ಹೊಸದಿಲ್ಲಿ: ಪಶ್ಚಿಮ ಬಂಗಾಳದ ಮಾಜಿ ಮುಖ್ಯಮಂತ್ರಿ ಮತ್ತು ಹಿರಿಯ ಸಿಪಿಐ(ಎಂ) ನಾಯಕ ಬುದ್ಧದೇವ್ ಭಟ್ಟಾಚಾರ್ಯ ಪದ್ಮಭೂಷಣ ಪ್ರಶಸ್ತಿ ಸ್ವೀಕರಿಸಲು ನಿರಾಕರಿಸಿದ್ದಾರೆ.
“ನನಗೆ ಈ ಪ್ರಶಸ್ತಿಯ ಬಗ್ಗೆ ಏನೂ ತಿಳಿದಿಲ್ಲ, ಯಾರೂ ನನಗೆ ಈ ಬಗ್ಗೆ ಏನನ್ನೂ ಹೇಳಿಲ್ಲ, ಅವರು ನನಗೆ ಪದ್ಮಭೂಷಣ ನೀಡಲು ನಿರ್ಧರಿಸಿದ್ದರೆ, ನಾನು ಅದನ್ನು ಸ್ವೀಕರಿಸಲು ನಿರಾಕರಿಸುತ್ತೇನೆ” ಎಂದು ಹೇಳಿದ್ದಾರೆ.
ಸಿಪಿಐ (ಎಂ) ಮೂಲಗಳ ಪ್ರಕಾರ, ಇದು ಭಟ್ಟಾಚಾರ್ಯ ಮತ್ತು ಪಕ್ಷದ ಎರಡೂ ನಿರ್ಧಾರವಾಗಿತ್ತು. ಪಕ್ಷವು ಟ್ವಿಟರ್‌ನಲ್ಲಿ ಬರೆದು ಹೀಗೆ ಬರೆದಿದೆ. “ಪದ್ಮಭೂಷಣ ಪ್ರಶಸ್ತಿಗೆ ನಾಮನಿರ್ದೇಶನಗೊಂಡಿದ್ದ ಬುದ್ಧದೇವ್ ಭಟ್ಟಾಚಾರ್ಯ ಅವರು ಅದನ್ನು ಸ್ವೀಕರಿಸಲು ನಿರಾಕರಿಸಿದ್ದಾರೆ. ರಾಜ್ಯದಿಂದ ಅಂತಹ ಪ್ರಶಸ್ತಿಗಳನ್ನು ನಿರಾಕರಿಸುವಲ್ಲಿ ಸಿಪಿಐ(ಎಂ) ನೀತಿಯು ಸ್ಥಿರವಾಗಿದೆ. ನಮ್ಮ ಕೆಲಸ ಜನರು, ಪ್ರಶಸ್ತಿಗಳಿಗಾಗಿ ಅಲ್ಲ ಎಂದಿದೆ.
ಇದನ್ನೂ ಓದಿ:ರಾಜ್ಯದ ಐವರು ಪದ್ಮಶ್ರೀಗೆ ಭಾಜನರು; ವಿಟ್ಲದ ಅಮೈ ಮಹಾಲಿಂಗ ನಾಯ್ಕರಿಗೂ ಪ್ರಶಸ್ತಿ
Related Articles
ಗೃಹ ವ್ಯವಹಾರಗಳ ಸಚಿವಾಲಯವು ಜನವರಿ 25 ರಂದು ಈ ವರ್ಷ ಪದ್ಮ ಪ್ರಶಸ್ತಿಗಳನ್ನು ನೀಡಲಾಗುವ ವ್ಯಕ್ತಿಗಳ ಹೆಸರಿನ ಪಟ್ಟಿಯನ್ನು ಹಂಚಿಕೊಂಡಿದೆ. ವಿವಿಧ ಕ್ಷೇತ್ರಗಳ 128 ವ್ಯಕ್ತಿಗಳಿಗೆ ಪದ್ಮ ಪ್ರಶಸ್ತಿ ನೀಡಿ ಗೌರವಿಸಲಾಗುವುದು.
ಪಟ್ಟಿಯು ನಾಲ್ಕು ಪದ್ಮವಿಭೂಷಣ, 17 ಪದ್ಮಭೂಷಣ ಮತ್ತು 107 ಪದ್ಮಶ್ರೀ ಪ್ರಶಸ್ತಿಗಳನ್ನು ಒಳಗೊಂಡಿದೆ.