Advertisement

ಕಾಂಗ್ರೆಸ್‌ ನಾಯಕರ ವಿರುದ್ಧ ಬಿಎಸ್‌ವೈ ಆಕ್ರೋಶ

06:00 AM Dec 27, 2017 | Harsha Rao |

ಬೆಂಗಳೂರು: ಮಹದಾಯಿ ವಿವಾದ ಸಂಬಂಧ ಸಿಎಂ ಸಿದ್ದರಾಮಯ್ಯ ಹಾಗೂ ಕಾಂಗ್ರೆಸ್‌ನ ನಡವಳಿಕೆ ವಿರುದಟಛಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್‌ .ಯಡಿಯೂರಪ್ಪ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಬಿಜೆಪಿ ಕಚೇರಿ ಮುಂದೆ ಪ್ರತಿಭಟನೆ ನಡೆಸುತ್ತಿರುವ
ಮಹದಾಯಿ ಹೋರಾಟಗಾರರನ್ನು ಭೇಟಿ ಮಾಡಿದ ಬಳಿಕ ಪಕ್ಷದ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿದ ಅವರು, ಬಿಜೆಪಿ ವಿವಾದ ಶಮನಕ್ಕೆ ಪ್ರಾಮಾಣಿಕ ಪ್ರಯತ್ನ ನಡೆಸಿದರೂ, ಕಾಂಗ್ರೆಸ್‌ ಬೆಂಕಿ ಹಚ್ಚುವ ಕೆಲಸ ಮಾಡುತ್ತಿದೆ ಎಂದು ಆರೋಪಿಸಿದ್ದಾರೆ.

Advertisement

ಒಂದು ವೇಳೆ ಸಿದ್ದರಾಮಯ್ಯ ಪ್ರಾಮಾಣಿಕರಾಗಿದ್ದೇ ಆದಲ್ಲಿ, ಗೋವಾ ಕಾಂಗ್ರೆಸ್‌ ಹೋರಾಟದ ಹಿಂದೆ ಅವರ ಕೈವಾಡ ಇರದೇ ಹೋದಲ್ಲಿ ಅಮಿತ್‌ ಶಾ ನೇತೃತ್ವದಲ್ಲಿ ನಾವು ಗೋವಾ ಸಿಎಂ ಮನವೊಲಿಕೆ ಮಾಡಿದಂತೆ, ಅವರೂ ರಾಹುಲ್‌ ಗಾಂಧಿ ಮೂಲಕ ಅಲ್ಲಿನ ಕಾಂಗ್ರೆಸ್‌ ನಾಯಕರು ಹೋರಾಟದಿಂದ ಹಿಂದೆ ಸರಿಯುವಂತೆ ಮನವೊಲಿಕೆ ಮಾಡಲಿ ಎಂದು
ಸವಾಲು ಹಾಕಿದರು.

ಮನವೊಲಿಕೆಯಲ್ಲಿ ಬಿಜೆಪಿ ಯಶಸ್ವಿ: ಶೆಟ್ಟರ್‌: ವಿಧಾನಸಭೆ ಪ್ರತಿಪಕ್ಷ ನಾಯಕ ಜಗದೀಶ ಶೆಟ್ಟರ್‌ ಮಾತನಾಡಿ, ಮಹದಾಯಿ
ವಿಚಾರದಲ್ಲಿ ಈಗಾಗಲೇ ನ್ಯಾಯಾಧಿಕರಣ ಗೋವಾ ಪರವಾಗಿಯೇ ತೀರ್ಪು ನೀಡಿದೆ. ಆದರೂ, ಕುಡಿಯುವ ಸಲುವಾಗಿ
7.56 ಟಿಎಂಸಿ ನೀರು ಬೇಕು ಎಂಬ ನಮ್ಮ ಬೇಡಿಕೆಯನ್ನು ಅಲ್ಲಿನ ಮುಖ್ಯಮಂತ್ರಿಗಳು ಒಪ್ಪಿಕೊಂಡಿದ್ದರು. ಇಂಥ ಸಾಧನೆ ಬೇರಾವ ನೀರಾವರಿ ವಿವಾದಗಳಲ್ಲೂ ಆಗಿರಲಿಲ್ಲ. ಹೀಗಿರುವಾಗ ರಾಜಿ ಸಂಧಾನಕ್ಕೆ ವೇದಿಕೆ ಸಿದಟಛಿ ಮಾಡುವುದನ್ನು ಬಿಟ್ಟು, ಕಾಂಗ್ರೆಸ್‌ ರಾಜಕೀಯ ಮಾಡುತ್ತಿದೆ ಎಂದು ಆರೋಪಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next