Advertisement

ಇದು ಪ್ರಜಾಪ್ರಭುತ್ವದ ಗೆಲುವು : ಬಿ.ಎಸ್. ಯಡಿಯೂರಪ್ಪ

09:14 AM Jul 24, 2019 | Team Udayavani |

ಬೆಂಗಳೂರು: ವಿಧಾನಸಭೆಯಲ್ಲಿ ಇಂದು ವಿಶ್ವಾಸ ಮತ ನಿರ್ಣಯದಲ್ಲಿ ಕುಮಾರಸ್ವಾಮಿ ನೇತೃತ್ವದ ಕಾಂಗ್ರೆಸ್ – ಜೆಡಿಎಸ್ ಸರಕಾರ ಸೋಲು ಅನುಭವಿಸಿದೆ. ಆ ಬಳಿಕ ವಿಧಾನ ಸೌಧದ ಹೊರಗಡೆ ಸುದ್ದಿಗಾರರೊಂದಿಗೆ ಮಾತನಾಡಿದ ಪ್ರತಿಪಕ್ಷದ ನಾಯಕ ಬಿ.ಎಸ್. ಯಡಿಯೂರಪ್ಪ ಅವರು ಇದು ಪ್ರಜಾಪ್ರಭುತ್ವದ ಗೆಲುವು ಎಂದು ಅಭಿಪ್ರಾಯಪಟ್ಟರು.

Advertisement

ಅಲ್ಪಮತಕ್ಕೆ ಕುಸಿದಿದ್ದ ಮೈತ್ರಿ ಸರಕಾರ ಜನ ಬೆಂಬಲವನ್ನೂ ಕಳೆದುಕೊಂಡಿತ್ತು. ಇದೀಗ ಸದನದಲ್ಲೇ ಸರಕಾರ ಬಹುಮತ ಕಳೆದುಕೊಂಡಿರುವುದರಿಂದ ಕಳೆದ ಕೆಲವು ದಿನಗಳಿಂದ ಕರ್ನಾಟಕದ ಜನತೆಗೆ ಬೇಸರ ಮೂಡಿಸಿದ್ದ ರಾಜಕೀಯ ಪ್ರಹಸನ ಕೊನೆಗೂ ಅಂತ್ಯಗೊಂಡಿದೆ ಎಂದು ಮಾಜೀ ಮುಖ್ಯಮಂತ್ರಿ ಅಭಿಪ್ರಾಯಪಟ್ಟರು.

ಪಕ್ಷದ ಮುಖಂಡರೊಂದಿಗೆ ಮತ್ತು ಶಾಸಕರೊಂದಿಗೆ ಚರ್ಚಿಸಿ ಮುಂದಿನ ತೀರ್ಮಾನವನ್ನು ಕೈಗೊಳ್ಳುವುದಾಗಿ ಬಿಜೆಪಿ ಶಾಸಕಾಂಗ ಪಕ್ಷದ ನಾಯಕರೂ ಆಗಿರುವ ಬಿಎಸ್ ವೈ ಅವರು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next