Advertisement

ಸಕ್ಕರೆ ಕಾರ್ಖಾನೆ ಸ್ಥಿತಿಗತಿ ಬಗ್ಗೆ ಯಡಿಯೂರಪ್ಪ, ಸುಮಲತಾ ಸಭೆ

10:01 AM Sep 07, 2019 | keerthan |

ಬೆಂಗಳೂರು: ಮಂಡ್ಯ ಮತ್ತು ಪಾಂಡವಪುರದ ಸಕ್ಕರೆ ಕಾರ್ಖಾನೆಗಳ ಸ್ಥಿತಿಗತಿಗಳ ಬಗ್ಗೆ ಚರ್ಚಿಸಲು ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರು ಜಿಲ್ಲೆಯ ಜನಪ್ರತಿನಿಧಿಗಳು ಜೊತೆ ಸಭೆ ನಡೆಸಿದರು.

Advertisement

ಕಬ್ಬು ನುರಿಯುವ ಸಾಮರ್ಥ್ಯವನ್ನು 5000ಕ್ಕೆ ಹೆಚ್ಚಿಸಬೇಕು. ಟಿ.ಸಿ.ಡಿ ಬಾಯ್ಲಿಂಗ್ ಹೌಸ್ ರಿಪೇರಿ‌ ಮಾಡಿಸಬೇಕು. ಕೊನ್ನಳ್ಳಿ ಕೆರೆ ವಾಟರ್ ಲಯನ್ ಸ್ವಚ್ಚತೆ ಕೆಲಸ ಮತ್ತು ಹೆಬ್ಬಾಳ ನೀರಿನ ಮಾರ್ಗವನ್ನು ಸರಿಪಡಿಸಕಾಗಿದೆ. ವಿದ್ಯುತ್ ಉತ್ಪಾದನೆ ಸಾಮರ್ಥ್ಯವನ್ನು ಹೆಚ್ವಿಸಬೇಕಾಗಿದೆ ಎಂದು ಅಧಿಕಾರಿಗಳು ಮುಖ್ಯಮಂತ್ರಿಗಳಿಗೆ ಮನವಿ ಮಾಡಿದರು.

ರೈತರ ಕಬ್ಬು ಬೆಳೆಗೆ, ಕಬ್ಬು ಅರೆಯುವುದಕ್ಕೆ ಯಾವುದೇ ತೋಂದರೆ ಆಗದಂತೆ ಕ್ರಮ ಕೈಗೊಳ್ಳಬೇಕು. ಕಾರ್ಖಾನೆಯಲ್ಲಿ ಕೆಲಸ ಮಾಡುವ ನೌಕರರಿಗೂ ಸಹ ತೊಂದರೆ ಆಗಬಾರದು ಹಾಗಾಗಿ ಸಕ್ಕರೆ ಕಾರ್ಖಾನೆಗಳಿಗೆ ರೈತರಿಗೆ ಯಾವುದೇ ರೀತಿಯ ತೊಂದರೆ ಆಗದಂತೆ ಒಂದು ಪರಿಹಾರ ಕಂಡುಹಿಡಿಯಿರಿ. ಕಾರ್ಖಾನೆಗಳನ್ನು ಮಾತ್ರ ಯಾವುದೇ ಕಾರಣಕ್ಕೂ ನಿಲ್ಲಬಾರದು. ಇದರಿಂದ ರೈತರಿಗೆ ತೊಂದರೆ ಅಗಬಾರದು. ಹಾಗಾಗಿ ಕಾರ್ಖಾನೆಗಳು ಸಹ ಲಾಭಕ್ಕೆ ಮರಳಬೇಕು ರೈತರಿಗೆ ಸಹ ಒಳ್ಳೆಯ ಆದಾಯ ಬರಬೇಕು ಈ ರೀತಿಯ ಒಂದು ಪರಿಹಾರ ಕಂಡುಹಿಡಿಯಿರಿ ಎಂದು ಅಧಿಕಾರಿಗಳಿಗೆ ಮುಖ್ಯಮಂತ್ರಿಗಳಿಗೆ ತಾಕೀತು ಮಾಡಿದರು.

ಮೈ ಶುಗರ್ ಹಾಗು ಪಾಂಡವಪುರ ಸಕ್ಕರೆ ಕಾರ್ಖಾನೆ ಪುನರಾರಂಭ ಕುರಿತು ಸಿಎಂ ನೇತೃತ್ವದಲ್ಲಿ ಸಭೆ ನಡೆದಿದೆ. ಎರಡು ಕಾರ್ಖಾನೆಗಳಲ್ಲಿ ಸಾಕಷ್ಟು ಸಮಸ್ಯೆಗಳಿವೆ. ಈ ಬಗ್ಗೆ ಸಿಎಂ ಗಮನಕ್ಕೆ ತಂದಿದ್ದೇವೆ ಎಂದು ಸಂಸದೆ ಸುಮಲತಾ ಅಂಬರೀಷ್ ಸಭೆಯ ನಂತರ ಹೇಳಿಕೆ ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next