ನವದೆಹಲಿ: ಕೇಂದ್ರ ಸರ್ಕಾರ ಬುಧವಾರ (ಫೆ.01) ಲೋಕಸಭೆಯಲ್ಲಿ ಮಂಡಿಸಿದ್ದ 2023-24ನೇ ಸಾಲಿನ ಬಜೆಟ್ ನಲ್ಲಿ ಅಫ್ಘಾನಿಸ್ತಾನದ ಅಭಿವೃದ್ಧಿಗಾಗಿ 200 ಕೋಟಿ ರೂಪಾಯಿ ನೆರವು ನೀಡುವುದಾಗಿ ಘೋಷಿಸಿದೆ ಎಂದು ವರದಿ ತಿಳಿಸಿದೆ.
ಇದನ್ನೂ ಓದಿ:ನೇಪಾಳದಿಂದ ಅಯೋಧ್ಯೆಗೆ ಬಂದ ಅಪರೂಪದ, 60 ಮಿಲಿಯನ್ ವರ್ಷಗಳಷ್ಟು ಹಳೆಯ ಬೃಹತ್ ಸಾಲಿಗ್ರಾಮ ಶಿಲೆ
ಅಫ್ಘಾನಿಸ್ತಾನಕ್ಕೆ 200 ಕೋಟಿ ರೂಪಾಯಿ ನೆರವು ನೀಡಿರುವ ಭಾರತದ ನಿರ್ಧಾರವನ್ನು ತಾಲಿಬಾನ್ ಸ್ವಾಗತಿಸಿದ್ದು, ಇದು ಉಭಯ ದೇಶಗಳ ನಡುವಿನ ಸಂಬಂಧವನ್ನು ಮತ್ತು ವಿಶ್ವಾಸವನ್ನು ಇನ್ನಷ್ಟು ಹೆಚ್ಚಿಸಲು ಕೊಡುಗೆ ನೀಡುತ್ತದೆ ಎಂದು ತಾಲಿಬಾನ್ ಹೇಳಿದೆ.
ಭಾರತದಿಂದ ಅಫ್ಘಾನಿಸ್ತಾನ ಅಭಿವೃದ್ಧಿಗೆ ನೆರವು ನೀಡಿರುವುದನ್ನು ನಾವು ಪ್ರಶಂಸಿಸುತ್ತೇವೆ ಎಂದು ತಾಲಿಬಾನ್ ನ ಸುಹೈಲ್ ಶಾಹೀನ್ ಜೀ ಮೀಡಿಯಾಕ್ಕೆ ತಿಳಿಸಿರುವುದಾಗಿ ವರದಿ ಮಾಡಿದೆ.
Related Articles
ಅಫ್ಘಾನಿಸ್ತಾನದಲ್ಲಿ ಭಾರತದ ಆರ್ಥಿಕ ನೆರವಿನ ಹಲವು ಯೋಜನೆಗಳು ನಡೆಯುತ್ತಿದೆ. ಒಂದು ವೇಳೆ ಭಾರತ ಈ ಅಭಿವೃದ್ಧಿ ಕಾರ್ಯವನ್ನು ಪುನರಾರಂಭಿಸಿದರೆ ಇದರಿಂದ ಉಭಯ ದೇಶಗಳ ನಡುವಿನ ಸಂಬಂಧ ಇನ್ನಷ್ಟು ವೃದ್ಧಿಯಾಗಲಿದೆ. ಅಲ್ಲದೇ ಅಪನಂಬಿಕೆಯನ್ನು ಹೋಗಲಾಡಿಸಲಿದೆ ಎಂದು ಶಾಹೀನ್ ತಿಳಿಸಿರುವುದಾಗಿ ವರದಿ ಹೇಳಿದೆ.
ಪ್ರಸ್ತುತ ಅಫ್ಘಾನಿಸ್ತಾನದಲ್ಲಿ ಜನರು ಬಡತನ ಮತ್ತು ನಿರುದ್ಯೋಗ ಸಮಸ್ಯೆಯನ್ನು ಎದುರಿಸುತ್ತಿದ್ದಾರೆ. ಈ ನಿಟ್ಟಿನಲ್ಲಿ ಅಫ್ಘಾನಿಸ್ತಾನಕ್ಕೆ ಇನ್ನಷ್ಟು ಹೆಚ್ಚಿನ ಅಭಿವೃದ್ಧಿ ಕಾರ್ಯಗಳು ನಡೆಯಬೇಕಾದ ಅಗತ್ಯತೆ ಇದೆ ಎಂದು ತಿಳಿಸಿದೆ.