ಬೆಳಗಾವಿ: ಮಾಜಿ ಸಿಎಂ ಯಡಿಯೂರಪ್ಪ ಮತ್ತೆ ಹೋರಾಟದ ಅಖಾಡಕ್ಕೆ ಇಳಿಯ ಲಿದ್ದು, ಬೆಳಗಾವಿಯಲ್ಲಿ ರಾಜ್ಯ ಸರಕಾರದ ವಿರುದ್ಧ ಅಬ್ಬರಿಸಲಿದ್ದಾರೆ. ರಾಜ್ಯ ಸರಕಾರದ ವಿವಿಧ ನಿಲುವುಗಳನ್ನು ಖಂಡಿಸಿ ಬೆಳಗಾವಿ ಸುವರ್ಣ ಸೌಧದ ಸಮೀಪ ಬಿಜೆಪಿ ಶಾಸಕರ ಜತೆಗೆ ಡಿ. 13ರಂದು ಪ್ರತಿಭಟನೆ ನಡೆಸಲು ತೀರ್ಮಾನಿಸಲಾಗಿದೆ. ಈ ಹಿನ್ನೆಲೆಯಲ್ಲಿ ಮಂಗಳವಾರ ಯಡಿಯೂರಪ್ಪ ಬೆಳಗಾವಿಗೆ ಆಗಮಿಸಲಿದ್ದಾರೆ. ಇದೇ ವೇಳೆ ಸಚಿವ ಜಮೀರ್ ರಾಜೀನಾಮೆ ವಿಷಯದಲ್ಲಿ ಬಿಜೆಪಿ ವಿಧಾನಸಭೆಯಲ್ಲಿ ನಡೆಸುತ್ತಿದ್ದ ಹೋರಾಟವನ್ನು ವಾಪಸ್ ಪಡೆದಿದೆ. ಮಂಗಳವಾರ ಚರ್ಚೆಗೆ ಅವಕಾಶ ನೀಡುವುದಾಗಿ ಸ್ಪೀಕರ್ ಹೇಳಿದ್ದರಿಂದ ಈ ತೀರ್ಮಾನವಾಗಿದೆ.
ಬಿಜೆಪಿ ಹೊಂದಾಣಿಕೆಗೆ ಕೋರ್ ಕಮಿಟಿ
ಕಲಾಪದಲ್ಲಿ ಪದೇ ಪದೆ ಸೃಷ್ಟಿಯಾಗುತ್ತಿರುವ ಗೊಂದಲ ಹಾಗೂ ಹೊಂದಾ ಣಿಕೆ ಕೊರತೆಗೆ ಕೊನೆಗೂ ಪರಿಹಾರ ಕಂಡುಕೊಳ್ಳಲು ಬಿಜೆಪಿ ಮುಂದಾಗಿದ್ದು, ಹಿರಿಯ ಸದಸ್ಯರ ನೇತೃತ್ವದಲ್ಲಿ ಕೋರ್ ಕಮಿಟಿ ರಚಿಸಲಾಗಿದೆ. ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಅದರ ನೇತೃತ್ವ ವಹಿಸಲಿದ್ದಾರೆ. ಹಿರಿಯ ಶಾಸಕರಾದ ಆರಗ ಜ್ಞಾನೇಂದ್ರ, ಸುರೇಶ್ ಕುಮಾರ್, ಸಿ.ಸಿ. ಪಾಟೀಲ್, ಬಸನಗೌಡ ಪಾಟೀಲ್ ಯತ್ನಾಳ್, ವಿ. ಸುನಿಲ್ ಕುಮಾರ್, ಡಾ| ಅಶ್ವತ್ಥನಾರಾಯಣ, ಪರಿಷತ್ ಸದಸ್ಯರಾದ ಕೋಟ ಶ್ರೀನಿವಾಸ ಪೂಜಾರಿ, ಎನ್. ರವಿಕುಮಾರ್ ಕೋರ್ ಕಮಿಟಿ ಯಲ್ಲಿದ್ದಾರೆ. ಕಮಿಟಿಯು ಸದನ ಆರಂಭಗೊಳ್ಳು ವುದಕ್ಕೆ ಮುನ್ನ ಪ್ರತಿದಿನ ಅಶೋಕ್ ಹಾಗೂ ವಿಜಯೇಂದ್ರ ಜತೆ ಚರ್ಚೆ ನಡೆಸಿ ಯಾವ ವಿಷಯ ವನ್ನು ಪ್ರಸ್ತಾವಿಸಬೇಕು, ಸಭಾತ್ಯಾಗ, ಧರಣಿ ಇತ್ಯಾದಿ ವಿಚಾರಗಳನ್ನು ಸಮಿತಿ ನಿರ್ಧರಿಸಲಿದೆ.