ಬೆಂಗಳೂರು: ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಮೊಮ್ಮಗಳು 30 ವರ್ಷದ ವೈದ್ಯೆ ಸೌಂದರ್ಯ ಇಂದು ತನ್ನ ನಿವಾಸದಲ್ಲಿ ಆತ್ಮಹತ್ಯೆಗೆ ಶರಣಾಗಿದ್ದಾರೆ. ಶಾಂಫ್ರಿಲಾ ಹೋಟೆಲ್ ಬಳಿಯ ಆಪಾರ್ಟ್ ಮೆಂಟ್ ನ ಕೊಠಢಿಯ ಫ್ಯಾನ್ ಗೆ ನೇಣು ಬಿಗಿದು ಸೌಂದರ್ಯ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಬಿಎಸ್ ವೈ ಮೊಮ್ಮಗಳು ಸೌಂದರ್ಯ ಸಾವಿಗೆ ಪ್ರಸವ ನಂತರದ ಖಿನ್ನತೆ (postpartum depression) ಕಾರಣ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ತಿಳಿಸಿದ್ದಾರೆ.
“ಯಾರ ಬಗ್ಗೆಯೂ ಸಂಶಯಗಳಿಲ್ಲ. ಸೌಂದರ್ಯ ಹೆರಿಗೆಯ ನಂತರದ ಖಿನ್ನತೆಗೆ ಒಳಗಾಗಿದ್ದರು. ನಮಗೆಲ್ಲರಿಗೂ ಅದು ಗೊತ್ತಿತ್ತು. ಮೊಮ್ಮಗಳನ್ನು ಸಂತೋಷದಿಂದಿರಿಸಲು ಯಡಿಯೂರಪ್ಪನವರು ಆಗಾಗ್ಯೆ ತನ್ನ ಮನೆಗೆ ಕರೆಸುತ್ತಿದ್ದರು” ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದ್ದಾರೆ.
ಇದನ್ನೂ ಓದಿ:ಹಣದ ಆಸೆಗೆ ತಾಯಿಯನ್ನೇ ಬೀದಿಪಾಲು ಮಾಡಿದ್ದ: ಸಿಧು ವಿರುದ್ಧ ಸಹೋದರಿ ಹೇಳಿದ್ದೇನು?
Related Articles
ಬಿ.ಎಸ್.ಯಡಿಯೂರಪ್ಪನವರ ಮೊದಲ ಪುತ್ರಿ ಪದ್ಮಾವತಿಯವರ ಮಗಳು 30 ವರ್ಷ ಪ್ರಾಯದ ಸೌಂದರ್ಯ ಅವರು ನಗರದ ಖಾಸಗಿ ಆಸ್ಪತ್ರೆಯಲ್ಲಿ ವೈದ್ಯೆಯಾಗಿದ್ದರು. ಸೌಂದರ್ಯ ಪತಿ ನೀರಜ್ ಕೂಡಾ ವೈದ್ಯರಾಗಿದ್ದಾರೆ. ದಂಪತಿಗೆ ಒಂಬತ್ತು ತಿಂಗಳ ಮಗುವಿದೆ.
ಪ್ರಧಾನಿ ಕರೆ: ಮಾಜಿ ಸಿಎಂ ಬಿಎಸ್ ವೈ ಮೊಮ್ಮಗಳ ನಿಧನದ ವಾರ್ತೆ ತಿಳಿದ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಯಡಿಯೂರಪ್ಪ ಅವರಿಗೆ ಕರೆ ಮಾಡಿ ಸಾಂತ್ವನ ಹೇಳಿದರು.
ಮಾಜಿ ಪ್ರಧಾನಿ ದೇವೇಗೌಡ, ಮಾಜಿ ಸಿಎಂ ಕುಮಾರಸ್ವಾಮಿ, ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಯಡಿಯೂರಪ್ಪನವರಿಗೆ ಕರೆ ಮಾಡಿ ಮೊಮ್ಮಗಳ ನಿಧನಕ್ಕೆ ಸಾಂತ್ವನ ಹೇಳಿದರು