭಿಸ ಲಾಯಿತು. ಈಗ 50 ಕೋಟಿಗಿಂತ ಹೆಚ್ಚು ಜನ ಧನ್ ಖಾತೆಗಳಿವೆ. ಇಂದು ಸರಕಾರ ಜನರಿಗೆ ಯಾವುದೇ ಆರ್ಥಿಕ ನೆರವು, ಪ್ರೋತ್ಸಾಹ ಧನ ನೀಡು ವುದಿದ್ದರೂ ನೇರವಾಗಿ ಖಾತೆಗೆ ವರ್ಗಾಯಿಸುತ್ತಿದೆ. ಇದರಿಂದ 34 ಲಕ್ಷ ಕೋಟಿ ರೂ.ಗಳನ್ನು ಖಾತೆಗೆ ನೇರ ವರ್ಗಾವಣೆ ಮಾಡಿದ್ದು 2.7 ಲಕ್ಷ ಕೋಟಿ ರೂ ಉಳಿತಾಯವಾಗಿದೆ ಎಂದು ನಿರ್ಮಲಾ ಹೇಳಿದ್ದಾರೆ. ಪಿಎಂ ಕಿಸಾನ್ ಸಮ್ಮಾನ್
ಸಣ್ಣ ರೈತರಿಗೆ ವರ್ಷಕ್ಕೆ 6 ಸಾವಿರ ರೂ ನೆರವು ನೀಡುವ ಈ ಯೋಜನೆಯ ಪ್ರಯೋಜನವನ್ನು ಹತ್ತು ಕೋಟಿಗಿಂತ ಹೆಚ್ಚು ರೈತರು ಪಡೆದಿದ್ದಾರೆ. 2019ರಲ್ಲಿ ಆರಂಭವಾದ ಯೋಜನೆಯು ಕೋವಿಡ್ ಸಂದರ್ಭದಲ್ಲಿ ರೈತರಿಗೆ ತುಸು ನಿರಾಳತೆಯನ್ನು ತಂದಿತ್ತು. ಮುದ್ರಾ ಯೋಜನೆ
ದೇಶದಲ್ಲಿ ಉದ್ಯಮಶೀಲತೆ ಬೆಳೆಸುವ ಉದ್ದೇಶದಿಂದ ಪ್ರಧಾನ ಮಂತ್ರಿ ಮುದ್ರಾ ಯೋಜನೆಯನ್ನು 2015ರಲ್ಲಿ ಪ್ರಕಟಿಸಲಾಯಿತು. ಈ ಯೋಜನೆಯಡಿ 22.5 ಲಕ್ಷ ಕೋಟಿ ರೂ ಸಾಲ ನೀಡಲಾಗಿದೆ. ಇದರ ಜೊತೆಗೆ ಫಂಡ್ ಆಫ್ ಫಂಡ್ಸ್, ಸ್ಟಾರ್ಟ್ ಆಫ್ ಇಂಡಿಯಾ ಮತ್ತು ಸ್ಟಾರ್ಟ್ ಆಫ್ ಕ್ರೆಡಿಟ್ ಗ್ಯಾರಂಟಿ ಯೋಜನೆಗಳು ಉದ್ಯಮಶೀಲತೆಗೆ ನೆರವು ನೀಡುತ್ತದೆ. ಪಿಎಂ ಸ್ವನಿಧಿ
ನಗರ ಭಾಗದ ಬೀದಿ ವ್ಯಾಪಾರಿಗಳ ಕಲ್ಯಾಣಕ್ಕಾಗಿ 2020ರ ಜೂನ್‌ನಲ್ಲಿ ಈ ಯೋಜನೆಯನ್ನು ಆರಂಭಿಸಲಾಯಿತು. ಸುಮಾರು 55 ಲಕ್ಷ ಬೀದಿ ವ್ಯಾಪಾರಿಗಳಿಗೆ 91 ಸಾವಿರ ಕೋಟಿ ರೂ ಸಾಲವನ್ನು ಈ ಯೋಜನೆಯಡಿ ನೀಡಲಾಗಿದೆ. ಮೇಕ್ ಇನ್ ಇಂಡಿಯಾ
ಭಾರತದಲ್ಲಿ ಉದ್ದಿಮೆ ಸ್ಥಾಪನೆಯಾಗಬೇಕು, ವಿದೇಶಿ ಉದ್ದಿಮೆಗಳು ಸಹ ಭಾರತದಲ್ಲಿ ತಮ್ಮ ಘಟಕ ಹೊಂದಬೇಕೆಂಬ ಮಹತ್ವಕಾಂಕ್ಷೆಯ ಮೇಕ್ ಇನ್ ಇಂಡಿಯಾ ಯೋಜನೆಯು ಯಶಸ್ಸಿನ ಹೆಜ್ಜೆಗಳನ್ನು ಇಡುತ್ತಿದೆ. ಇಂದು ಹಲವು ಘಟಾನುಘಟಿ ಜಾಗತಿಕ ಸಂಸ್ಥೆಗಳು ಭಾರತದಲ್ಲಿ ತಮ್ಮ ಘಟಕಗಳನ್ನು ಸ್ಥಾಪಿಸುತ್ತಿವೆ. ಇದರಿಂದ ವಿದೇಶಿ ನೇರ ಬಂಡವಾಳ ಹೂಡಿಕೆ, ಉದ್ಯೋಗ ಸೃಷ್ಟಿಸುವ ಗುರಿ ಇದೆ.