Advertisement
ಜನರನ್ನು ಅವರಿಗೆ ಅನುಕೂಲವಾಗುವ ಧರ್ಮಕ್ಕೆ ಪರಿವರ್ತಿಸುವುದು ನಿಜವಾದ ರಾಜಧರ್ಮ. ಈ ನಿಟ್ಟಿನಲ್ಲಿ ಅಶೋಕ, ಬುದ್ಧ, ಬಸವರಂತೆ ಟಿಪ್ಪು ಸಹ ಅನೇಕ ಮಂದಿಯನ್ನು ಇಸ್ಲಾಂ ಧರ್ಮಕ್ಕೆ ಕರೆ ತಂದಿದ್ದಾನೆ. ಆದರೆ, ಟಿಪ್ಪು$ ಎಂದಿಗೂ ತನ್ನ ರಾಜ್ಯದ ಹಿಂದೂಗಳ ಮತ ಪರಿವರ್ತಿಸಿಲ್ಲ. ಬದಲಿಗೆ ನೆರೆಯ ರಾಜ್ಯದಲ್ಲಿ ರಾಜಾಳ್ವಿಕೆಯಲ್ಲಿದ್ದ ಜನರನ್ನು ಮತಾಂತರಗೊಳಿಸಲು ಮುಂದಾದನೇ ಹೊರತು, ಆತ ಎಂದಿಗೂ ಯಾರನ್ನೂ ಇಸ್ಲಾಂ ಧರ್ಮಕ್ಕೆ ಬರುವಂತೆ ಹೇಳಿಲ್ಲ ಎಂದು ಹೇಳಿದರು.
Related Articles
Advertisement
ಮೈಸೂರು ವಿವಿ ಪತ್ರಿಕೋದ್ಯಮ ವಿಭಾಗದ ಪ್ರಾಧ್ಯಾಪಕ ಪೊ›.ಮಹೇಶ್ ಚಂದ್ರಗುರು, ಭಾರತಾಂಭೆ ಮಾನವನ್ನು ಕಾಪಾಡಲು ಪ್ರಾಣವನ್ನೇ ಒತ್ತೆಯಾಗಿಟ್ಟ ಟಿಪ್ಪು ಸುಲ್ತಾನ್ ಎಂದಿಗೂ ಮತಾಂಧನಾಗುವುದಿಲ್ಲ. ಬದಲಿಗೆ ಪರಕೀಯರಿಗೆ ದೇಶವನ್ನು ಲೂಟಿ ಮಾಡಲು ಅವಕಾಶ ನೀಡಿದ ವೈದಿಕರು ನಿಜವಾದ ಮತಾಂಧರು ಎಂದು ಕುಟುಕಿದರು.
ಮಹಮ್ಮದ್ ಖೀಲ್ಜಿ ಸೇರಿದಂತೆ ಅನೇಕ ಪರಕೀಯರು ಹಲವು ಬಾರಿ ನಮ್ಮ ದೇಶದ ದೇವಾಲಯಗಳನ್ನು ನಾಶಪಡಿಸಿದರು. ಆದರೆ ಟಿಪ್ಪು ಸುಲ್ತಾನ್ ಶೃಂಗೇರಿ ದೇವಸ್ಥಾನವನ್ನು ರಕ್ಷಿಸಿದ. ಸಮಾಜದಲ್ಲಿ ಬ್ರಾಹ್ಮಣಿಕೆ ನೆಪದಲ್ಲಿದ್ದ ಅಸ್ಪೃಶ್ಯತೆ ಹೋಗಲಾಡಿಸಿ ಮುಕ್ತಿಗೆ ಮುಂದಾದ ಟಿಪ್ಪು ಸಾಮಾಜಿಕ ಹರಿಕಾರ ಎಂದು ಬಣ್ಣಿಸಿದರು.
ವಿಚಾರವಾದಿ ಪ್ರೊ. ಕೆ.ಎಸ್. ಭಗವಾನ್, ಮನುಸ್ಮತಿಯಲ್ಲಿ ಶೂದ್ರರೂ ಬ್ರಾಹ್ಮಣರ ಗುಲಾಮರು ಎಂದು ನಮೂದಿಸಿದ್ದಾರೆ. ಅಲ್ಲದೆ ಬ್ರಾಹ್ಮರ ಮಹಿಳೆಯರನ್ನು ಹೊರತುಪಡಿಸಿ, ಉಳಿದವರೆಲ್ಲಾ ಉಪ ಪತ್ನಿಯರು ಎಂದು ನಮೂದಿಸಿದ್ದಾರೆ. ಇಂತಹ ಮನುಸ್ಮತಿಯಿಂದ ನಾವು ಹಿಂದೂತ್ವವನ್ನು ಅರಿಯುತ್ತಿದ್ದು, ಈ ಬಗ್ಗೆ ಈಗಲಾದರೂ ಸಾಮಾಜಿಕ ಕ್ರಾಂತಿಗೆ ಮುಂದಾಗಬೇಕಿದೆ ಎಂದು ಹೇಳಿದರು.
ಟಿಪ್ಪುವಿನ ಆಸ್ಥಾನದಲ್ಲಿ 13 ಮಂದಿ ಬ್ರಾಹ್ಮರಿದ್ದು, ಎಂದಿಗೂ ಆತ ಹಿಂದೂ ವಿರೋಧಿ ಎಂದು ಹೇಳಿಲ್ಲ. ಅಲ್ಲದೆ ಆತನ ಆಳ್ವಿಕೆಯ ಯಾರೊಬ್ಬರೂ ಆತನನ್ನು ಮತಾಂಧ ಎಂದು ದೂಷಿಸಿರಲಿಲ್ಲ. ಕೆಲವು ಮನುವಾದಿಗಳ ಗುಂಪಿನಿಂದ ಇಂತಹ ಅಪಪ್ರಚಾರ ನಡೆಯುತ್ತಿದೆ ಎಂದು ತಿಳಿಸಿದರು.
ಕಾರ್ಯಕ್ರಮದ ಅಂಗವಾಗಿ ರಾಷ್ಟ್ರವಾದಿಯಾಗಿ ಟಿಪ್ಪು, ಅಭಿವೃದ್ಧಿ ಶಿಲ್ಪಿಯಾಗಿ ಟಿಪ್ಪು, ಸಮಾನತೆ ಮುತ್ಸದ್ಧಿಯಾಗಿ ಟಿಪ್ಪು, ಸಾಮಾಜಿಕ ನ್ಯಾಯದ ಹರಿಕಾರನಾಗಿ ಟಿಪ್ಪು ಎಂಬ ವಿಷಯದ ಬಗ್ಗೆ ವಿಚಾರಗೋಷ್ಠಿಗಳು ನಡೆದವು.
ಪ್ರೋ.ಶಬ್ಬೀರ್ ಮಸ್ತಾಫ, ಅಲಲ್ಹಾ ಶಿಕ್ಷಣ ಸಂಸ್ಥೆ ಮುಖ್ಯಸ್ಥ ಮೌಲಾನಾ ಅಯ್ಯೂಬ್ ಅನ್ಸಾರಿ, ದಲಿತ ವೆಲ್‌ಫೇರ್ ಟ್ರಸ್ಟ್ ಅಧ್ಯಕ್ಷ ಕಾಂತರಾಜು, ಉದ್ಯಮಿ ಎಂ.ಎಫ್.ಕಲೀಂ, ರೇವಣ್ಣ, ಮಹದೇವಮೂರ್ತಿ ಮತ್ತಿತರರಿದ್ದರು.