Advertisement
ಹೌದು. ಸಿಎಂ ಯಡಿಯೂರಪ್ಪ ಅವರ ಎರಡೂ ಅವಧಿಯನ್ನು ಲೆಕ್ಕಕ್ಕೆ ತೆಗೆದುಕೊಂಡು ನೋಡಿ ದರೆ ಒಟ್ಟಾರೆಯಾಗಿ 30ಕ್ಕೂ ಹೆಚ್ಚು ಕ್ಷೇತ್ರಗಳಿಗೆ ಉಪ ಚುನಾವಣೆಗಳು ನಡೆದಿವೆ. 1956ರಿಂದ ಇಲ್ಲಿಯವರೆಗೆ ಒಟ್ಟಾರೆಯಾಗಿ 109 ಕ್ಷೇತ್ರಗಳಲ್ಲಿ ಉಪ ಚುನಾವಣೆಗಳು ನಡೆ ದಿದ್ದು, ರಾಜ್ಯದ ಉಪ ಚುನಾವಣೆ ವಿಚಾರ ದಲ್ಲಿ ಸುದೀರ್ಘ ಇತಿಹಾಸ ಹೊಂದಿದೆ.
ಬಿಎಸ್‌ವೈ ಅವರು ಮೊದಲ ಬಾರಿ ಮುಖ್ಯ ಮಂತ್ರಿ ಯಾಗಿದ್ದಾಗ ರಾಜ್ಯದಲ್ಲಿ 20 ಕ್ಷೇತ್ರಗಳಲ್ಲಿ ಉಪ ಚುನಾವಣೆ ನಡೆಯಿತು. ಅಂದರೆ 2008ರಿಂದ 2011ರ ವರೆಗೆ ಶಾಸಕರ ರಾಜೀನಾಮೆಯಿಂದಾಗಿ ಈ ಪ್ರಮಾಣದ ಕ್ಷೇತ್ರಗಳಲ್ಲಿ ಚುನಾವಣೆ ನಡೆದಿದೆ.
Related Articles
ಚುನಾವಣ ಆಯೋಗದ ಅಂಕಿ-ಅಂಶಗಳ ಪ್ರಕಾರ 1956ರಿಂದ ಇಲ್ಲಿಯವರೆಗೆ ಅಂದಾಜು 109 ಉಪ ಚುನಾವಣೆಗಳು ನಡೆದಿವೆ. ಶಾಸಕರ ಅಕಾಲಿಕ ಮರಣ, ಅನಾರೋಗ್ಯ, ವೈಯಕ್ತಿಕ ಕಾರಣ ಗಳಿಗೆ ರಾಜೀನಾಮೆ, ಲೋಕಸಭೆಯಲ್ಲಿ ಗೆದ್ದು, ಶಾಸಕರ ಸ್ಥಾನ ತ್ಯಜಿಸಿರುವುದು ಈವರೆಗಿನ ಉಪ ಚುನಾವಣೆಗಳಿಗೆ ಪ್ರಮುಖ ಕಾರಣ. ಆದರೆ 2008ರ ಬಳಿಕವಷ್ಟೇ ಆಪರೇಷನ್ ಕಮಲ, ಪಕ್ಷಾಂತರ, ಅನರ್ಹತೆ ಕಾರಣಗಳಿಗೆ ಉಪ ಚುನಾವಣೆ ಆರಂಭವಾಗಿದೆ.
Advertisement
ಆರಂಭದಿಂದ ಅಂದರೆ, 1956ರಿಂದ ಪ್ರತಿ ವಿಧಾನ ಸಭಾ ಅವಧಿಯಲ್ಲೂ ಕೆಲವೊಂದು ವರ್ಷಗಳಲ್ಲಿ ಉಪ ಚುನಾವಣೆಗಳು ನಡೆದಿವೆ. ಆದರೆ 1994ರಿಂದ 99ರ ಅವಧಿಯಲ್ಲಿ ಸುಮಾರು ಇಪ್ಪತ್ತು, 2008ರಿಂದ 2011ರ ಅವಧಿಯಲ್ಲಿ 20 ಹಾಗೂ ಈಗ 2019ರಲ್ಲಿ 15 ಉಪ ಚುನಾವಣೆಗಳು ಎದುರಾಗಿದ್ದು ಈವರೆಗಿನ ಅತೀ ಹೆಚ್ಚು ಉಪ ಚುನಾವಣೆಗಳು ಎಂದು ಹೇಳಲಾಗುತ್ತಿದೆ.
ಹೊಸ ಭಾಷ್ಯ ಬರೆದ “ಆಪರೇಷನ್ ಕಮಲ’ಉಪ ಚುನಾವಣೆ ನಡೆಯುವುದು ಹೊಸದೂ ಅಲ್ಲ, ವಿಶೇಷವೂ ಅಲ್ಲ. ಆದರೆ 2008ರಲ್ಲಿ ಶುರುವಾದ ರಾಜೀನಾಮೆ ಪರ್ವಕ್ಕೆ ಆಪರೇಷನ್ ಕಮಲ ಎಂಬ ಹೆಸರು ದಕ್ಕಿತು. 2008ರ ವಿಧಾನಸಭಾ ಚುನಾವಣೆಯಲ್ಲಿ 110 ಸ್ಥಾನಗಳನ್ನು ಗೆದ್ದ ಬಿಜೆಪಿ ಬಹುಮತಕ್ಕೆ ಬೇಕಾದ ಸಂಖ್ಯಾಬಲ ಹೊಂದಿಸಿ ಕೊಳ್ಳಲು ಕಾಂಗ್ರೆಸ್- ಜೆಡಿಎಸ್‌ನಿಂದ ಗೆದ್ದ ಶಾಸಕರಿಂದ ರಾಜೀನಾಮೆ ಕೊಡಿಸಿತು. ಈ ರಾಜೀನಾಮೆ ಪರ್ವ 2011ರ ವರೆಗೂ ನಡೆಯಿತು. ಈ ನಾಲ್ಕು ವರ್ಷಗಳಲ್ಲಿ ಸುಮಾರು 20 ಕ್ಷೇತ್ರಗಳಿಗೆ ಉಪ ಚುನಾವಣೆಗಳು ನಡೆದಿವೆ. ಬಹುತೇಕ ಎಲ್ಲ ಚುನಾವಣೆಗಳು “ಆಪರೇಷನ್ ಕಮಲ’ದಿಂದಾಗಿ ಎದುರಾಗಿದ್ದವು. ಈ ಮಧ್ಯೆ ಇದು ಶಾಸಕರ ಅನರ್ಹತೆ, ಕಾನೂನು ಹೋರಾಟಕ್ಕೂ ಕಾರಣವಾಯಿತು. ಈಗಲೂ ಅಂತಹದೇ ಸ್ಥಿತಿ ಇದೆ. -ರಫೀಕ್ ಅಹ್ಮದ್