Advertisement
ಬಬಲ್‌ಗಮ್ ಜಗಿಯುವುದರಿಂದ ಆಲಸಿತನ, ನಿದ್ದೆ ದೂರವಾಗಿ, ಏಕಾಗ್ರತೆ ಹೆಚ್ಚುತ್ತದೆ. ಹಲ್ಲು ಮತ್ತು ಬಾಯಿಯ ಸ್ನಾಯುಗಳ ಆರೋಗ್ಯಕ್ಕೆ ಒಳ್ಳೆಯದು. ಈರುಳ್ಳಿ, ಬೆಳ್ಳುಳ್ಳಿಯಂಥ ಪದಾರ್ಥಗಳನ್ನು ತಿಂದ ನಂತರ ಬಬಲ್‌ಗಮ್ ಜಗಿದರೆ ಬಾಯಿ ವಾಸನೆಯಿಂದ ಮುಕ್ತರಾಗಬಹುದು. ಸದಾ ಕುರುಕಲು ತಿನ್ನಬೇಕು ಅಂತ ಹಪಹಪಿಸುವ ಮಂದಿಯ ಬಾಯಿ ಚಪಲವನ್ನೂ ಬಬಲ್‌ಗಮ್ ದೂರ ಮಾಡುತ್ತದೆ. ಬಬಲ್ ಗಮ್ ಜಗಿಯುತ್ತಾ ಗಂಟೆಗೆ 11 ಕ್ಯಾಲೊರಿ ಕಳೆದುಕೊಳ್ಳಬಹುದು ಅಂತಾವೆ ಸಮೀಕ್ಷೆಗಳು. ಅಂದರೆ, ಬಬಲ್‌ಗಮ್‌ನಿಂದ ತೂಕ ಕಡಿಮೆ ಮಾಡಿಕೊಳ್ಳಬಹುದು ಅಂತಾಯ್ತು.ಬಬಲ್‌ಗಮ್ ಜಗಿಯುವುದರಿಂದ, ಮೆದುಳಿಗೆ ರಕ್ತ ಸಂಚಾರ ಸರಾಗವಾಗಿ ನೆನಪಿನ ಶಕ್ತಿಯೂ ವೃದ್ಧಿಸುತ್ತದಂತೆ. 2011ರಲ್ಲಿ ನಡೆದ ಸಂಶೋಧನೆಯ ಪ್ರಕಾರ, ದಿನವೂ ಬಬಲ್‌ಗಮ್ ಜಗಿಯುವುದರಿಂದ ಒತ್ತಡ, ಖನ್ನತೆಯಂಥ ಮಾನಸಿಕ ರೋಗಗಳನ್ನು ಹತೋಟಿಯಲ್ಲಿಡಬಹುದಂತೆ. ಬಬಲ್‌ಗಮ್ ಅನ್ನು ಜಗಿಯುವಾಗ ಬಿಡುಗಡೆಯಾಗುವ ಲಾಲಾರಸವು, ಹೊಟ್ಟೆಯಲ್ಲಿನ ಆ್ಯಸಿಡ್‌ಗಳನ್ನು ನಿಯಂತ್ರಿಸಿ ಜೀರ್ಣಶಕ್ತಿಯನ್ನು ಸರಾಗಗೊಳಿಸುತ್ತದೆ. ಅಷ್ಟೇ ಅಲ್ಲದೆ, ಸಿಗರೇಟ್-ಗುಟ್ಕಾ ಮುಂತಾದ ದುಶ್ಚಟಗಳಿಂದ ದೂರವಾಗಲು ಬಬಲ್‌ಗಮ್ ಸಹಾಯ ಮಾಡುತ್ತದೆ. ಬಬಲ್‌ಗಮ್ ಜಗಿಯುವುದರಿಂದ ಮುಖದ ಸ್ನಾಯುಗಳಿಗೆ ವ್ಯಾಯಾಮ ಸಿಕ್ಕಂತಾಗಿ, ಮುಖದ ಸೌಂದರ್ಯವೂ ಇಮ್ಮಡಿಸುತ್ತದಂತೆ.