ಬೆಂಗಳೂರು: ಮಾಜಿ ಸಚಿವ ಮತ್ತು ಯೋಜನಾ ಆಯೋಗದ ಉಪಾಧ್ಯಕ್ಷ ಬಿ.ಜೆ.ಪುಟ್ಟಸ್ವಾಮಿ ಅವರು ಸದ್ಯದಲ್ಲೇ ಸ್ವಾಮೀಜಿಗಳಾಗಲಿದ್ದಾರೆ. ಮೇ 6ರಂದು ಸನ್ಯಾಸ ದೀಕ್ಷೆ ಪಡೆಯಲಿರುವ ಬಿ.ಜೆ. ಪುಟ್ಟಸ್ವಾಮಿ ಅವರು, 15ರಂದು ಬೆಂಗಳೂರಿನ ಮಾದನಾಯ್ಕನಹಳ್ಳಿಯಲ್ಲಿರುವ ಶ್ರೀ ಕ್ಷೇತ್ರ ತೈಲೇಶ್ವರ ಗಾಣಿಗರ ಮಹಾ ಸಂಸ್ಥಾನ ಮಠದ ಪ್ರಥಮ ಪೀಠಾಧಿಪತಿಯಾಗಿ ಅಲಂಕೃತಗೊಳ್ಳಲಿದ್ದಾರೆ.
ಇದನ್ನೂ ಓದಿ:16 ದಿನಗಳಲ್ಲಿ 14ನೇ ಬಾರಿ ಪೆಟ್ರೋಲ್, ಡೀಸೆಲ್ ಬೆಲೆ ಹೆಚ್ಚಳ; ಎಲ್ಲಿ ಎಷ್ಟು ಏರಿಕೆಯಾಗಿದೆ?
ಈ ಬಗ್ಗೆ ಪುಟ್ಟಸ್ವಾಮಿ ಅವರೇ ಮಾಹಿತಿ ನೀಡಿದ್ದು, ಮಠಕ್ಕೆ ಪೀಠಾಧ್ಯಕ್ಷರ ನೇಮಕ ಮಾಡಬೇಕಿತ್ತು. ಆಗ ರಾಜರಾಜೇಶ್ವರಿ ನಗರದ ವಿಜಯೇಂದ್ರ ಪುರಿ ಸ್ವಾಮೀಜಿ ಅವರು ನೀವೇ ಮೊದಲ ಪೀಠಾಧ್ಯಕ್ಷರಾಗಿ ಎಂದರು.
ಅಲ್ಲದೆ, ನಾನು ಅವರ ಪ್ರಾರ್ಥನೆ ವೇಳೆ ಕಾಣಿಸಿಕೊಂಡಿದ್ದೇನಂತೆ. ಹೀಗಾಗಿ ನಾನೇ ಪೀಠಾಧ್ಯಕ್ಷನಾಗಲಿದ್ದೇನೆ. ಅದಕ್ಕೂ ಮೊದಲು ದೀಕ್ಷೆ ಪಡೆಯುತ್ತೇನೆಂದು ಹೇಳಿದರು. ಸನ್ಯಾಸ ದೀಕ್ಷೆಗೂ ಮುನ್ನ ಯೋಜನಾ ಆಯೋಗದ ಉಪಾಧ್ಯಕ್ಷ ಸ್ಥಾನಕ್ಕೆ ಪುಟ್ಟಸ್ವಾಮಿ ರಾಜೀನಾಮೆ ನೀಡಲಿದ್ದಾರೆ. ಪಟ್ಟಾಭಿಷೇಕ ಕಾರ್ಯ ಕ್ರಮಕ್ಕೆ ಆಗ ಮಿಸು ವಂತೆ ಈಗಾಗಲೇ ಸಿಎಂ ಬಸವರಾಜ ಬೊಮ್ಮಾಯಿ, ಮಾಜಿ ಸಿಎಂಗಳಾದ ಬಿ.ಎಸ್. ಯಡಿಯೂರಪ್ಪ, ಸಿದ್ದರಾಮಯ್ಯ, ಎಚ್.ಡಿ. ಕುಮಾರಸ್ವಾಮಿ, ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಸೇರಿ ಹಲವು ರಾಜಕೀಯ ನಾಯಕರಿಗೆ ಆಹ್ವಾನ ನೀಡಿದ್ದಾರೆ.