Advertisement

ಬಿಟಿಡಿಎ ಕಚೇರಿ; ಮಧ್ಯವರ್ತಿಗಳ ಹಾವಳಿ ತಪ್ಪಿಸಿ

02:07 PM Aug 02, 2019 | Team Udayavani |

ಬಾಗಲಕೋಟೆ: ನಗರದ ಸಂತ್ರಸ್ತರಿಗಾಗಿ ಸ್ಥಾಪನೆ ಗೊಂಡಿರುವುದು ಬಾಗಲಕೋಟೆ ಪಟ್ಟಣ ಅಭಿವೃದ್ಧಿ ಪ್ರಾಧಿಕಾರ. ಅವರ ಕೆಲಸಗಳು ಸರಳವಾಗಿ ಆಗಬೇಕು. ಇಲ್ಲಿ ಮಧ್ಯವರ್ತಿಗಳ ಹಾವಳಿ ಮಿತಿ ಮೀರಿದೆ. ಇದಕ್ಕೆ ಕಡಿವಾಣ ಹಾಕಬೇಕು ಎಂದು ಶಾಸಕ ಡಾ|ವೀರಣ್ಣ ಚರಂತಿಮಠ ಅಧಿಕಾರಿಗಳಿಗೆ ಸೂಚನೆ ನೀಡಿದರು.

Advertisement

ಬಾಗಲಕೋಟೆ ಪಟ್ಟಣ ಅಭಿವೃದ್ಧಿ ಪ್ರಾಧಿಕಾರದ ಕಚೇರಿಯ ಸಭಾ ಭವನದಲ್ಲಿ ಗುರುವಾರ ಸಂಜೆ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದರು.

ವಿನಾಕಾರಣ ಸಂತ್ರಸ್ತರು ಕಚೇರಿಗೆ ಅಲೆದಾಡುವಂತೆ ಆಗಬಾರದು. ಸಂತ್ರಸ್ತರಿಗೆ ಸರಿಯಾದ ರೀತಿ ಮಾಹಿತಿ ನೀಡಿ, ಕಚೇರಿಯ ಸಿಬ್ಬಂದಿ, ಅಧಿಕಾರಿಗಳು ಅವರೊಂದಿಗೆ ಗೌರವದಿಂದ ನಡೆದುಕೊಳ್ಳಬೇಕು ಎಂದು ಸೂಚಿಸಿದರು.

ಕಳೆದ ಐದು ವರ್ಷದಲ್ಲಿ ಬಿಟಿಡಿಎದಿಂದ ಏನೇನು ಕೆಲಸ ಆಗಿದೆ. ಅದರಲ್ಲಿ ಆದ ಹಗರಣಗಳ ಕುರಿತು ಸಂಪೂರ್ಣ ತನಿಖೆ ಮಾಡಿಸುವುದಾಗಿ ಹೇಳಿದರು.

ಸಂತ್ರಸ್ತರಿಗಾಗಿ ಹಾಗೂ ನವನಗರದ ಅಭಿವೃದ್ಧಿಗಾಗಿ ಬಿಟಿಡಿಎ ಕಚೇರಿ ಇದ್ದು, ಇಲ್ಲಿ ಸರಿಯಾಗಿ ಕೆಲಸ ಮಾಡದವರು ತಾವಾಗಿಯೇ ಬೇರೆ ಕಡೆ ವರ್ಗ ಮಾಡಿಸಿಕೊಂಡು ಹೋಗಬಹುದು. ಕಚೇರಿಯಲ್ಲಿರುವ ಎಸ್‌ಡಿಸಿ ಮತ್ತು ಎಫ್‌ಡಿಸಿಗಳು ತಮ್ಮ ಬಳಿ ಬರುವ ಸಂತ್ರಸ್ತರೊಂದಿಗೆ ಸರಿಯಾಗಿ ವರ್ತನೆಯಿಂದ ನಡೆದುಕೊಳ್ಳಬೇಕು. ಅವರಿಗೆ ತಿಳಿ ಹೇಳಿ ಕೆಲಸ ಮಾಡಿಕೊಡಬೇಕು ಸುಮ್ಮ ಸುಮ್ಮನೆ ಕಚೇರಿಗೆ ಅಲೆದಾಡಿಸಬಾರದು ಎಂದು ಸೂಚಿಸಿದರು.

Advertisement

ನವನಗರದ ಯುನಿಟ್-2 ಅಭಿವೃದ್ಧಿಗಾಗಿ 550 ಕೋಟಿ ರೂ. ಟೆಂಡರ್‌ ಆದ ಹಣದ ಕೆಲಸ ಇದುವರೆಗೆ ಯಾಕೆ ಮುಗಿದಿಲ್ಲ ಎಂದು ಸಭೆಯಲ್ಲಿ ಇದ್ದ ಅಧಿಕಾರಿಗಳನ್ನು ಪ್ರಶ್ನಿಸಿದರು. ಬಿಟಿಡಿಎ ಕಚೇರಿಯಲ್ಲಿ ಎಸ್‌ಎಲ್ಓ ಹುದ್ದೆಗಳನ್ನು ಇದುವರೆಗೆ ಏಕೆ ಭರ್ತಿ ಮಾಡಿಲ್ಲ. ಆದಷ್ಟು ಶೀಘ್ರ ಭರ್ತಿ ಮಾಡಬೇಕು. ನವನಗರದಲ್ಲಿ ಅಧಿಕಾರಿಗಳು ಸಂಚಾರ ಮಾಡಬೇಕು ಎಂದು ಶಾಸಕರು ಸೂಚಿಸಿದರು. ಉಪ ವಿಭಾಗಾಧಿಕಾರಿ ಎಚ್. ಜಯಾ, ಬಿಟಿಡಿಎ ಮುಖ್ಯ ಇಂಜಿನಿಯರ್‌ ಅಶೋಕ ವಾಸನದ, ಪುನರ್‌ವಸತಿ ಅಧಿಕಾರಿ ಹುಣಸಗಿ, ಎಂಜನೀಯರ್‌ ಎಸ್‌.ಇ. ಜಾಂಬಳೆ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next