Advertisement
ಪಟ್ಟಣದ ಅಂಬೇಡ್ಕರ್ ಭವನದಲ್ಲಿ ಬುದ್ಧ ಧಮ್ಮ ಸಮಿತಿ ವತಿಯಿಂದ ಹಮ್ಮಿಕೊಂಡಿದ್ದ 2566ನೇ ಬುದ್ಧ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ,ಇಡೀ ಜಗತ್ತು ಬುದ್ಧನ ಮಾರ್ಗವನ್ನು ಅನುಸರಿಸುತ್ತಿದ್ದು,ಇದರಿಂದ ಶಾಂತಿ, ನೆಮ್ಮದಿ ಮತ್ತು ಕರುಣೆ ನೋಡಲುಸಾಧ್ಯವಾಗಿದೆ. ದೇವನಹಳ್ಳಿಯಲ್ಲಿ ಬುದ್ಧ ವಿಹಾರಸ್ಥಾಪನೆಗೆ 2 ಎಕರೆ ಸೂಕ್ತ ಜಾಗ ನೀಡಲು ತಹಶೀಲ್ದಾರ್‌ಗೆಸೂಚನೆ ನೀಡಲಾಗಿದೆ. ಶೀಘ್ರದಲ್ಲಿ ಅಂಬೇಡ್ಕರ್‌ಭವನದಲ್ಲಿರುವ ಎಲ್ಲ ಸಮಸ್ಯೆ ಬಗೆಹರಿಸಿ ಮೂಲಭೂತ ಸೌಕರ್ಯ ನೀಡಲು ಗಮನ ಹರಿಸಲಾಗುವುದು. ಅದಕ್ಕೆಈಗಾಗಲೇ ಕಮಿಟಿ ರಚನೆ ಮಾಡಲಾಗಿದೆ ಎಂದರು.
Related Articles
Advertisement
ಸಂಶೋಧನಾ ಕೇಂದ್ರ ಸ್ಥಾಪನೆ ಮಾಡಿ: ಸರ್ಕಾರಿ ಪದವಿ ಕಾಲೇಜಿನ ಪ್ರಾಧ್ಯಪಕ ಶಫಿ ಅಹಮ್ಮದ್ ಮಾತನಾಡಿ, ಜಿಲ್ಲೆಯನ್ನು ನಂದಿ ಮಂಡಲವೆಂದು ಇತಿಹಾಸದಲ್ಲಿ ಗುರುತಿಸಲಾಗುತಿತ್ತು. ದೊಡ್ಡಬಳ್ಳಾಪುರ ತಾಲೂಕಿನ ರಾಜಘಟ್ಟದಲ್ಲಿ 2500 ವರ್ಷಗಳ ಹಿಂದೆ ಅಸ್ತಿತ್ವದಲ್ಲಿದ್ದ ಚೈತ್ಯ ಹಾಗೂ ವಿಹಾರ ಮಂದಿರಗಳು ಇದ್ದ ಕುರುಹುಗಳಿವೆ. ಪಂಚಸ್ತಂಭಗಳ ಸ್ತೂಪಗಳು ಅಲ್ಲಿದ್ದವೂ. ಬೌದ್ಧ ಧರ್ಮದ ಕುರಿತು ಜಿಲ್ಲೆಯಲ್ಲಿ ಸಂಶೋಧನಾ ಕೇಂದ್ರ ಸ್ಥಾಪನೆ ಮಾಡಬೇಕು. ಸಮಗ್ರ ಅಧ್ಯಯನಕ್ಕೆ ಸರ್ಕಾರ ಅವಕಾಶ ಮಾಡಿಕೊಡಬೇಕೆಂದು ಒತ್ತಾಯಿಸಿದರು.
ತಹಶೀಲ್ದಾರ್ ಶಿವರಾಜ್, ಸಮಾಜ ಕಲ್ಯಾಣ ಇಲಾಖೆ ಪ್ರಭಾರಿ ಉಪನಿರ್ದೇಶಕ ಉಮಾಪತಿ, ಮೌಲ್ವಿ ಅಬ್ದುಲ್ ಜಬ್ಬರ್, ವಕೀಲ ಎಸ್. ಸಿದ್ಧಾರ್ಥ, ವೈದ್ಯ ಡಾ.ಜ್ಞಾನ್ ಕುಮಾರ್, ಬೌದ್ಧ ಬಿಕ್ಕು ಜ್ಞಾನಲೋಕ ಬತಾಂಜೆ ಮುಖಂಡ ಎನ್. ನಾರಾಯಣಸ್ವಾಮಿ, ಕುಂದಾಣ ಕೆ.ವಿ.ಸ್ವಾಮಿ, ಸಿ.ಮುನಿಯಪ್ಪ, ಅಕ್ಕಯಮ್ಮ, ಶ್ರೀನಿವಾಸ್ ದನಿ, ಜಂಗಮಕೋಟೆ ಕೃಷ್ಣಪ್ಪ, ವಕೀಲ ಮಧು, ಜೊನ್ನಹಳ್ಳಿ ಜಯರಾಮ್, ದೊಡ್ಡ ಚಿಕ್ಕಣ್ಣ, ಬ್ಯಾಂಕ್ ನಾರಾಯಣ್ಣಪ್ಪ, ನಾಗೇನಹಳ್ಳಿ ಕೃಷ್ಣಪ್ಪ, ಮಾಳಿಗೇನಹಳ್ಳಿ ಪ್ರಕಾಶ್, ಕುಂದಾಣ ಮುನಿಶಾಮಪ್ಪ,ಆಲೂರು ದುದ್ದನಹಳ್ಳಿ ಈರಣ್ಣ, ಬಾಲಪ್ಪ, ಕೊಯಿರಾ ಮುನಿನರಸಪ್ಪ, ಕಾರಹಳ್ಳಿ ಮುನಿರಾಜು, ಹೊಸಕೋಟೆ ಆಂಜಿನಪ್ಪ, ರವಿಕಲಾ, ಖುದೂಸ್, ಎಚ್.ಕೆ. ವೆಂಕಟೇಶಪ್ಪ ಹಾಗೂ ಇತರರು ಇದ್ದರು.
ಬುದ್ಧನ ಪಂಚಶೀಲ ತತ್ವ ಅಳವಡಿಸಿಕೊಳ್ಳಿ : ಭಾರತೀಯರು ಈ ನೆಲದ ಮೂಲ ಧರ್ಮವಾದಬೌದ್ಧ ಧರ್ಮವನ್ನು ಅನುಸರಿಸುವುದು. ಬುದ್ಧನಪಂಚಶೀಲ ತತ್ವಗಳನ್ನು ಪ್ರತಿಯೊಬ್ಬರೂಅಳವಡಿಸಿಕೊಳ್ಳಬೇಕು. ಭಾರತದ ಎಲ್ಲಸಮಸ್ಯೆಗಳಿಗೂ ಪರಿಹಾರ ಸಿಗಲಿದೆ. ಆದ್ದರಿಂದ,ಬುದ್ಧ ಜ್ಞಾನದ ಬೆಳಕಿನಲ್ಲಿ ಮುಂದೆ ಸಾಗಬೇಕು. ಅತಿಯಾದ ಮೋಹವನ್ನು ಬಿಡಬೇಕು. ಮನುಷ್ಯರು ಸರಳ ರೀತಿಯಲ್ಲಿ ಪ್ರಕೃತಿಯನ್ನು ಅರ್ಥಮಾಡಿಕೊಂಡು ಜೀವನ ಸಾಗಿಸಬೇಕು ಎಂದು ಜಿಲ್ಲಾಧಿಕಾರಿ ಕೆ. ಶ್ರೀನಿವಾಸ್ ಹೇಳಿದರು.