ಬಾಗಲಕೋಟೆ: ರಾಜ್ಯದ ಮುಖ್ಯಮಂತ್ರಿಯಾಗಿ ಶುಕ್ರವಾರ ಬಿ.ಎಸ್. ಯಡಿಯೂರಪ್ಪ ಅವರು ಪ್ರಮಾಣ ವಚನ ಸ್ವೀಕರಿಸಿದ ಹಿನ್ನೆಲೆಯಲ್ಲಿ ಎಂಎಲ್ಸಿ ಹನುಮಂತ ನಿರಾಣಿ ನೇತೃತ್ವದಲ್ಲಿ ಗದ್ದನಕೇರಿ ಕ್ರಾಸ್‌ನಲ್ಲಿ ವಿಜಯೋತ್ಸವ ಆಚರಿಸಲಾಯಿತು.
ಎಂಎಲ್ಸಿ ಹನಮಂತ ನಿರಾಣಿ ಹಾಗೂ ಜಿಪಂ ಮಾಜಿ ಉಪಾಧ್ಯಕ್ಷ, ಹಾಲಿ ಸದಸ್ಯ ಹೂವಪ್ಪ ರಾಠೊಡ ನೇತೃತ್ವದಲ್ಲಿ ಬಿಜೆಪಿ ಕಾರ್ಯಕರ್ತರು, ಪಟಾಕಿ ಸಿಡಿಸಿ, ಸಿಹಿ ಹಂಚಿದರು.
ಈ ವೇಳೆ ಮಾತನಾಡಿದ ವಿಧಾನ ಪರಿಷತ್ ಸದಸ್ಯ ಹನಮಂತ ನಿರಾಣಿ, 40 ವರ್ಷಗಳಿಂದ ಹೋರಾಟದ ಜೀವನ ನಡೆಸಿರುವ ಯಡಿಯೂರಪ್ಪ ಅವರು, 4ನೇ ಬಾರಿಗೆ ರಾಜ್ಯದ ಮುಖ್ಯಮಂತ್ರಿಯಾಗಿದ್ದಾರೆ. ದಕ್ಷಿಣ ಭಾರತದಲ್ಲಿ ಮೊದಲ ಬಾರಿಗೆ ಬಿಜೆಪಿ ಅಧಿಕಾರಕ್ಕೆ ಬರುವಲ್ಲಿ ಪ್ರಮುಖ ಪಾತ್ರ ವಹಿಸಿರುವ ಯಡಿಯೂರಪ್ಪ ಅವರು, ರಾಜ್ಯದ ಶ್ರೀಸಾಮಾನ್ಯರ ಸಮಸ್ಯೆ ಅರಿತವರಾಗಿದ್ದಾರೆ ಎಂದರು.
ಎಪಿಎಂಸಿ ನಿರ್ದೇಶಕ ಶ್ರೀಶೈಲ ಗೌರಿ, ಬೀಳಗಿ ಪಪಂ ಸದಸ್ಯ ವಿಠuಲ ಬಾಗೇವಾಡಿ, ಪ್ರಮುಖರಾದ ಮಲ್ಲಿಕಾರ್ಜುನ ಬೇವರಗಿ, ಎಚ್.ಎನ್. ಅಂಬರಗಟ್ಟಿ, ಮಹಾದೇವಪ್ಪ ತಳವಾರ, ಮಹಾದೇವಪ್ಪ ನೀಲನ್ನವರ, ಮಹೇಶ ಮೇಟಿ, ಸುರೇಶ ಬಣಕಾರ, ಮಲ್ಲಿಕಾರ್ಜುನ ಹಿರೇಮಠ, ಫಕೀರಪ್ಪ ಚಿಂಚಲಿ, ಈರಪ್ಪ ಜಂಗನ್ನವರ, ಶ್ರೀಶೈಲ ತಂಗಡಗಿ, ವೀರಭದ್ರಪ್ಪ ಕೆಂಗಾರ, ರಮೇಶ ಪೂಜಾರಿ ಮುಂತಾದವರು ವಿಜಯೋತ್ಸವದಲ್ಲಿ ಪಾಲ್ಗೊಂಡಿದ್ದರು.