Advertisement

Budget 2024; ಈಶಾನ್ಯ ರಾಜ್ಯಗಳಲ್ಲಿ 100 ಅಂಚೆ ಪಾವತಿ ಬ್ಯಾಂಕ್‌

08:35 PM Jul 23, 2024 | Team Udayavani |

ನವದೆಹಲಿ: ಈಶಾನ್ಯ ರಾಜ್ಯಗಳಲ್ಲಿ ಹೊಸದಾಗಿ 100 ಅಂಚೆ ಪಾವತಿ ಬ್ಯಾಂಕ್‌ (ಐಪಿಪಿಬಿ) ಸ್ಥಾಪಿಸುವುದಾಗಿ ಕೇಂದ್ರ ಸರ್ಕಾರ ಘೋಷಿಸಿದೆ.

Advertisement

ಬಜೆಟ್‌ನಲ್ಲಿ ಈ ಘೋಷಣೆ ಮಾಡಿದ ನಿರ್ಮಲಾ ಸೀತಾರಾಮನ್‌ ಅವರು, ದೇಶದ ಈಶಾನ್ಯ ರಾಜ್ಯಗಳಲ್ಲಿ 100 ಇಂಡಿಯಾ ಪೋಸ್ಟ್‌ ಪೇಮೆಂಟ್ಸ್‌ ಬ್ಯಾಂಕ್‌ ಶಾಖೆ ತೆರೆಯುವುದಾಗಿ ಹೇಳಿದರು. ಈಗಾಗಲೇ ದೇಶಾದ್ಯಂತ ಕೋಟ್ಯಂತರ ಪೋಸ್ಟ್‌ ಪೇಮೆಂಟ್ಸ್‌ ಬ್ಯಾಂಕ್‌ ಖಾತೆಗಳು ಕಾರ್ಯನಿರ್ವಹಿಸುತ್ತಿವೆ. ಸದ್ಯ ದೇಶದಲ್ಲಿ 8 ಕೋಟಿಗೂ ಅಧಿಕ ಗ್ರಾಹಕರಿದ್ದು ಹೊಸ ಮೈಲುಗಲ್ಲು ಸ್ಥಾಪನೆಯಾಗಿದೆ.

ಕೇಂದ್ರ ಸರ್ಕಾರ 2018ರ ಸೆಪ್ಟೆಂಬರ್‌ನಲ್ಲಿ ಇಂಡಿಯಾ ಪೋಸ್ಟ್‌ ಪೇಮೆಂಟ್ಸ್‌ ಬ್ಯಾಂಕ್‌ ಆರಂಭಿಸಿದ್ದು 1.36 ಲಕ್ಷ ಶಾಖೆಗಳು ಕಾರ್ಯನಿರ್ವಹಿಸುತ್ತಿವೆ. ಗ್ರಾಮೀಣ ಜನರ ಆರ್ಥಿಕ ಸಬಲೀಕರಣಕ್ಕಾಗಿ ಈ ಯೋಜನೆ ಜಾರಿಗೊಳಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next