Advertisement

ಬೆಳೆಯುತ್ತಿರುವುದು ಸಹಿಸಲಾಗದೇ ಕೆಲ ಕಿಡಿಗೇಡಿಗಳಿಂದ ಕೊಲೆ : ಹರ್ಷ ನಿವಾಸದಲ್ಲಿ ಬಿಎಸ್ ವೈ

12:31 PM Mar 06, 2022 | Team Udayavani |

ಶಿವಮೊಗ್ಗ : ಹತ್ಯೆಗೀಡಾದ ಬಜರಂಗದಳದ ಕಾರ್ಯಕರ್ತ ಹರ್ಷ ಮನೆಗೆ ಭಾನುವಾರ ಮಾಜಿ ಸಿಎಂ ಯಡಿಯೂರಪ್ಪ ಭೇಟಿ ನೀಡಿ, ಕುಟುಂಬಸ್ಥರಿಗೆ ಸಾಂತ್ವಾನ ಹೇಳಿ, ರಾಜ್ಯ ಸರ್ಕಾರದ ಪರವಾಗಿ ಹರ್ಷ ಕುಟುಂಬಕ್ಕೆ ಪರಿಹಾರ ಚೆಕ್ ನೀಡಿದರು.

Advertisement

ಸೀಗೆಹಟ್ಟಿಯಲ್ಲಿ ಹರ್ಷ ಕುಟುಂಬಸ್ಥರ ಭೇಟಿ ಬಳಿಕ ಮಾತನಾಡಿದ ಅವರು, 26 ವರ್ಷದ ಹರ್ಷ ಎಲ್ಲರ ಜೊತೆ ಆತ್ಮೀಯ ಸಂಬಂಧ ಹೊಂದಿದ್ದ. ಈ ಭಾಗದಲ್ಲಿ ಗೊಂದಲ, ಹೋರಾಟಕ್ಕೆ ಅವಕಾಶ ಕೊಡ್ತಾ ಇರಲಿಲ್ಲ.ಹಿಂದೂ ಯುವಮುಖಂಡನಾಗಿ ಹರ್ಷ ಬೆಳೆಯುತ್ತಿದ್ದ.ಇದನ್ನೂ ಸಹಿಸಕ್ಕಾಗದೇ ಕೆಲವು ಕಿಡಿಗೇಡಿಗಳು ಕೊಲೆ ಮಾಡಿದ್ದಾರೆ. ಇದು ಅತ್ಯಂತ ಅಮಾನುಷ ಕೃತ್ಯ. ಹರ್ಷನ ಕುಟುಂಬಕ್ಕೆ ದೇವರು ನೋವು ಭರಿಸುವ ಶಕ್ತಿ ನೀಡಲಿ ಎಂದು ಪ್ರಾರ್ಥಿಸುತ್ತೇನೆ. ಸರ್ಕಾರದ ಕಡೆಯಿಂದ 25 ಲಕ್ಷ ರೂ. ಚೆಕ್ ಅನ್ನು ಅವರಿಗೆ ಕೊಟ್ಟಿದ್ದೇನೆ. ಹಣ ಮುಖ್ಯ ಅಲ್ಲ. ಹರ್ಷನನ್ನು ಕಳೆದುಕೊಂಡ ಕುಟುಂಬದ ನೋವು ದೊಡ್ಡದು. ದುಃಖ ಭರಿಸುವ ಶಕ್ತಿ ದೇವರು ಕೊಡಲಿ ಎಂಬುವ ಪ್ರಾರ್ಥನೆ ಬಿಟ್ಟರೇ ನಮ್ಮ ಕೈಯಲ್ಲಿ ಏನೂ ಇಲ್ಲ ಎಂದರು.

ನಮ್ಮ ಹಾಗೂ ಪ್ರಧಾನಿ ಮೋದಿಯವರ ಅಪೇಕ್ಷೆ ಎಲ್ಲರೂ ಒಟ್ಟಾಗಿ ಬಾಳಬೇಕು. ಹಿಂದೂ, ಮುಸ್ಲಿಂ, ಕ್ರಿಶ್ಚಿಯನ್ ಎಲ್ಲರೂ ಒಂದೇ ತಾಯಿಯ ಮಕ್ಕಳಂತೆ ಬಾಳ್ಬೇಕು.ಸಣ್ಣಪುಟ್ಟ ಕಾರಣಕ್ಕೆ ಕೊಲೆ, ಗೊಂದಲ ಉಂಟು ಮಾಡಬಾರದು.ಅದರಿಂದ ಶಾಂತಿ – ಸುವ್ಯವಸ್ಥೆ ಭಂಗವಾಗುತ್ತೆ. ಅದಕ್ಕೆ ಯಾರು ಅವಕಾಶ ಕೊಡಬಾರದು.ಎಲ್ಲರೂ ಒಂದೇ ತಾಯಿ ಮಕ್ಕಳಂತೆ ಬದುಕಬೇಕು ಎಂಬುದು ಪ್ರಧಾನಿಯವರ ಅಪೇಕ್ಷೆ.ಈ ರೀತಿಯ ಘಟನೆಗಳು ಮತ್ತೇ ನಡೆಯದಂತೆ ಎಚ್ಚರ ವಹಿಸಬೇಕು.ಸುತ್ತಮುತ್ತಲಿನ ಜನರು ದುರ್ಘಟನೆ ನಡೆಯದಂತೆ ಎಚ್ಚರ ವಹಿಸಬೇಕು ಎಂದು ಸಲಹೆ ನೀಡಿದರು.

ಯಡಿಯೂರಪ್ಪ ಅವರೊಂದಿಗೆ ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್.ಈಶ್ವರಪ್ಪ, ಸಂಸದ ಬಿ.ವೈ.ರಾಘವೇಂದ್ರ, ಪರಿಷತ್ ಸದಸ್ಯ ಎಸ್.ರುದ್ರೇಗೌಡ, ಬಿಜೆಪಿ ಜಿಲ್ಲಾಧ್ಯಕ್ಷ ಟಿ.ಡಿ.ಮೇಘರಾಜ್ ಮತ್ತಿತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next