ಬೆಂಗಳೂರು: ಬೆಂಗಳೂರು ವಿಶ್ವವಿದ್ಯಾಲಯದ ತ್ರಿಭಜನೆಯಿಂದ ಹುಟ್ಟಿಕೊಂಡಿರುವ ಹೊಸ ಎರಡು ವಿಶ್ವವಿದ್ಯಾಲಯಗಳಲ್ಲಿ ದಾಖಲಾತಿ ಪ್ರಮಾಣ ಸಾಕಷ್ಟು ಕಡಿಮೆಯಾಗಿದೆ. ಇದನ್ನು ಸುಧಾರಿಸಲು ತುರ್ತು ಕ್ರಮ ತೆಗೆದುಕೊಳ್ಳುತ್ತೇವೆ. ಅಲ್ಲದೇ ಪ್ರಾಧ್ಯಾಪಕರ ನಿಯೋಜನೆ ಸೇರಿದಂತೆ ಅನುದಾನ ಪೂರೈಕೆಯ ಬಗ್ಗೆಯೂ ವಿಶೇಷ ಗಮನ ಹರಿಸಲಾಗುತ್ತದೆ ಎಂದು ಉನ್ನತ ಶಿಕ್ಷಣ ಸಚಿವ ಜಿ.ಟಿ.ದೇವೇಗೌಡ ಹೇಳಿದರು.
ಬೆಂವಿವಿ ತ್ರಿಭಜನೆಯಿಂದ ಹುಟ್ಟಿಕೊಂಡಿರುವ ಹೊಸ ಎರಡು ವಿಶ್ವವಿದ್ಯಾಲಯಗಳಲ್ಲಿ ದಾಖಲಾತಿ ಪ್ರಮಾಣ ಸಾಕಷ್ಟು ಕಡಿಮೆಯಾಗಿದೆ. ಇದನ್ನು ಸುಧಾರಿಸಲು ತುರ್ತು ಕ್ರಮ ತೆಗೆದುಕೊಳ್ಳುತ್ತೇವೆ. ಅಲ್ಲದೇ ಪ್ರಾಧ್ಯಾಪಕರ ನಿಯೋಜನೆ ಸೇರಿದಂತೆ ಅನುದಾನ ಪೂರೈಕೆ ಬಗ್ಗೆಯೂ ವಿಶೇಷ ಗಮನ ಹರಿಸಲಾಗುತ್ತದೆ ಎಂದು ಹೇಳಿದರು.
ವಿಶ್ವವಿದ್ಯಾಲಯನ್ನು ಮೂರು ಭಾಗ ಮಾಡುವ ಬದಲು ಎರಡು ಭಾಗ ಮಾಡಿದರೆ ಚೆನ್ನಾಗಿತ್ತು. ವಿದ್ಯಾರ್ಥಿಗಳ ಅನುಕೂಲ ಹಾಗೂ ಶಿಕ್ಷಣ ಗುಣಮಟ್ಟ ಸುಧಾರಣೆಗಾಗಿ ತ್ರಿಭಜನೆ ಮಾಡಿದ್ದಾರೆ. ಆದರೆ, ಅದಕ್ಕೆ ಬೇಕಾದ ಮೂಲಸೌಕರ್ಯವನ್ನು ಒದಗಿಸಿಲ್ಲ. ಹೊಸ ವಿವಿಯ ಅಭಿವೃದ್ಧಿಗೆ ತುರ್ತಾಗಿ ತುರ್ತು ಸೌಲಭ್ಯ ಒದಗಿಸಲಿದ್ದೇವೆ ಎಂದು ಹೇಳಿದರು.
ಪದವಿ ಕಾಲೇಜಿನ ಬೋಧಕ, ಬೋಧಕೇತರ ಸಿಬ್ಬಂದಿ ವರ್ಗಾವಣೆಗೆ ಮಾರ್ಗಸೂಚಿ ಸಿದ್ಧವಾಗಿದೆ. ಮುಖ್ಯಮಂತ್ರಿ ಮತ್ತು ವಿಧಾನಪರಿಷತ್ ಸದಸ್ಯರ ಕೋರಿಕೆಯಂತೆ ಕೆಲವೊಂದು ಕಾಲೇಜಿನ ಪ್ರಾಧ್ಯಾಪಕರನ್ನು ನಿಯೋಜನೆಗೆ ಅವಕಾಶ ನೀಡಿದ್ದೇವೆ.
ಆದರೆ, ನಿಯಮ ಬಾಹಿರವಾಗಿ ಯಾರನ್ನು ವರ್ಗಾವಣೆ ಮಾಡಿಲ್ಲ ಎಂದು ಸ್ಪಷ್ಟಪಡಿಸಿದರು. ಮುಂದಿನ ವರ್ಷದಿಂದ ವೃತ್ತಿಪರ ಕಾಲೇಜಿನ ಶುಲ್ಕ ನಿಗದಿಗೆ ಸರ್ಕಾರದಿಂದಲೇ ಸಮಿತಿ ರಚನೆ ಮಾಡಲಾಗುತ್ತದೆ. ಸರ್ಕಾರಿ ಕಾಲೇಜಿನ ವಿದ್ಯಾರ್ಥಿಗಳಿಗೆ ಉಚಿತ ಬಸ್‌ಪಾಸ್ ನೀಡುವ ಆದೇಶ ಇನ್ನಷ್ಟೇ ಆಗಬೇಕಿದೆ ಎಂದು ಹೇಳಿದರು.