Advertisement

ನೂರು ಕೇಸಾದರೂ ಎದುರಿಸುವೆ : ಸಿದ್ದರಾಮಯ್ಯಗೆ ಬಿಎಸ್‌ವೈ ತಿರುಗೇಟು

12:47 AM Feb 06, 2021 | Team Udayavani |

ಬೆಂಗಳೂರು : ಶುಕ್ರವಾರ ವಿಧಾನಸಭೆ ಕಲಾಪದಲ್ಲಿ ರಾಜ್ಯಪಾಲರ ಭಾಷಣಕ್ಕೆ ಸಂಬಂಧಿಸಿದ ವಂದನ ನಿರ್ಣಯ ಪ್ರಸ್ತಾವದ ಚರ್ಚೆಗೆ ಸಿಎಂ ಯಡಿಯೂರಪ್ಪ ಉತ್ತರ ನೀಡಿದ್ದು, ತಮ್ಮ ವಿರುದ್ಧ ವಾಗ್ಧಾಳಿ ನಡೆಸಿದ್ದ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರಿಗೆ ಮಾತಿನಲ್ಲೇ ತಿವಿದಿದ್ದಾರೆ.

Advertisement

– ಎಲ್ಲಿಯ ವರೆಗೆ ಪ್ರಧಾನಿ ಮೋದಿ, ಕೇಂದ್ರ ಗೃಹ ಸಚಿವರ ಬೆಂಬಲ, ರಾಜ್ಯದ ಜನರ ಆಶೀರ್ವಾದ ಇರುವುದೋ ಅಲ್ಲಿಯ ವರೆಗೆ ನನ್ನ ವಿರುದ್ಧ 100 ಕೇಸ್‌ ದಾಖಲಿಸಿದರೂ ಎದುರಿಸುವ ಶಕ್ತಿ ಇದೆ.

– ಮುಂದಿನ ವಿಧಾನಸಭೆ ಚುನಾವಣೆಯಲ್ಲಿ 150 ಸ್ಥಾನ ಗೆಲ್ಲುತ್ತೇವೆ. ನಿಮ್ಮನ್ನು (ಸಿದ್ದರಾಮಯ್ಯ) ಶಾಶ್ವತವಾಗಿ ವಿಪಕ್ಷದಲ್ಲಿ ಕೂರಿಸುತ್ತೇನೆ.

– ಜನ ನಿಮ್ಮ ಬಗ್ಗೆ ವಿಶ್ವಾಸ ಕಳೆದುಕೊಂಡಿದ್ದಾರೆ. ಮುಂಬರುವ ಉಪಚುನಾವಣೆ ಗಳಲ್ಲೂ ಬಿಜೆಪಿಯದ್ದೇ ಗೆಲುವು

– ವಿರೋಧಕ್ಕಾಗಿ ವಿರೋಧ ಮಾಡಿದರೆ ಅದು ಅರ್ಥರಹಿತ.

Advertisement

– ನಿಮ್ಮ ಅವಧಿಯಲ್ಲಿ ಎಸಿಬಿ ರಚಿಸಿ, ನಿಮ್ಮ ವಿರುದ್ಧದ ಪ್ರಕರಣಗಳಿಗೆಲ್ಲ “ಬಿ’ ವರದಿ ಹಾಕಿಸಿಕೊಂಡು, “ರೀ ಡು’ ಹೆಸರಿನಲ್ಲಿ ಸಾವಿರಾರು ಎಕರೆ ಡಿನೋಟಿಫೈ ಮಾಡಿದ ಬುದ್ಧಿವಂತರು ನೀವು.

– “ಆಪರೇಷನ್‌ ಕಮಲ’ ಮಾಡಿದ್ದು ನಾನು ಎನ್ನುತ್ತೀರಲ್ಲ, 2006ರಲ್ಲಿ ಜೆಡಿಎಸ್‌ಗೆ ರಾಜೀನಾಮೆ ನೀಡಿ ಕಾಂಗ್ರೆಸ್‌ ಸೇರಿ ನೀವು ಆಪರೇಷನ್‌ ಮಾಡಲಿಲ್ಲವೇ?

-ನಿಮ್ಮ ಮಾತು, ನಡೆಯಲ್ಲಿ ಸ್ವಲ್ಪ ಸುಧಾರಣೆ ಮಾಡಿಕೊಳ್ಳಿ. ರಾಜಪಾಲರಿಂದ ಹಸಿ ಸುಳ್ಳು ಹೇಳಿಸಲಾಗಿದೆ ಎಂಬ ಮಾತು ವಿಪಕ್ಷ ನಾಯಕರಿಗೆ ಶೋಭೆಯಲ್ಲ.

ನಾನು ಸಿಎಂ ಆಗಿದ್ದಾಗಲೂ ಹೆಬ್ಟಾಳ ಕ್ಷೇತ್ರದ ಉಪ ಚುನಾವಣೆ ಬಿಟ್ಟು ಎಲ್ಲ ಗೆದ್ದಿದ್ದೆವು. ಅಧಿಕಾರದಲ್ಲಿದ್ದಾಗ ಏನು ನಡೆಯುತ್ತಿದೆ ಎಂಬುದು ಗೊತ್ತಿದೆ. ಅದು ನ್ಯಾಯ ಯುತವಾಗಿ ಬಂದ ಜನಾದೇಶವಲ್ಲ. ವಿಧಾನಸಭೆ ವಿಸರ್ಜಿಸಿ ಚುನಾವಣೆಗೆ ಹೋಗೋಣ. – ಸಿದ್ದರಾಮಯ್ಯ, ವಿಪಕ್ಷ ನಾಯಕ

Advertisement

Udayavani is now on Telegram. Click here to join our channel and stay updated with the latest news.

Next