ಮುಂಬಯಿ : ಸಂಸತ್ತಿನಲ್ಲಿ ಇಂದು ಮಂಡಿಸಲ್ಪಟ್ಟ 2018ರ ಕೇಂದ್ರ ಬಜೆಟ್ ಶೇರು ಮಾರುಕಟ್ಟೆಯ ನಿರೀಕ್ಷೆಗಳನ್ನು ಹುಸಿ ಮಾಡಿದೆ. ಅಂತೆಯೇ ಮುಂಬಯಿ ಶೇರು ಇಂದು ಕುಸಿತವನ್ನು ಕಂಡಿದೆ.
ಮುಂಬಯಿ ಶೇರು ಪೇಟೆಯ ಸೆನ್ಸೆಕ್ಸ್ ಇಂದಿನ ಬಜೆಟ್ ವಹಿವಾಟಿನ ದಿನಾಂತ್ಯಕ್ಕೆ 58.36 ಅಂಕಗಳ ನಷ್ಟವನ್ನು ಅನುಭವಿಸಿ 35,906.66 ಅಂಕಗಳ ಮಟ್ಟದಲ್ಲಿ ದಿನದ ವಹಿವಾಟನ್ನು ನಿರಾಶಾದಾಯಕವಾಗಿ ಕೊನೆಗೊಳಿಸಿತು.
ಇದೇ ರೀತಿ ರಾಷ್ಟ್ರೀಯ ಶೇರು ಮಾರುಕಟ್ಟೆಯ ನಿಫ್ಟಿ ಸೂಚ್ಯಂಕ 10.80 ಅಂಕಗಳ ನಷ್ಟಕ್ಕೆ ಗುರಿಯಾಗಿ ದಿನದ ವಹವಾಟನ್ನು 11,016.90 ಅಂಕಗಳ ಮಟ್ಟದಲ್ಲಿ ಕೊನೆಗೊಳಿಸಿತು.
ಒಂದು ಲಕ್ಷ ಮೀರುವ ದೀರ್ಘಾವಧಿಯ ಸ್ಟಾಕ್ ಮಾರ್ಕೆಟ್ ಲಾಭದ ಮೇಲೆ ಶೇ.10 ತೆರಿಗೆಯನ್ನು ಇಂದಿನ ಕೇಂದ್ರ ಬಜೆಟ್‌ನಲ್ಲಿ ಹೇರಲಾಗಿರುವದೇ ಶೇರು ಮಾರುಕಟ್ಟೆಯ ನಿರಾಶೆಗೆ ಕಾರಣವಾಯಿತು.
ಇದನ್ನು ಅನುಸರಿಸಿ ಸಾಂಸ್ಥಿಕ ಹೂಡಿಕೆದಾರರು ದೊಡ್ಡ ಪ್ರಮಾಣದಲ್ಲಿ ಶೇರುಗಳ ಮಾರಾಟಕ್ಕೆ ಮುಂದಾದಾದರು. ಪರಿಣಾವಾಗಿ ಒಂದು ಹಂತದಲ್ಲಿ ಸೆನ್ಸೆಕ್ಸ್ 400ಕ್ಕೂ ಅಧಿಕ ಅಂಕಗಳ ನಷ್ಟಕ್ಕೆ ಗುರಿಯಾಯಿತು. ಇಂದಿನ ಟಾಪ್ ಗೇನರ್‌ಗಳು: ಮಹೀಂದ್ರ, ಈಶರ್ ಮೋಟರ್, ಬಜಾಜ್ ಫಿನಾನ್ಸ್, ಲಾರ್ಸನ್.