Advertisement

ಮೂರು ವರ್ಷ ಬಿಎಸ್‌ವೈ ಮುಖ್ಯಮಂತ್ರಿ: ಬಚ್ಚೇಗೌಡ

06:56 AM Jun 03, 2020 | Lakshmi GovindaRaj |

ಚಿಕ್ಕಬಳ್ಳಾಪುರ: ಬಿಜೆಪಿ ಪಕ್ಷದಲ್ಲಿ ಯಾವುದೇ ಬಣಗಳು ಇಲ್ಲ. ಅಧಿಕಾರಕ್ಕಾಗಿ ಅಥವಾ ಸ್ಥಾನಮಾನಕ್ಕಾಗಿ ಯಾರು ಏನೇ ಕೇಳಿದರೂ ತಪ್ಪಿಲ್ಲ. ಮುಂದಿನ ಮೂರು ವರ್ಷಗಳ ಕಾಲ ಬಿ.ಎಸ್‌. ಯಡಿಯೂರಪ್ಪ ಮುಖ್ಯ ಮಂತ್ರಿಯಾಗಿ  ಕಾರ್ಯನಿರ್ವಹಿಸಲಿದ್ದಾರೆ ಎಂದು ಸಂಸದ ಬಿ. ಎನ್‌.ಬಚ್ಚೇಗೌಡ ತಿಳಿಸಿದರು.

Advertisement

ಚಿಕ್ಕಬಳ್ಳಾಪುರದಲ್ಲಿ ಮಂಗಳ ವಾರ ಸುದ್ದಿಗಾರರೊಂದಿಗೆ ಮಾತ ನಾಡಿದ ಅವರು, ಯಾವುದೇ ಪಕ್ಷ ಬಾಗಿಲು ಮುಚ್ಚಿ ಕೊಂಡು ರಾಜ ಕಾರಣ ಮಾಡುವು  ದಿಲ್ಲ. ಪಕ್ಷಕ್ಕೆ ಬರುವರು, ಹೋಗುವವರು ಇರುತ್ತಾರೆ. ಎಲ್ಲರನ್ನು ತೃಪ್ತಿಪಡಿಸಲಿಕ್ಕೆ ಆಗುವುದಿಲ್ಲ. ಕೆಲವರು ಸ್ಥಾನಮಾನ ಕೇಳು ವುದರಲ್ಲಿ ತಪ್ಪಿಲ್ಲ, ಬಿಜೆಪಿಯಲ್ಲಿ ಬಣ ರಾಜಕೀಯ ಮಾಧ್ಯಮಗಳ ಸೃಷ್ಟಿ ಎಂದರು.

ಯಲಹಂಕ  ಮೇಲ್ಸೆತುವೆಗೆ ವೀರ ಸಾವರ್ಕರ್‌ ಹೆಸರು ಇಡಲು ವಿರೋಧ ವ್ಯಕ್ತವಾಗುತ್ತಿರುವ ಕುರಿತು ಪ್ರತಿಕ್ರಿಯೆ ನೀಡಿದ ಬಚ್ಚೇಗೌಡ, ದೇಶದಲ್ಲಿ ಯಾರ ಹೆಸರು ಎಲ್ಲಿ ಬೇಕಾದರೂ ಇಡಬಹುದು. ಸಾವರ್ಕರ್‌ ರಾಷ್ಟ್ರೀಯವಾದಿ. ಅವರ ಹೆಸರು ಇಡಬೇಕೆಂದು ನನ್ನದು ಒತ್ತಾಯ ಇದೆ. ಕೆಲವರು ಅನವಶ್ಯಕ ವಾಗಿ ವಿರೋಧ ಮಾಡುತ್ತಿದ್ದಾರೆ ಎಂದರು.

ಉಢಾಪೆಯಾಗಿ ಪ್ಯಾಕೇಜ್‌ ಘೋಷಿಸಿಲ್ಲ: ದೇಶದ ಇತರೆ ರಾಷ್ಟ್ರಗಳಿಗೆ ಹೋಲಿಸಿದರೆ ದೇಶದ ಆರ್ಥಿಕ ಪರಿಸ್ಥಿತಿ ಚೆನ್ನಾಗಿದೆ. ಪ್ರಧಾನಿ ನರೇಂದ್ರ ಮೋದಿ ಕೊರೊನಾ ಪರಿಹಾರವಾಗಿ 20 ಲಕ್ಷ ಕೋಟಿ ಪ್ಯಾಕೇ ಜ್‌ನ್ನು ಉಢಾಪೆಯಾಗಿ ಘೋಷಿಸಿಲ್ಲ ಎಂದರು. ಜಿಲ್ಲೆಯ ದ್ರಾಕ್ಷಿ, ಹಣ್ಣು, ತರ ಕಾರಿ ಬೆಳೆ ಗಾರರಿಗೂ ಸೂಕ್ತ ಪರಿಹಾರ ಸಿಗಬೇಕಿದೆ. ಈ ನಿಟ್ಟಿ ನಲ್ಲಿ ಸರ್ಕಾರದ ಮೇಲೆ ಒತ್ತಡ ತರುವ ಕೆಲಸ ಮಾಡಲಾ ಗುವುದು. ಕೊರೊನಾ ಸೋಂಕು ತಡೆ ಯಲು ಕೇಂದ್ರ, ರಾಜ್ಯ  ಸರ್ಕಾರಗಳು ಸಾಕಷ್ಟು ಶ್ರಮ ವಹಿಸಿ ಕೆಲಸ ಮಾಡುತ್ತಿವೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next