Advertisement

BSP;ಲೋಕಸಭೆ ಚುನಾವಣೆಗೆ ಕೆಲವೇ ತಿಂಗಳು ಬಾಕಿ ಇರುವಾಗ ಉತ್ತರಾಧಿಕಾರಿಯನ್ನು ನೇಮಿಸಿದ ಮಾಯಾವತಿ

02:55 PM Dec 10, 2023 | Team Udayavani |

ಲಕ್ನೋ:2024ರ ಲೋಕಸಭೆ ಚುನಾವಣೆಗೆ ಕೆಲವು ತಿಂಗಳು ಬಾಕಿ ಇರುವಾಗ ಮಹತ್ವದ ರಾಜಕೀಯ ವಿದ್ಯಮಾನವೊಂದರಲ್ಲಿ ಬಹುಜನ ಸಮಾಜ ಪಕ್ಷದ (ಬಿಎಸ್‌ಪಿ) ಮುಖ್ಯಸ್ಥೆ ಹಾಗೂ ಉತ್ತರ ಪ್ರದೇಶದ ಮಾಜಿ ಸಿಎಂ ಮಾಯಾವತಿ ಅವರು ಭಾನುವಾರ(ಡಿ.10 ರಂದು) ತಮ್ಮ ರಾಜಕೀಯ ಉತ್ತರಾಧಿಕಾರಿಯ  ಘೋಷಣೆ  ಮಾಡಿದ್ದಾರೆ.

Advertisement

ಮಾಯಾವತಿ ಅವರು, ತಮ್ಮ ರಾಜಕೀಯ ಉತ್ತರಾಧಿಕಾರಿಯಾಗಿ ಸೋದರಳಿಯ ಆಕಾಶ್ ಆನಂದ್ ಅವರನ್ನು ನೇಮಿಸಿದ್ದಾರೆ. 2024ರ ಲೋಕಸಭೆ ಚುನಾವಣೆಗೆ ಪಕ್ಷದ ಸಿದ್ಧತೆಗಳನ್ನು ಪರಿಶೀಲಿಸಲು ಮಾಯಾವತಿ ಅವರು ಕರೆದಿದ್ದ ಸಭೆಯಲ್ಲಿ ಈ ನಿರ್ಧಾರದ ಕುರಿತ ಘೋಷಣೆಯನ್ನು ಮಾಡಲಾಗಿದೆ.

“ಆಕಾಶ್ ಆನಂದ್ ಅವರು ಬಿಎಸ್ಪಿಯ ಉಪಸ್ಥಿತಿ ಮತ್ತು ಪಕ್ಷ ದುರ್ಬಲವಾಗಿರುವ ಕಡೆ ಚುನಾವಣಾ ಸಿದ್ಧತೆಗಳನ್ನು ಪರಿಶೀಲಿಸುತ್ತಾರೆ. ಮಾಯಾವತಿ ಅವರು ಉತ್ತರ ಪ್ರದೇಶ ಮತ್ತು ಉತ್ತರಾಖಂಡದಲ್ಲಿ ಪಕ್ಷವನ್ನು ಮುನ್ನಡೆಸುತ್ತಾರೆ” ಎಂದು ಬಿಎಸ್ಪಿ ನಾಯಕ ಉದಯವೀರ್ ಸಿಂಗ್ ʼಎಎನ್‌ ಐʼಗೆ ಹೇಳಿದ್ದಾರೆ.

ಯಾರು ಈ ಆಕಾಶ್‌ ಆನಂದ್?

ಆಕಾಶ್‌ ಆನಂದ್‌ ಅವರು ಮಾಯಾವತಿ ಅವರ ಕಿರಿಯ ಸಹೋದರನ ಪುತ್ರ. ಬಿಎಸ್‌ಪಿಯಲ್ಲಿ ಆಕಾಶ್‌ ಅವರ ಪರಿಚಯ ಹೊಸತಲ್ಲ. 2019 ರ ಲೋಕಸಭೆ ಚುನಾವಣೆಯ ಸಂದರ್ಭದಲ್ಲಿ ಆಕಾಶ್‌ ಅವರನ್ನು ರಾಷ್ಟ್ರೀಯ ಸಂಯೋಜಕರನ್ನಾಗಿ ಮಾಡಲಾಗಿತ್ತು. ಇದರೊಂದಿಗೆ ಅವರಿಗೆ ಚುನಾವಣ ಉಸ್ತುವಾರಿಯ ಜವಾಬ್ದಾರಿಯನ್ನು ನೀಡಲಾಗಿತ್ತು.

Advertisement

ಇತ್ತೀಚೆಗೆ ನಡೆದ ನಾಲ್ಕು ಚುನಾವಣೆಗಳಿಗೆ ವಿಶೇಷವಾಗಿ ಮಧ್ಯಪ್ರದೇಶ ಮತ್ತು ರಾಜಸ್ಥಾನದಲ್ಲಿ ಪ್ರಮುಖ ಜವಾಬ್ದಾರಿಗಳನ್ನು ಆಕಾಶ್ ನಿರ್ವಹಿಸಿದ್ದರು.  ಆನಂದ್ ಅವರು ಡಾ. ಬಿ ಆರ್ ಅಂಬೇಡ್ಕರ್ ಅವರ ಜನ್ಮದಿನದಂದು ಆಳ್ವಾರ್‌ನಲ್ಲಿ 13 ಕಿಮೀ “ಸ್ವಾಭಿಮಾನ್ ಸಂಕಲ್ಪ ಯಾತ್ರೆ” ಯಲ್ಲಿ ಭಾಗವಹಿಸಿದ್ದರು. ಅವರು 2019 ರಲ್ಲಿ ರಾಜಸ್ಥಾನದಲ್ಲಿ ಬಿಎಸ್ಪಿಯ ಚುನಾವಣ ಪ್ರಚಾರದಲ್ಲೂ ಮುಂಚೂಣಿಯಲ್ಲಿ ಕಾಣಿಸಿಕೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next