ಕೊಯಮತ್ತೂರು: ಟಿಎನ್‌ಸಿಎ ಇಲೆವನ್ ವಿರುದ್ಧ ನಡೆಯುತ್ತಿರುವ ಬುಚ್ಚಿಬಾಬು ಆಹ್ವಾನಿತ ಕ್ರಿಕೆಟ್ ಕೂಟದಲ್ಲಿ ಮುಂಬಯಿ ತಂಡವು ಗೆಲ್ಲಲು 510 ರನ್ ಗಳಿಸುವ ಕಠಿನ ಗುರಿ ಪಡೆದಿದೆ.
ಟಿಎನ್‌ಸಿಎ ತಂಡ ಮೊದಲ ಇನ್ನಿಂಗ್ಸ್‌ನಲ್ಲಿ 379 ರನ್ ಗಳಿಸಿತ್ತು. ಇದಕ್ಕುತ್ತರವಾಗಿ ಮುಂಬಯಿ ಕೇವಲ 156 ರನ್ನಿಗೆ ಆಲೌಟಾಯಿತು. 223 ರನ್ ಮೊದಲ ಇನ್ನಿಂಗ್ಸ್ ಮುನ್ನಡೆ ಪಡೆದ ಟಿಎನ್‌ಸಿಎ ತನ್ನ ದ್ವಿತೀಯ ಇನ್ನಿಂಗ್ಸ್‌ನಲ್ಲಿ 286 ರನ್ ಗಳಿಸಿತು. ಇದರಿಂದಾಗಿ ಮುಂಬಯಿ ಗೆಲ್ಲಲು 510 ರನ್ ಗಳಿಸುವ ಅವಕಾಶ ಪಡೆದಿದೆ.
ಕ್ಷಮೆಯಾಚಿಸಿದ ಸೂರ್ಯಕುಮಾರ್
ಸೀಮಿತ ಓವರ್‌ಗಳ ಕ್ರಿಕೆಟ್‌ನಲ್ಲಿ ಆಕ್ರಮಣಕಾರಿ ಬ್ಯಾಟಿಂಗ್‌ಗೆ ಹೆಸರುವಾಸಿಯಾಗಿರುವ ಸೂರ್ಯ ಕುಮಾರ್ ಬೌಲಿಂಗ್ ಮಾಡುವ ವೇಳೆ ಹತಾಶೆಗೊಂಡು ಅಪಾಯಕಾರಿ ಎನಿಸುವಂತೆ ಬೌಲಿಂಗ್ ಮಾಡಿದರು. ಆಫ್ ಸ್ಪಿನ್ ಮಾಡುತ್ತಿದ್ದ ಅವರು ಫುಲ್ ಟಾಸ್ ಬೌಲ್ ಮಾಡಿದರು. ಆತಿಷ್ ಎಸ್ ಆರ್ ಬೌಂಡರಿಗೆ ಕಳುಹಿಸಿದರು. ಎಸೆತದಿಂದಾಗಿ ಶಾರ್ಟ್-ಲೆಗ್ ಫೀಲ್ಡರ್ ಬಲವಂತವಾಗಿ ಕುಸಿದು ಕುಳಿತುಕೊಳ್ಳಬೇಕಾಯಿತು. ಎಸೆತ ಬಹುತೇಕ ಗಾಯಕ್ಕೆ ಕಾರಣವಾಯಿತು. ಸೂರ್ಯಕುಮಾರ್ ಯಾದವ್ ಬಳಿಕ ಕ್ಷಮೆಯಾಚಿಸಿದರು.