Advertisement

ಚೀನದಲ್ಲೀಗ ಬ್ಯುಬೋನಿಕ್‌ ಪ್ಲೇಗ್‌

02:40 PM Jul 07, 2020 | mahesh |

ಬೀಜಿಂಗ್‌: ಡ್ರ್ಯಾಗನ್‌ ದೇಶದಲ್ಲಿ ಕೋವಿಡ್ ವೈರಸ್‌ ಅನಂತರ ಮತ್ತೂಂದು ಆತಂಕಕಾರಿ ಪ್ಲೇಗ್‌ ಕಾಣಿಸಿಕೊಂಡಿದ್ದು, ಇದು ಕೂಡ ಸಾಂಕ್ರಾಮಿಕ ರೋಗ ಎಂದು ಅಲ್ಲಿನ ಸ್ಥಳೀಯ ಆಡಳಿತ ಸಾರ್ವಜನಿಕರಿಗೆ ಎಚ್ಚರಿಕೆ ನೀಡಿದೆ. ಇದನ್ನು ಬ್ಯುಬೋನಿಕ್‌ ಪ್ಲೇಗ್‌ ಎಂದು ಕರೆಯಲಾಗುತ್ತಿದ್ದು, ಚೀನದ ಉತ್ತರ ಪ್ರಾಂತ್ಯದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಕಂಡು ಬಂದಿದೆ.

Advertisement

ಮಂಗೋಲಿಯಾದಲ್ಲಿ ಬ್ಯುಬೋನಿಕ್‌ ಹಾವಳಿ
ಹಿಂದಿನ ವರ್ಷ ಚೀನದ ಉತ್ತರ ಭಾಗದಲ್ಲಿರುವ ಆ ದೇಶದ ಸ್ವಾಯುತ್ತ ಪ್ರದೇಶವಾದ ಒಳ ಮಂಗೋಲಿಯಾದಲ್ಲಿ ಹಾಗೂ ಚೀನದ ರಾಜಧಾನಿ ಬೀಜಿಂಗ್‌ನಲ್ಲಿ ತಲಾ ಒಬ್ಬೊಬ್ಬರಿಗೆ ಈ ಬಬೋನಿಕ್‌ ಪ್ಲೇಗ್‌ ಕಾಣಿಸಿಕೊಂಡಿದ್ದು, ಸದ್ಯ ಬಯನ್ನೂರ್‌ ಮುನಿಸಿಪಲ್‌ ಹೆಲ್ತ… ಕಮಿಷನ್‌ ಈ ಕುರಿತು ಪತ್ರಿಕಾ ಪ್ರಕಟನೆಯೊಂದನ್ನು ಹೊರಡಿಸಿದೆ. ಚೀನದ ಆಡಳಿತ ವಿಭಾಗವಾದ ಉರಾದ್‌ ಮಿಡಲ್‌ ಬೆನ್ನಾರ್‌ಎಂಬಲ್ಲಿರುವ ಆಸ್ಪತ್ರೆಯಲ್ಲಿ ಈ ಪ್ಲೇಗ್‌ ಪತ್ತೆಯಾಗಿದೆ ಎಂದು ಸ್ಪಷ್ಟಪಡಿಸಿದೆ.
ವಿಲಕ್ಷಣ ಆರೋಗ್ಯ ಸಮಸ್ಯೆ ಎದುರಾದರೆ ತಿಳಿಸಿ ಈ ರೋಗವು ಒಬ್ಬರಿಂದ ಒಬ್ಬರಿಗೆ ಹರಡುವ ಲಕ್ಷಣ ಹೊಂದಿದ್ದು, ಯಾವುದಾದರೂ ವಿಲಕ್ಷಣ ಆರೋಗ್ಯ ಸಮಸ್ಯೆ ಎದುರಾದರೆ ಕೂಡಲೇ ಸರಕಾರಕ್ಕೆ ವರದಿ ಮಾಡಬೇಕು. ಜತೆಗೆ ಜತೆಗೆ 2020ರ ಅಂತ್ಯದವರೆಗೆ ಮುಂಜಾಗ್ರತೆ ವಹಿಸಬೇಕೆಂದು ಆರೋಗ್ಯ ಇಲಾಖೆ ಎಚ್ಚರಿಕೆ ನೀಡಿದೆ.

24 ಗಂಟೆಯಲ್ಲಿ ಸಾವನ್ನಪ್ಪುವ ಸಾಧ್ಯತೆ
ಬಬೋನಿಕ್‌ ಪ್ಲೇಗ್‌ ಒಬ್ಬರಿಂದ ಒಬ್ಬರಿಗೆ ಹರಡುವ ರೋಗವಾಗಿದ್ದು, ಚೀನದಲ್ಲಿ ಕಾಣಿಸುವ ಮುಂಗುಸಿಯಂತಹ ಪ್ರಾಣಿಗಳ ಮೈಮೇಲಿನ ಉಣ್ಣೆಯಲ್ಲಿ ಉತ್ಪಾದನೆಯಾಗುವ ಚಿಗಟಗಳ ಮೂಲಕ ಹರಡುತ್ತದೆ. ಈ ಪ್ಲೇಗ್‌ ಹರಡಿದ ವ್ಯಕ್ತಿ ಯಾವುದೇ ಚಿಕಿತ್ಸೆ ಪಡೆಯದಿದ್ದರೆ ಕೇವಲ 24 ಗಂಟೆಯಲ್ಲಿ ಸಾವನ್ನಪ್ಪುವ ಸಾಧ್ಯತೆ ಇದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ತಿಳಿಸಿದೆ.

ಲಕ್ಷಣಗಳು
ಕಳೆದ ವರ್ಷವಷ್ಟೇ ಪ್ರಾಣಿಯ ಮಾಂಸ ಸೇವಿಸಿ ಇಬ್ಬರು ಮೃತಪಟ್ಟಿದ್ದು, ಬೋನಿಕ್‌ ಪ್ಲೇಗ್‌ನ ಲಕ್ಷಣಗಳು ಬ್ಯುಬೋನಿಕ್‌ ಪ್ಲೇಗ್‌ ಕಾಣಿಸಿಕೊಂಡ ವ್ಯಕ್ತಿಯಲ್ಲಿ ಜ್ವರ, ತಲೆನೋವು ಕಾಣಿಸಿಕೊಳ್ಳುತ್ತದೆ. ಇದರ ಜತೆಗೆ ವಿಶೇಷವಾಗಿ ಆಯಾಸ, ದುಗ್ಧರಸ ಗ್ರಂಥಿಗಳಲ್ಲಿ ನೋವು ಕಾಣಿಸಿಕೊಳ್ಳುತ್ತಿದ್ದು, ಸೋಂಕಿತ ಪ್ರಾಣಿಯ ಸಂಪರ್ಕಕ್ಕೆ ಬಂದ ವ್ಯಕ್ತಿಗೆ ಈ ಬ್ಯಾಕ್ಟೀರಿಯಾ ಹರಡಿದೆ. ಮೊದಲಿಗೆ ದುಗ್ಧರಸ ಗ್ರಂಥಿಗಳ ಮೇಲೆ ಈ ಬ್ಯಾಕ್ಟೀರಿಯಾ ಪರಿಣಾಮ ಬೀರುತ್ತದೆ. ಈ ವೇಳೆ, ಚಿಕಿತ್ಸೆ ನೀಡದಿದ್ದರೆ ದೇಹದ ಇತರ ಭಾಗಗಳಿಗೆ ಬ್ಯಾಕ್ಟೀರಿಯಾ ಹರಡಲಿದ್ದು, ಸಾವು ಸಂಭವಿಸುವ ಸಾಧ್ಯತೆ ಇದೆ.

Advertisement

Udayavani is now on Telegram. Click here to join our channel and stay updated with the latest news.

Next