Advertisement

ಪ್ರಚಾರದಲ್ಲಿ  ಭಾಗವಹಿಸುವೆ :ಬಿಎಸ್‌ವೈಗೆ ಎಸ್‌ಎಂಕೆ ಹೆಗಲು

12:58 AM Mar 17, 2019 | Team Udayavani |

ಬೆಂಗಳೂರು: ಮಾಜಿ ಮುಖ್ಯಮಂತ್ರಿ ಎಸ್‌.ಎಂ.ಕೃಷ್ಣ ಅವರನ್ನು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ ಅವರು ಭೇಟಿ ಮಾಡಿ, ಲೋಕಸಭಾ ಚುನಾವಣೆಯ ಸಕ್ರಿಯ ಪ್ರಚಾರದಲ್ಲಿ ತೊಡಗಿಸಿಕೊಳ್ಳುವಂತೆ ಮನವಿ ಮಾಡಿದ್ದಾರೆ. ಕೃಷ್ಣ ಅವರೂ ಯಡಿಯೂರಪ್ಪ ಅವರಿಗೆ ಸಂಪೂರ್ಣ ಸಹಕಾರ ನೀಡಲಿದ್ದು, ಪ್ರಚಾರ ಕಾರ್ಯದಲ್ಲಿ ಸಕ್ರಿಯರಾಗುವ ಭರವಸೆ ನೀಡಿದ್ದಾರೆ.

Advertisement

ಸದಾಶಿವ ನಗರದ ಎಸ್‌.ಎಂ.ಕೃಷ್ಣ ಅವರ ನಿವಾಸದಲ್ಲಿ ಅವರನ್ನು ಭೇಟಿ ಮಾಡಿದ ಯಡಿಯೂರಪ್ಪ ಅವರು ಮಂಡ್ಯದ ರಾಜಕೀಯ, ಲೋಕಸಭಾ ಚುನಾವಣಾ ಸಿದ್ಧತೆ ಮತ್ತು ಪ್ರಚಾರಕ್ಕೆ ಸಂಬಂಧಿಸಿದಂತೆ ಕೆಲಕಾಲ ಮಾತುಕತೆ ನಡೆಸಿದರು.

ಅನಂತರ ಮಾತನಾಡಿದ ಯಡಿಯೂರಪ್ಪ, ಹಿರಿಯ ನಾಯಕರಾದ ಎಸ್‌.ಎಂ.ಕೃಷ್ಣ ಅವರೊಂದಿಗೆ ಪ್ರಚಲಿತ ರಾಜಕೀಯ ವಿದ್ಯಮಾನಗಳ ಬಗ್ಗೆ ಮತ್ತು ಅಭ್ಯರ್ಥಿಗಳ ಆಯ್ಕೆ ಕುರಿತು  ಚರ್ಚೆ ನಡೆಸಿದ್ದೇವೆ. ಮಂಡ್ಯ, ಚಿಕ್ಕಮಗಳೂರು, ಹಾಸನ, ಶಿವಮೊಗ್ಗ ಸಹಿತ ಕರ್ನಾಟಕ ದಕ್ಷಿಣದ ಏಳೆಂಟು ಜಿಲ್ಲೆಗಳಲ್ಲಿ ಪ್ರಚಾರಕ್ಕೆ ಬರಲು ಅವರು ಒಪ್ಪಿದ್ದಾರೆ. ಇದರಿಂದ ನಮಗೆ ಆನೆ ಬಲ ಬಂದಂತಾಗಿದೆ. ದೇಶಾದ್ಯಂತ ಇರುವಂತೆ ರಾಜ್ಯದಲ್ಲಿ ಮೋದಿ ಅಲೆ ಜತೆಗೆ ಕೃಷ್ಣ ಪ್ರಚಾರಕ್ಕೆ ಬಂದರೆ ಅದರ ಪರಿಣಾಮ ಬೇರೆಯದ್ದೇ ಆಗಲಿದೆ ಎಂದರು.

ಮಂಡ್ಯ ಕ್ಷೇತ್ರದ ರಾಜಕೀಯದ ಕುರಿತಂತೆಯೂ ಚರ್ಚೆ ನಡೆಸಿದ್ದೇವೆ. ಕೃಷ್ಣ ಅವರು ಸಲಹೆ ಕೊಟ್ಟಿ¨ªಾರೆ. ಸುಮಲತಾ ಅಂಬರೀಷ್‌ ಸ್ಪರ್ಧೆ ಬಗ್ಗೆಯೂ ಚರ್ಚೆಯಾಗಿದೆ. ಸುಮಲತಾ ಅವರು ತಮ್ಮ ನಿರ್ಧಾರ ಪ್ರಕಟಿಸಿದ ಬಳಿಕ ನಾವು ಮತ್ತೂಮ್ಮೆ ಹಿರಿಯ ನಾಯಕರೆಲ್ಲ ಮಾತುಕತೆ ನಡೆಸಿ ಬಿಜೆಪಿ ನಿರ್ಧಾರ ಪ್ರಕಟಿಸಲಿದ್ದೇವೆ ಎಂದು ಹೇಳಿದರು.

ರಾಹುಲ್‌ಗಾಂಧಿ ಸೋಲು ಖಚಿತ!
ಎಐಸಿಸಿ ಅಧ್ಯಕ್ಷ ರಾಹುಲ್‌ ಗಾಂಧಿ ಸಹಿತ ಯಾರೇ ರಾಜ್ಯದಿಂದ ಸ್ಪರ್ಧೆ ಮಾಡಿದರೂ ಸೋಲು ನಿಶ್ಚಿತ, ಕರ್ನಾಟಕದಲ್ಲಿ ಅವರ ಸ್ಪರ್ಧೆ ಖಚಿತಪಡಿಸಲಿ, ಅನಂತರ ಅವರ ವಿರುದ್ಧ ಯಾರನ್ನು ಕಣಕ್ಕೆ ಇಳಿಸಬೇಕು ಎಂಬುದನ್ನು ಯೋಚನೆ ಮಾಡುತ್ತೇವೆ. ರಾಷ್ಟ್ರಾದ್ಯಂತ ಮೋದಿ ಗಾಳಿ ಬೀಸುತ್ತಿದೆ. ಯಾರೇ ಸ್ಪರ್ಧೆ ಮಾಡಿದರೂ ಸೋಲುತ್ತಾರೆ. ನಿಶ್ಚಿತವಾಗಿ ನಾವು 22 ಸ್ಥಾನ ಗೆಲ್ಲುತ್ತೇವೆ. ಎಸ್‌.ಎಂ.ಕೃಷ್ಣ ಅವರು ಸ್ಪರ್ಧೆ ಮಾಡಿದರೆ ಸಂತೋಷ ಎಂದರು.
ಎಸ್‌.ಎಂ.ಕೃಷ್ಣ ಮಾತನಾಡಿ, ರಾಹುಲ್‌ ಗಾಂಧಿ ವಿರುದ್ಧ ನಾನು ಸ್ಪರ್ಧಿಸಬೇಕೋ, ಬೇಡವೋ ಎಂಬುದನ್ನು ನಿರ್ಧರಿಸುವುದು ಯಡಿಯೂರಪ್ಪ  ಅವರಿಗೆ ಬಿಟ್ಟ ವಿಚಾರ ಎಂದರು. 

Advertisement

ಪ್ರಚಾರದಲ್ಲಿ  ಭಾಗವಹಿಸುವೆ
ಬಿಜೆಪಿಯ ಸಾಮಾನ್ಯ ನಿಷ್ಠಾವಂತ ಕಾರ್ಯಕರ್ತನಾಗಿ ಯಡಿಯೂರಪ್ಪನವರಿಗೆ ಪೂರ್ಣ ಸಹಕಾರ ಕೊಡಲು ತೀರ್ಮಾನಿಸಿದ್ದೇನೆ. 22 ಸ್ಥಾನ ಗೆಲ್ಲುವ ಗುರಿಗೆ ನನ್ನಿಂದ ಆದಷ್ಟು ಸಹಕಾರ ನೀಡುತ್ತೇನೆ. ಎÇÉೆಲ್ಲಿ ಆವಶ್ಯಕತೆ ಇದೆಯೋ ಅಲ್ಲಿ ಹೋಗಿ ಪ್ರಚಾರ ಮಾಡುತ್ತೇನೆ. ವಂಶ ಪಾರಂಪರ್ಯ ರಾಜಕಾರಣದ ಬಗ್ಗೆ ಜನ ತೀರ್ಮಾನ ಮಾಡಲಿದ್ದಾರೆ  ಎಂದು ಎಸ್‌.ಎಂ. ಕೃಷ್ಣ  ಹೇಳಿದರು.
 

Advertisement

Udayavani is now on Telegram. Click here to join our channel and stay updated with the latest news.

Next