Advertisement
ಐಎಸ್‌ಟಿಇ ಮಾನದಂಡಗಳೊಂದಿಗೆ ವಿಶ್ವ ದರ್ಜೆಯ ಗುಣಮಟ್ಟದ ಶಿಕ್ಷಣಕ್ಕಾಗಿ ವಿದ್ಯಾರ್ಥಿಗಳಿಗೆ ಪ್ರವೇಶವನ್ನು ಒದಗಿಸಲು ಡಿಜಿಟಲ್ ವಿಶ್ವವಿದ್ಯಾಲಯವನ್ನು ಅಭಿವೃದ್ಧಿಪಡಿಸಲಾಗುವುದು ಎಂದು ನಿರ್ಮಲಾ ಸೀತಾರಾಮನ್ ಹೇಳಿದರು.
Related Articles
Advertisement
ವಿದ್ಯಾರ್ಥಿಗಳು, ಪ್ರಮುಖವಾಗಿ ಸರ್ಕಾರಿ ಶಾಲೆಗಳಲ್ಲಿ ಮಕ್ಕಳು ಎರಡು ವರ್ಷಗಳ ಔಪಚಾರಿಕ ಶಿಕ್ಷಣವನ್ನು ಕಳೆದುಕೊಂಡಿದ್ದಾರೆ ಎಂದ ಅವರು, ಪ್ರಾದೇಶಿಕ ಭಾಷೆಗಳಲ್ಲಿ ಉತ್ತಮ ಗುಣಮಟ್ಟದ ಇ-ಕಂಟೆಂಟ್ ಅಭಿವೃದ್ಧಿಪಡಿಸಲಾಗುವುದು ಎಂದು ಹೇಳಿದರು.
ಮಾನಸಿಕ ಆರೋಗ್ಯ ಸಮಾಲೋಚನೆಗಾಗಿ ರಾಷ್ಟ್ರೀಯ ಟೆಲಿ-ಮೆಂಟಲ್ ಆರೋಗ್ಯ ಕಾರ್ಯಕ್ರಮವನ್ನು ಪ್ರಾರಂಭಿಸಲಾಗುವುದು. ಈ ಕಾರ್ಯಕ್ರಮಕ್ಕೆ ಐಐಟಿ ಬೆಂಗಳೂರು ತಾಂತ್ರಿಕ ಬೆಂಬಲವನ್ನು ನೀಡುತ್ತದೆ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಘೋಷಣೆ ಮಾಡಿದರು.
ನಾಲ್ಕನೇ ಬಜೆಟ್ ಮಂಡನೆ ಮಾಡುತ್ತಿರುವ ಸಚಿವೆ ನಿರ್ಮಲಾ ಸೀತಾರಾಮನ್ ಅವರ ಈ ಬಾರಿಯ ಬಜೆಟ್ 39.5 ಲಕ್ಷ ಕೋಟಿ ರೂ. ಗಾತ್ರದ್ದಾಗಿದೆ.
ಇದನ್ನೂ ಓದಿ: ದೇಶದ ಐದು ನದಿ ಜೋಡಣೆಗೆ ಬಜೆಟ್ ನಲ್ಲಿ ಅಸ್ತು: 44,605 ಕೋಟಿ ರೂ ಅನುದಾನ
ಇದನ್ನೂ ಓದಿ: ಬಜೆಟ್ 2022: ಮಾನಸಿಕ ಆರೋಗ್ಯ ವರ್ಧನೆಗೆ ರಾಷ್ಟ್ರೀಯ ಟೆಲಿ-ಮೆಂಟಲ್ ಆರೋಗ್ಯ ಕಾರ್ಯಕ್ರಮ ಘೋಷಣೆ