Advertisement
ಖಚಿತ ಮಾಹಿತಿ ಹಿನ್ನೆಲೆಯಲ್ಲಿ ಕೊಡಗು ಜಿಲ್ಲೆಯ ಕೇರಳ ಗಡಿಭಾಗ ಕುಟ್ಟ- ಇರ್ಪು ಜಂಕ್ಷನ್‌ನಲ್ಲಿ ಶನಿವಾರ ಬೆಳ್ಳಂಬೆಳಗ್ಗೆ ಕಾರ್ಯಾಚರಣೆ ನಡೆಸಿದ ಪೊಲೀಸರು ವಾಹನ ಸಹಿತ ಕಡವೆ ಮಾಂಸ, ಬೇಟೆಗೆ ಬಳಸಿದ ಆಯುಧಗಳು ಮತ್ತು ಆರು ಮಂದಿಯನ್ನು ವಶಕ್ಕೆ ಪಡೆದರು.
ಪೊನ್ನಂಪೇಟೆಯ ಮಾಪಿಳ್ಳೆ ತೋಡು ನಿವಾಸಿಗಳಾದ ಕೆ. ಬಿ. ಸಿದ್ದಿಕ್, ಎಂ. ಎಚ್. ಶಮೀರ್, ಎ. ಯು. ಸಮೀರ್, ನಾಪೋಕ್ಲುವಿನ ಕುಂಜಿಲ ಗ್ರಾಮದ ಕೆ. ಇ. ಇಸ್ಮಾಯಿಲ್, ಕೆ. ಎ. ಯೂಸಫ್ ಹಾಗೂ ಕೆ. ಎ. ಮಹಮ್ಮದ್ ಬಂಧಿತರು. ಕಾರು. ಟೆಂಪೋ ವಶ
ಬಂಧಿತರಿಂದ ಕೃತ್ಯಕ್ಕೆ ಬಳಸಿದ ಒಂಟಿ ನಳಿಕೆಯ ಒಂದು ಬಂದೂಕು, ಇನ್ನಿತರ ಆಯುಧಗಳು, ಸುಮಾರು 150 ಕೆ.ಜಿ. ಕಡವೆ ಮಾಂಸ, ಮಾರುತಿ ಸೆಲೆರಿಯಾ ಕಾರು ಹಾಗೂ ಗೂಡ್ಸ್ ವಾಹನವನ್ನು ವಶಕ್ಕೆ ಪಡೆಯಲಾಗಿದೆ. ಕುಟ್ಟ ಠಾಣೆಯಲ್ಲಿ ಮೊಕದ್ದಮೆ ದಾಖಲಾಗಿದೆ.
Related Articles
Advertisement
ಬಹುಮಾನ ಘೋಷಣೆಬೇಟೆಗಾರರನ್ನು ಬಂಧಿಸಿದ ತಂಡಕ್ಕೆ ವರಿಷ್ಠಾಧಿಕಾರಿಗಳು 10 ಸಾ. ರೂ. ನಗದು ಬಹುಮಾನ ಘೋಷಿಸಿದರು.