Advertisement

ಇಂದು ಮನ್ನಾ ಬಜೆಟ್‌?

06:00 AM Jul 05, 2018 | Team Udayavani |

ಬೆಂಗಳೂರು: ಹಣಕಾಸು ಖಾತೆಯ ಜವಾಬ್ದಾರಿಯೂ ಹೊತ್ತಿರುವ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಅವರು ಗುರುವಾರ ಬೆಳಗ್ಗೆ 11.30ಕ್ಕೆ ಸಮ್ಮಿಶ್ರ ಸರ್ಕಾರದ ಚೊಚ್ಚಲ ಬಜೆಟ್‌ 
ಮಂಡಿಸುತ್ತಿದ್ದಾರೆ. ಇದು ಬಜೆಟ್‌ ಮಾತ್ರವಲ್ಲ. ಕಾಂಗ್ರೆಸ್‌- ಜೆಡಿಎಸ್‌ ಸಮ್ಮಿಶ್ರ ಸರ್ಕಾರದ ಮುಂದಿನ ಐದು ವರ್ಷದ ಅಭಿವೃದ್ಧಿಯ ಮುನ್ನೋಟವೂ ಒಳಗೊಂಡಿರಲಿದೆ ಎಂದು ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಯವರೇ ಹೇಳಿದ್ದಾರೆ.

Advertisement

ರೈತರ ಸಾಲ ಮನ್ನಾ
ಐದು ಎಕರೆವರೆಗೆ ಜಮೀನು ಹೊಂದಿರುವ ರೈತರ ಸಹಕಾರ ಬ್ಯಾಂಕ್‌ ಹಾಗೂ ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿನ ಬೆಳೆ ಸಾಲ ಮನ್ನಾ ಘೋಷಣೆ ಮಾಡುವ ನಿರೀಕ್ಷೆಯಿದೆ.  ಈಗಾಗಲೇ ಸಿದ್ಧವಾಗಿರುವ ಕರಡು ಮಾರ್ಗಸೂಚಿ ಪ್ರಕಾರ ಮೊದಲ ಹಂತದಲ್ಲಿ ಕನಿಷ್ಠ ಎರಡು ಲಕ್ಷ ರೂ.ವರೆಗೆ ಸಾಲ ಮನ್ನಾ ಆಗಲಿದೆ. ಸರ್ಕಾರಕ್ಕೆ ಇದರಿಂದ 25 ರಿಂದ 30 ಸಾವಿರ ಕೋಟಿ ರೂ. ಹೊರೆ ಬೀಳುವ ಸಾಧ್ಯತೆಯಿದೆ. ಸಾಲ ಮನ್ನಾ ಜತೆಗೆ ಹೊಸ ಕೃಷಿ ನೀತಿ ಜಾರಿಯಾಗಲಿದೆ.

ಉಚಿತ ಬಸ್‌ ಪಾಸ್‌ ಎಲಿÅಗೂ ಸಿಗುತ್ತಾ?
ಶಾಲಾ-ಕಾಲೇಜು ವಿದ್ಯಾರ್ಥಿಗಳಿಗೆ ಉಚಿತ ಬಸ್‌ ಪಾಸ್‌ ಘೋಷಣೆಯೂ ಬಜೆಟ್‌ನಲ್ಲಿ ಆಗಲಿದೆ. ಪ್ರಸ್ತುತ ಎಸ್‌ಸಿ-ಎಸ್‌ಟಿ ವಿದ್ಯಾರ್ಥಿಗಳಿಗೆ ಮಾತ್ರ ಇರುವ ಸೌಲಭ್ಯ ಎಲ್ಲ ವರ್ಗದ ವಿದ್ಯಾರ್ಥಿಗಳಿಗೂ ವಿಸ್ತರಣೆಯಾಗಲಿದೆ. ಇದರಿಂದ ಸರ್ಕಾರಕ್ಕೆ ವಾರ್ಷಿಕ 1000 ಕೋಟಿ ರೂ. ಹೆಚ್ಚುವರಿ ಹೊರೆ ಬೀಳುವ ನಿರೀಕ್ಷೆಯಿದೆ.

ಮಾಸಾಶನ ಯಾರಿಗೆಲ್ಲಾ ಸಿಗಬಹುದು ?
ಬಡ ಕುಟುಂಬದ ಗರ್ಭಿಣಿಯರಿಗೆ ಆರು ತಿಂಗಳು ಮಾಸಾಶನ ಘೋಷಣೆಯಾಗುವ ಸಾಧ್ಯತೆಯಿದೆ. ಹಿರಿಯ ನಾಗರಿಕರು ಹಾಗೂ 25 ವರ್ಷದ ದಾಟಿದ ಬಡ ಮಹಿಳೆಯರಿಗೆ ಜೀವನ ನಿರ್ವಹಣೆಗಾಗಿ ಎರಡು ಸಾವಿರ ರೂ. ಮಾಸಾಶನ ಪ್ರಕವಾಗುವ ನಿರೀಕ್ಷೆಯಿದೆ. ಇವೆಲ್ಲವೂ ಸಮಾಜ ಕಲ್ಯಾಣ ಇಲಾಖೆ ವ್ಯಾಪ್ತಿಯ ಅನುದಾನದಲ್ಲಿ ಹೊಂದಾಣಿಕೆಯಾಗಲಿದೆ. ಹೀಗಾಗಿ, ಇದರಿಂದ ಹೆಚ್ಚುವರಿ ಹೊರೆ ಬೀಳುವುದಿಲ್ಲ ಎಂದು ಹೇಳಲಾಗಿದೆ.

ಉದ್ಯೋಗ ಸೃಷ್ಟಿ ಹೇಗೆ ?
ಯುವ ಸಮೂಹಕ್ಕೆ ಉದ್ಯೋಗ ಸೃಷ್ಟಿಗಾಗಿ ಜಿಲ್ಲಾ ಮಟ್ಟದಲ್ಲಿ ಜಿಲ್ಲಾಧಿಕಾರಿಗಳು, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ, ಜಿಲ್ಲಾ ಉದ್ಯೋಗ ಮತ್ತು ತರಬೇತಿ ಇಲಾಖೆ ಅಧಿಕಾರಿ ಒಳಗೊಂಡ ಸಮಿತಿ ರಚನೆ. ಖಾಸಗಿ ಉದ್ಯಮಿಗಳು, ಕಾರ್ಖಾನೆ ಮಾಲೀಕರ ಜತೆ  ಒಪ್ಪಂದ ಮಾಡಿಕೊಂಡು ಕಾಲೇಜು ಹಂತದಲ್ಲೇ ಸಂದರ್ಶನ ನಡೆಸಿ ಶಿಕ್ಷಣ ಮುಗಿದ ತಕ್ಷಣ ಉದ್ಯೋಗಕ್ಕೆ ಸೇರುವ ವ್ಯವಸ್ಥೆ ಜಾರಿಗೊಳಿಸುವುದು. ಇದಕ್ಕಾಗಿ ಶಿಕ್ಷಣದಲ್ಲಿ ಕೌಶಲ್ಯ ಸಹಿತ ವೃತ್ತಿ ತರಬೇತಿ ಕಡ್ಡಾಯಗೊಳಿಸುವುದು.

Advertisement

ನೀರಾವರಿಗೆ ಕೊಡುಗೆ ಏನು?
ಅಂತರ್ಜಲ ವೃದ್ಧಿ ನಿಟ್ಟಿನಲ್ಲಿ ಕೆರೆ ತುಂಬಿಸುವ ಯೋಜನೆ ರಾಜ್ಯಾದ್ಯಂತ ವಿಸ್ತರಿಸುವ ಘೊಷಣೆ ಬಜೆಟ್‌ನಲ್ಲಿ ಹೊರ ಬೀಳಲಿದೆ. ಜತೆಗೆ ಎತ್ತಿನಹೊಳೆ, ಭದ್ರಾ ಮೇಲ್ದಂಡೆ, ಮೇಕೆ ದಾಟು ಬಳಿ ಅಣೆಕಟ್ಟು ನಿರ್ಮಾಣ ಸೇರಿದಂತೆ ಕಾವೇರಿ, ಕೃಷ್ಣಾ ಕಣಿವೆಯಲ್ಲಿ ಐದು ವರ್ಷಗಳಲ್ಲಿ ಕೈಗೊಳ್ಳುವ ಯೋಜನೆಗಳ ಕಾರ್ಯಯೋಜನೆ ಬಜೆಟ್‌ನಲ್ಲಿ ಘೋಷಣೆಯಾಗಲಿದೆ.

ಚೊಚ್ಚಲ ಬಜೆಟ್‌
ಎಚ್‌.ಡಿ.ಕುಮಾರಸ್ವಾಮಿಯವರು ಇದೇ ಮೊದಲ ಬಾರಿಗೆ ಹಣಕಾಸು ಸಚಿವರೂ ಆಗಿದ್ದಾರೆ. ಹೀಗಾಗಿ, ಸಹಜವಾಗಿ ಅವರ ಬಜೆಟ್‌ ಕುರಿತು ರಾಜಕೀಯ ವಲಯವಷ್ಟೇ ಅಲ್ಲದೆ ಉದ್ಯಮ, ಕೈಗಾರಿಕೆ, ಐಟಿ-ಬಿಟಿ ವಲಯಗಳಲ್ಲೂ ಕುತೂಹಲ ಮೂಡಿಸಿದೆ. ಬಜೆಟ್‌ ಪೂರ್ವಭಾವಿಯಾಗಿ ಎಫ್ಕೆಸಿಸಿಐ, ಕಾಸಿಯಾ ಸೇರಿದಂತೆ ಎಲ್ಲ ವರ್ಗದ ಪ್ರಮುಖರೊಂದಿಗೆ ಸುದೀರ್ಘ‌ ಸಮಾಲೋಚನೆ ನಡೆಸಿದ್ದಾರೆ. ಚುನಾವಣೆಗೆ ಮುನ್ನವೂ ಸಂವಾದ ನಡೆಸಿ ಜನಸಾಮಾನ್ಯರ ಬೇಡಿಕೆಗಳ ಪಟ್ಟಿ ಮಾಡಿಕೊಂಡಿದ್ದಾರೆ. ಹೀಗಾಗಿ, ರಾಜ್ಯದ ಸಮಗ್ರ ಅಭಿವೃದ್ಧಿಯ ನೀಲ-ನಕ್ಷೆ ಬಜೆಟ್‌ನಲ್ಲಿ ಇರುತ್ತಾ ಎಂಬುದು ಕಾದು ನೋಡಬೇಕಾಗಿದೆ.
2.15 ಲಕ್ಷ ಕೋಟಿ ಸಂಭಾವ್ಯ ಬಜೆಟ್‌ ಗಾತ್ರ

Advertisement

Udayavani is now on Telegram. Click here to join our channel and stay updated with the latest news.

Next