Advertisement
ರಾಜಕೀಯ ಜೀವನದ ಏಳು ಬೀಳುಗಳ ನಡುವೆ ಸ್ಥಳೀಯ ಮಟ್ಟದಲ್ಲಿಯೂ ಪಕ್ಷವನ್ನು ಕಟ್ಟಲು ಕಾರ್ಯಕರ್ತರಿಲ್ಲದ ಸಂದರ್ಭದಲ್ಲಿ ಪಕ್ಷವನ್ನು ಅಧಿಕಾರ ಹಿಡಿಯುವ ಹಾಗೆ ಮಾಡಿದ್ದು ಬಿ ಎಸ್ ವೈ ಎನ್ನುವುದು ಅಪ್ಪಟ ಸತ್ಯ.
Related Articles
Advertisement
ಕಾಂಗ್ರೆಸ್ ಪಕ್ಷದ ಹಿರಿಯ ನಾಯಕ ಧರಂ ಸಿಂಗ್ ನೇತೃತ್ವದ ಕಾಂಗ್ರೆಸ್ ನೀಡಿದ್ದ ಬೆಂಬಲವನ್ನು 2006 ರಲ್ಲಿ ಜೆಡಿಎಸ್ ಮರಳಿ ದಕ್ಕಿಸಿಕೊಮಡ ನಂತರ ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಂಡಿತು. ಜೆಡಿಎಸ್ ಹಾಗೂ ಬಿಜೆಪಿ ಮೈತ್ರಿ ಸರ್ಕಾರದಲ್ಲಿ ಕುಮಾರ ಸ್ವಾಮಿ ರಾಜ್ಯದ ಮುಖ್ಯ ಮಂತ್ರಿಯಾದರೇ, ಬಿ ಎಸ್ ವೈ ರಾಜ್ಯದ ಉಪ ಮುಖ್ಯಮಂತ್ರಿ ಹಾಗೂ ಹಣಕಾಸು ಸಚಿವರಾಗಿ ಅಧಿಕಾರ ವಹಸಿಕೊಂಡಿದ್ದರು.
ಮೈತ್ರಿ ಸರ್ಕಾರದ ಒಪ್ಪಂದಂತೆ 20 ತಿಂಗಳುಗಳ ನಂತರ ಕುಮಾರ ಸ್ವಾಮಿ 2007 ರಲ್ಲಿ ಮಾಜಿ ಮುಖ್ಯಮಂತ್ರಿ ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಯಲು ನಿರ್ಲಕ್ಷ್ಯ ಮಾಡಿದ ಕಾರಣದಿಂದಾಗಿ ರಾಜ್ಯಕಾರಣದಿಂದಾಗಿ ಕೋಲಾಹಲವೇ ಸೃಷ್ಟಿಯಾಗಿತ್ತು. ಈ ರಾಜಕೀಯ ವೈಮನಸ್ಸಿನಿಂದ ಮೈತ್ರಿಯಿಂದ ಹೊರಗೆ ಬಂದ ಬಿ ಎಸ್ ವೈ ನೇತೃತ್ವದ ಬಿಜೆಪಿ ಹೊರಬಂದ ಕಾರಣದಿಂದಾಗಿ ರಾಜ್ಯದಲ್ಲಿ ರಾಷ್ಟ್ರಪತಿ ಆಡಳಿತ ಜಾರಿಯಾಗಿತ್ತು.
ರಾಜ್ಯ ರಾಜಕಾರಣದಲ್ಲಿ ಆದ ಭಿನ್ನಮತ ಶಮನದಿಂದಾಗಿ 2007 ನವೆಂಬರ್ 2 ರಂದು ಬಿ ಎಸ್ ವೈ ರಾಜ್ಯದ ಮುಖ್ಯಮಂತ್ರಿಯಾಗಿ ಮೊದಲ ಬಾರಿಗೆ ಪ್ರಮಾಣ ವಚನ ಪಡೆದಿದ್ದರು. ಈ ಮುಖಾಂತರ ದಕ್ಷಿಣ ಭಾರತದ ಮೊಟ್ಟ ಮೊದಲ ಬಿಜೆಪಿಯ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡರು.
ಸಂಪುಟದ ವಿಚಾರಕ್ಕೆ ಸಂಬಂಧಪಟ್ಟಂತೆ ಮತ್ತೆ ಕಾಣಿಸಿಕೊಂಡ ಭಿನ್ನಮತದ ಕಾರಣದಿಂದಾಗಿ ಮತ್ತೆ ಮೈತ್ರಿ ಸರ್ಕಾರ ಅದೇ ವರ್ಷದ ನವೆಂಬರ್ ನಲ್ಲಿ ಉರುಳಿತ್ತು. ಮೊದಲ ಬಾರಿಗೆ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕಾರ ಮಾಡಿದ ಬಿ ಎಸ್ ವೈ ಕೇವಲ ಏಳು ದಿನಗಳಲ್ಲಿ ಅಧಿಕಾರ ಕಳೆದುಕೊಂಡಿದ್ದರು ಎನ್ನುವುದು ವಿಪರ್ಯಾಸ.
ಇಷ್ಟೆಲ್ಲಾ ಆದರೂ ಖಡಕ್ ನಾಯಕ ಬಿ ಎಸ್ ವೈ ಹಠ ಹಾಗೂ ಛಲ ಎಂದೂ ಕಡಿಮೆಯಾಗಿಲ್ಲ. 2007 ರ ತನಕ ನಡೆದ ರಾಜ್ಯ ರಾಜಕಾರಣದ ಬೆಳವಣಿಗೆಯಲ್ಲಿ ಬಿ ಎಸ್ ಯಡಿಯೂರಪ್ಪ ಮೇಲೆ ರಾಜ್ಯದಲ್ಲಿ ಒಂದು ಅನುಕಂಪದ ಅಲೆ ಸೃಷ್ಟಿಯಾಗಿತ್ತು. 110 ಶಾಸಕ ಸ್ಥಾನಗಳ ಗೆಲು ಹಾಗೂ ಆಪರೇಷನ್ ಕಮಲದ ಮೂಲಕ ರಾಜ್ಯದಲ್ಲಿ ಮೊದಲ ಬಾರಿಗೆ ಸ್ವಂತ ಪಕ್ಷ ಬದೊಂದಿಗೆ ಅಧಿಕಾರದ ಗದ್ದುಗೆ ಹಿಡಿಯುವಂತಾಯಿತು. ಈ ಮೂಲಕ ಬಿ ಎಸ್ ವೈ ಮತ್ತೆ ರಾಜ್ಯದ ಮುಖ್ಯಮಂತ್ರಿಯಾಗಿ ಎರಡನೇ ಬಾರಿಗೆ ಅಧಿಕಾರ ವಹಿಸಿಕೊಂಡರು.
ಅಧಿಕಾರದಲ್ಲಿರುವಾಗಲೇ ಜೈಲು ಪಾಲಾದ ಬಿ ಎಸ್ ವೈ
ಸ್ವಪಕ್ಷೀಯರ ವೈಮನಸ್ಸು, 17 ಮಂದಿ ಶಾಸಕರು ಅವಿಶ್ವಾಸ ತೋರಿಸಿದ್ದ ಕಾರಣ ಅಧಿಕಾರ ಪೂರ್ಣಾವಧಿಗೆ ಮಾಡಲು ಸಾಧ್ಯವಾಗಿರಲಿಲ್ಲ. ಅಕ್ರಮ ಗಣಿ ಹಗರಣ ಮತ್ತು ಡಿನೋಟಿಫಿಕೇಷನ್ ಬಲೆಗೆ ಸಿಲುಕಿದ ಬಿ ಎಸ್ ವೈ ಕೇವಲ 38 ತಿಂಗಳುಗಳ ಕಾಲ ಅಧಿಕಾರ ಮಾಡಿ 2012 ನವೆಂಬರ್ ನಲ್ಲಿ ಜೈಲು ಪಾಲಾದರು.
ದಕ್ಷಿಣ ಭಾರತದ ಮೊದಲ ಬಿಜೆಪಿ ಮುಖ್ಯಮಂತ್ರಿ ಎಂಬ ಖ್ಯಾತಿ ಗಳಿಸಿದ್ದ ಬಿ ಎಸ್ ಯಡಿಯೂರಪ್ಪ 2012 ರ ವೇಳಗೆ ಅಧಿಕಾರದಲ್ಲಿರುವಾಗಲೇ ಜೈಲು ಪಾಲಾದ ಮೊದಲ ಮುಖ್ಯಮಂತ್ರಿ ಎಂಬ ಕುಖ್ಯಾತಿಗೂ ಒಳಗಾಗಿದ್ದರೂ ಎನ್ನುವುದು ಬಿ ಎಸ್ ವೈ ರಾಜಕೀಯ ಜೀವನದಲ್ಲಿ ಎಂದಿಗೂ ಅಳಿಸಲಾಗದ ಕಪ್ಪು ಚುಕ್ಕಿಯಾಗಿಯೇ ಉಳಿಯುತ್ತದೆ.
ಇನ್ನು, ಜೈಲಿನಿಂದ ಬಿಡುಗಡೆಯಾದ ನಂತರದ ಬಿ ಎಸ್ ವೈ ನಡೆ ರಾಜ್ಯ ರಾಜಕಾರಣದಲ್ಲಿ ದೊಡ್ಡ ಇತಿಹಾಸ.
ತನಗೆ ಧಕ್ಕೆ ತಂದ ವಿಷಯದಿಂದಲೇ ನಿರ್ದೋಷಿಯಾದ ಬಿ ಎಸ್ ವೈ
ನಕಲಿ ಸಹಿ ಬಳಸಿ 2010-11ರಲ್ಲಿ ಯಡಿಯೂರಪ್ಪ ಹಾಗೂ ಆಗಿನ ಕೈಗಾರಿಕಾ ಸಚಿವ ಮುರುಗೇಶ್ ನಿರಾಣಿ ತಮ್ಮಿಂದ ಭೂಮಿಯನ್ನು ವಾಪಾಸ್ ಪಡೆದಿದ್ದರು ಎಂದು ಆರೋಪಿಸಿ ಲೋಕಾಯುಕ್ತದಲ್ಲಿ ಉದ್ಯಮಿ ಎ. ಅಲಂ ಪಾಷಾ ದೂರು ದಾಖಲಿಸಿದ್ದ ಪ್ರಕರಣ ಯಡಿಯೂರಪ್ಪ ಅವರ ರಾಜಕೀಯ ವರ್ಚಸ್ಸಿಗೆ ಧಕ್ಕೆ ಉಂಟಾಗಿತ್ತು.
ತಮ್ಮ ವಿರುದ್ಧದ ವಿಚಾರಣೆ ರದ್ದುಪಡಿಸುವಂತೆ ಕೋರಿ ಯಡಿಯೂರಪ್ಪ ಸಲ್ಲಿಸಿದ್ದ ಅರ್ಜಿಯನ್ನು ಜ. 5ರಂದು ಹೈಕೋರ್ಟ್ ವಜಾಗೊಳಿಸಿತ್ತು. ಹಾಗೇ, ಅರ್ಜಿ ವಜಾ ಜೊತೆಗೆ ಹೈಕೋರ್ಟ್ ಯಡಿಯೂರಪ್ಪ ಹಾಗೂ ಮುರುಗೇಶ್ ನಿರಾಣಿ ಅವರ ವಿಚಾರಣೆಗೆ ಆದೇಶಿಸಿತ್ತು.
ಡಿನೋಟಿಫಿಕೇಷನ್ ಪ್ರಕರಣದಲ್ಲಿ ಬಿಎಸ್‌ವೈ ವಿರುದ್ಧ ಪ್ರಕರಣ ದಾಖಲಿಸಿ ವಿಚಾರಣೆಗೊಳಪಡಿಸಲು ಹಿಂದಿನ ರಾಜ್ಯಪಾಲರು ನೀಡಿದ್ದ ಅನುಮತಿಯನ್ನು ಹೈಕೋರ್ಟ್ ನ ವಿಭಾಗೀಯ ಪೀಠ ರದ್ದು ಮಾಡಿದ ಬೆನ್ನಲ್ಲೇ, ಏಕಸದಸ್ಯಪೀಠ ಕೂಡ ಡಿನೋಟಿಫಿಕೇಷನ್ ಗೆ ಸಂಬಂಧಿಸಿದಂತೆ ಸಿಎಜಿ ವರದಿ ಆಧರಿಸಿ 2015ರಲ್ಲಿ ದಾಖಲಿಸಿದ್ದ ಹದಿನೈದು ಎಫ್ ಐ ಆರ್ ಗಳನ್ನು ರದ್ದು ಮಾಡಿತ್ತು.
ಈ ಎಫ್ ಐ ಆರ್ ರದ್ದಿನ ಕಾರಣದಿಂದಾಗಿ ಬಿ ಎಸ್ ವೈ ತಮ್ಮ ಮೇಲಿದ್ದ ಬಹುತೇಕ ಎಲ್ಲಾ ಪ್ರಕರಣಗಳಲ್ಲಿ ನಿರ್ದೋಷಿಯಾದರು.
ಡಿನೋಟಿಫಿಕೇಶನ್ ಹಿನ್ನೆಲೆ ಏನು..?
ಬಿ ಎಸ್ ವೈ ಅವರ ಡಿನೋಟಿಫಿಕೇಶನ್ ವಿಚಾರಕ್ಕೆ ಸಂಬಂಧಿಸಿದಂತೆ ವಿಚಾರದಲ್ಲಿ ಗಮನಿಸುವುದಾದರೇ, ಸಿ ಎಜಿ ವರದಿಯಲ್ಲಿ ಡಿನೋಟಿಫಿಕೇಶನ್ ನಿಂದ ಎಷ್ಟೆಲ್ಲಾ ನಷ್ಟವಾಗಿದೆ ಎಂಬ ಬಗ್ಗೆ ವರದಿ ನೀಡಿದೆ. ಯಾವ ಯಾವ ಮುಖ್ಯಮಂತ್ರಿಗಳ ಅಧಿಕಾರಾವಧಿಯಲ್ಲಿ ಡಿನೋಟಿಫಿಕೇಶನ್ ಆಗಿದೆಯೋ ಅವರ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು ಎಂದು ಆರ್ ಟಿ ಐ ಕಾರ್ಯಕರ್ತ ಜಯಕುಮಾರ್ ಹಿರೇಮಠ್ 2012ರಲ್ಲಿ ಲೋಕಾಯುಕ್ತರಿಗೆ ದೂರು ಸಲ್ಲಿಸಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸಿ ವರದಿ ನೀಡುವಂತೆ ಸಿ ಐಡಿಗೆ ಸೂಚನೆ ನೀಡಿದ್ದರು.
ಸಿಐಡಿ ಪ್ರಾಥಮಿಕ ವರದಿ ನೀಡಿದ ನಂತರ ಹಿಂದಿನ ಲೋಕಾಯುಕ್ತ ವೈ ಭಾಸ್ಕರ ರಾವ್ ಅವರ ನಿರ್ದೇಶದಂತೆ ಲೋಕಾಯುಕ್ತ ಪೊಲೀಸರು ಪ್ರಕರಣವನ್ನು ದಾಖಲಿಸಿಕೊಂಡು ಬಿ ಎಸ್ ವೈ ವಿರುದ್ಧ ಎಫ್ ಐ ಆರ್ ಹಾಕಿದ್ದರು. ಮಾತ್ರವಲ್ಲದೇ ಮಾಜಿ ಮುಖ್ಯಮಂತ್ರಿ ಕುಮಾರ್ ಸ್ವಾಮಿ ಅವರ ವಿರುದ್ಧವೂ ಕೂಡ ಎಫ್ ಐ ಆರ್ ಹಾಕಲಾಗಿತ್ತು.
ಬಿ ಎಸ್ ವೈ ಮೇಲಿದ್ದ ಡಿನೋಟಿಫಿಕೇಶನ್ ಪ್ರಕರಣಕ್ಕೆ ಸಂಬಂಧಿಸಿದ್ಧ ಎಫ್ ಐ ಆರ್ ಯಾವುವು..?
ಭ್ರಷ್ಟಾಚಾರ ನಿಗ್ರಹ ಕಾಯ್ದೆ ಹಾಗೂ ಭಾರತೀಯ ದಂಡ ಸಂಹಿತೆಯ ಅಡಿಯಲ್ಲಿ ಬಿ ಎಸ್ ಯಡಿಯೂರಪ್ಪ ಅವರ ವಿರುದ್ಧ ಸುಮಾರು ಹದಿನೈದು ಎಫ್ ಐ ಆರ್ ಇದ್ದಿದ್ದವು.
ಡಿನೋಟಿಫಿಕೇಶನ್ ಮಾಡಿದ ಭೂಮಿಯ ಪ್ರಮಾಣ ಹಾಗೂ ದಿನಾಂಕಗಳು
- ಬಿಳೇಕಹಳ್ಳಿ – 1.17 ಎಕರೆ : ಜೂನ್ 19 2015 ರಂದು ಎಫ್ ಐ ಆರ್
- ಹಲಗೆವಡೇರಹಳ್ಳಿ- 6. 18 ಗುಂಟೆ : ಜೂನ್ 20 2015 ಎಫ್ ಐ ಆರ್
- ಜೆ. ಬಿ ಕಾವಲ್ ಗ್ರಾಮದಲ್ಲಿ 270 ಎಕರೆ ಡಿನೋಟಿಫಿಕೇಶನ್ ಗಾಗಿ 2015 ರ ಜೂನ್ 20 ರಂದು ಎಫ್ ಐ ಆರ್
- ಕೊತ್ತನೂರು ಗ್ರಾಮದಲ್ಲಿ 10 ಗುಂಟೆ ಜೂನ್ 19 ರಂದು ಎಫ್ ಐ ಆರ್
- ಕೊತ್ತನೂರು ಗ್ರಾಮದಲ್ಲಿ ಮತ್ತೊಂದು 31 ಗುಂಟೆ ಡಿನೋಟಿಫಿಕೇಶನ್ ಪ್ರಕರಣಕ್ಕೆ ಸಂಬಂಧಪಟ್ಟಂತೆ ಜೂನ್ 19 2015 ಎಫ್ ಐ ಆರ್
- ಲೊಟ್ಟೆಗೊಲ್ಲಹಳ್ಳಿಯಲ್ಲಿ 3.33 ಎಕರೆ ಡಿನೋಟಿಫಿಕೇಶನ್ ಪ್ರಕರಣ : 2015 ರ ಜೂನ್ 20 ರಂದು ಎಫ್ ಐ ಆರ್
- ವಲಗೇರ ಹಳ್ಳಿಯಲ್ಲಿ 10 ಎಕರೆ : 2015ರ ಜೂನ್ 26 ರಂದು ಎಫ್ ಐ ಆರ್
- 9 ಎಕರೆ ನಾಗರಬಾವಿಯಲ್ಲಿ ಡಿನೋಟಿಫಿಕೇಶನ್ : 2015 ರ ಜೂನ್ 26 ರಂದು ಎಫ್ ಐ ಆರ್
- ಕೊತ್ತನೂರು ಗ್ರಾಮದಲ್ಲಿ 3.18 ಎಕರೆ : ಜೂನ್ 27 2015ರಲ್ಲಿ ಎಫ್ ಐ ಆರ್
- ಚಳ್ಳಕೆರೆಯಲ್ಲಿ 2.16 ಎಕರೆ : ಜೂನ್ 20 2015 ರಲ್ಲಿ ಎಫ್ ಐ ಆರ್
- ಬನಶಂಕರಿ ಐದನೇ ಹಂತದಲ್ಲಿ 2.36 ಎಕರೆ ಡಿನೋಟಿಫಿಕೇಶನ್ ಗೆ ಸಂಬಂಧಿಸಿದಂತೆ ಜೂನ್ 22 2015 ರಂದು ಎಫ್ ಐ ಆರ್
- ರಾಚೇನಹಳ್ಳಿ 35.12 ಎಕರೆ 2015ರ ಜೂನ್ 22 ರಲ್ಲಿ ಎಫ್ ಐ ಆರ್
- ಥಣಿಸಂಧ್ರದಲ್ಲಿ 2.21 ಎಕರೆ ಭೂಮಿ ಡಿನೋಟಿಫಿಕೇಶನ್ ಜೂನ್ 23 2015 ರಲ್ಲಿ ಎಫ್ ಐ ಆರ್
- ಗುಡ್ಡದಹಳ್ಳಿಯಲ್ಲಿ 1.20 ಎಕರೆ , ಜೂನ್ 23 2015 ರಲ್ಲಿ ಎಫ್ ಐ ಆರ್
- ಹುಳಿಮಾವು – 2.10 ಎಕರೆ ಡಿನೋಟಿಫಿಕೇಶನ್ ಪ್ರಕರಣ : ಜೂನ್ 27 ರಂದು ಎಫ್ ಐ ಆರ್.