Advertisement

ಕಂಬಳಬೆಟ್ಟು: BSNL ಸಿಗ್ನಲ್‌ ಇಲ್ಲ

05:05 AM May 26, 2018 | Team Udayavani |

ವಿಟ್ಲ : ವಿಟ್ಲ ಪರಿಸರದಲ್ಲಿ BSNL ಮೊಬೈಲ್‌ ಗ್ರಾಹಕರಿಗೆ ಅನುಕೂಲವಾಗುವಂತೆ ಎರಡು ಟವರ್‌ ಸ್ಥಾಪಿಸಲಾಗಿತ್ತು. ಮೊದಲನೆಯದು ವಿಟ್ಲ ದೂರವಾಣಿ ವಿನಿಮಯ ಕೇಂದ್ರದಲ್ಲಿ, ಎರಡನೆಯದು ಕಂಬಳಬೆಟ್ಟು ಎಂಬಲ್ಲಿ. ಆದರೆ ಕಂಬಳಬೆಟ್ಟು ಟವರ್‌ನಿಂದ ಸಿಗ್ನಲ್‌ ಸಿಗುತ್ತಿಲ್ಲ. ಪರಿಣಾಮವಾಗಿ ಗ್ರಾಹಕರಲ್ಲಿ ಮೊಬೈಲ್‌ ಇದ್ದೂ ಇಲ್ಲದಂತಾಗಿದೆ. ಇತರ ಕಂಪೆನಿಗಳಿಗೆ ದುಂಬಾಲು ಬೀಳುವಂತಾಗಿದೆ ಎಂದು ಗ್ರಾಹಕರು ದೂರುತ್ತಿದ್ದಾರೆ. ಕಳೆದ 15 ದಿನಗಳಿಂದ ಈ ಸಮಸ್ಯೆ ಹೆಚ್ಚಾಗಿದೆ. ಚಂದಳಿಕೆಯಿಂದ ಕಂಬಳಬೆಟ್ಟುವರೆಗೆ BSNL ಮೊಬೈಲ್‌ ಸಿಗ್ನಲ್‌ ಸಿಗುವುದೇ ಇಲ್ಲ. ಕಾರಣ ಕೇಳಿದಾಗ ಸಮರ್ಪಕ ಉತ್ತರವೂ ಸಿಗುತ್ತಿಲ್ಲ. ವಿಟ್ಲ ದೂರವಾಣಿ ವಿನಿಮಯ ಕೇಂದ್ರದ ಅಧಿಕಾರಿಗಳು ಮೊಬೈಲ್‌ ಟವರ್‌ ಬಗ್ಗೆ ಕಾರ್ಯನಿರ್ವಹಿಸಲಾಗುವುದಿಲ್ಲ. ಮೇಲಧಿಕಾರಿಗಳು ಇದಕ್ಕೆ ಸ್ಪಂದಿಸಿ, ಸೂಕ್ತ ಕ್ರಮ ಕೈಗೊಳ್ಳಬೇಕಾಗಿದೆ.

Advertisement

ವಿಟ್ಲ ಸುತ್ತಮುತ್ತಲ ಗ್ರಾಮಾಂತರ ಪ್ರದೇಶದಲ್ಲಿಯೂ ಮೊಬೈಲ್‌ ಟವರ್‌ ಸಮಸ್ಯೆ ಹೆಚ್ಚಾಗಿದೆ. ಅಳಿಕೆ, ಪೆರುವಾಯಿ, ಮಾಣಿಲ, ಕರೋಪಾಡಿ, ಕನ್ಯಾನ, ಪುಣಚ ಮೊದಲಾದೆಡೆಗಳಲ್ಲಿ ಸಿಗ್ನಲ್‌ ಸಮಸ್ಯೆಯಿದೆ. ಮಿಂಚು, ಗುಡುಗು, ಸಿಡಿಲು ಆರಂಭವಾದೊಡನೆ ಈ ಟವರ್‌ ಪೂರ್ಣ ನಿಷ್ಕ್ರಿಯಗೊಳ್ಳುತ್ತವೆ. ಎಲ್ಲ ಗ್ರಾಹಕರ ಮೊಬೈಲ್‌ ಗ‌ಳು ವ್ಯಾಪ್ತಿ ಪ್ರದೇಶದಿಂದ ಹೊರಗುಳಿಯುತ್ತವೆ. ಇಲ್ಲಿನ ಗ್ರಾಹಕರಿಗೆ ಒಳ ಬರುವ ಕರೆಗಳೂ ಇಲ್ಲದೆ ಹೊರಹೋಗುವ ಕರೆಗಳೂ ಸಿಗದೇ ದ್ವೀಪದಲ್ಲಿರುವಂತೆ ಭಾಸವಾಗುತ್ತದೆ ಎಂದು ದೂರಿದ್ದಾರೆ. ಉಳಿದೆಲ್ಲ ಕಂಪೆನಿಗಳು 4ಜಿ, 5ಜಿ ಸೌಲಭ್ಯಗಳನ್ನು ಕಲ್ಪಿಸುತ್ತಿರುವಾಗ BSNL ಇನ್ನೂ 3ಜಿ ಸೌಲಭ್ಯವನ್ನೇ ಪೂರೈಸುತ್ತಿಲ್ಲ. ಕನ್ಯಾನದಲ್ಲಿ ದೂರವಾಣಿ ವಿನಿಮಯ ಕೇಂದ್ರದಲ್ಲಿ 3ಜಿ ಬಗ್ಗೆ ಜಾಹೀರಾತಿದೆ. ಆದರೆ ಇನ್ನೂ 2ಜಿಯಲ್ಲೇ ಇದೆ. ವಿಟ್ಲದಲ್ಲಿ 3ಜಿ ಸೌಲಭ್ಯವೂ ಸಮರ್ಪಕವಾಗಿಲ್ಲ. ಆಗಾಗ 2ಜಿ ಸೌಲಭ್ಯಕ್ಕೆ ತಿರುಗಿ, ಕೇವಲ ಸುತ್ತು ಹೊಡೆಯುವ ದೃಶ್ಯವನ್ನೇ ಮೊಬೈಲಲ್ಲಿ ವೀಕ್ಷಿಸಬೇಕಾಗುತ್ತದೆ ಎಂದೂ ಗ್ರಾಹಕರು ದೂರಿದ್ದಾರೆ.

ಇಲಾಖೆಯ ಸಮಸ್ಯೆಯೇ ಅಲ್ಲ
ಭೂಮಿಯ ಮಾಲಕರ ಜಾಗವನ್ನು ಮತ್ತೂಂದು ಕಡೆ ಗುರುತಿಸಿ, ಟವರನ್ನು ಸ್ಥಳಾಂತರಗೊಳಿಸಬೇಕು. ಅವರ ಒಪ್ಪಿಗೆಯಲ್ಲಿ ಇನ್ನೊಂದು ಜಾಗವನ್ನು ಆಯ್ಕೆ ಮಾಡಿದ್ದೇವೆ. ಇದೀಗ ಅವರು ಕಾಮಗಾರಿ ನಡೆಸಲು ಬಿಡುತ್ತಿಲ್ಲ. ಲೀಗಲ್‌ ನೋಟಿಸ್‌ ಕಳುಹಿಸಿದ್ದೇವೆ ಎನ್ನುತ್ತಿದ್ದಾರೆ. ನಮ್ಮ ಇಲಾಖೆಯ ಸಮಸ್ಯೆಯೇ ಅಲ್ಲ. ಅದನ್ನು ಬಗೆಹರಿಸುವ ಅಗತ್ಯವಿದೆ. ಅನೇಕ ಗ್ರಾಹಕರ ದೂರು ಇದೆ. ಪತ್ರಕರ್ತರೂ ಅವರ ಜತೆ ಮಾತನಾಡಿ ಸಮಸ್ಯೆ ಬಗೆಹರಿಸಲು ಪ್ರಯತ್ನಿಸಿದಲ್ಲಿ ಸುಲಭ ಸಾಧ್ಯವಾಗುತ್ತದೆ.
– ಪ್ರಕಾಶ್‌ ಜನರಲ್‌ ಮ್ಯಾನೇಜರ್‌, BSNL

ಸ್ಪಂದನೆ ಇಲ್ಲ
ಈ ಬಗ್ಗೆ ಸ್ಥಳೀಯ ಅಧಿಕಾರಿ ಜಯಪ್ರಕಾಶ್‌ ಅವರಲ್ಲಿ ಮಾತನಾಡಿದೆ. ಅವರು ಜನರಲ್‌ ಮ್ಯಾನೇಜರ್‌ ಗೆ ಈ ಸಂದೇಶ ರವಾನಿಸಿದ್ದಾರೆ. ಆದರೆ ಸ್ಪಂದನೆ ಇಲ್ಲ. ವಾಸ್ತವವಾಗಿ ಆಂತರಿಕ ಸಮಸ್ಯೆ ಬೇರೆಯೇ ಇದೆ. ಅದೇನಿದ್ದರೂ ಮೇಲಧಿಕಾರಿಗಳು ಆಗಮಿಸಿ, ಗ್ರಾಹಕರ ಸಮಸ್ಯೆಯನ್ನು ಪರಿಹರಿಸಲು ಸೂಕ್ತ ಕ್ರಮಕೈಗೊಳ್ಳಬೇಕು.
– ದಿನಕರ ಭಟ್‌ ಮಾವೆ, ಮಸ್ಕತ್‌ ಉದ್ಯಮಿ

ದೂರು ನೀಡಿದ್ದಾರೆ
ಸಮಸ್ಯೆ ಇರುವುದು ಹೌದು. ಗ್ರಾಹಕರು ದೂರು ನೀಡಿದ್ದಾರೆ. ಈ ಬಗ್ಗೆ ಮೇಲಧಿಕಾರಿಗಳಲ್ಲಿ ಮಾತನಾಡಬೇಕು. ನಾವು ಉತ್ತರ ನೀಡುವುದು ಸಮಂಜಸವಲ್ಲ.
– ಜಯಪ್ರಕಾಶ್‌, ವಿಟ್ಲ BSNL, JETO

Advertisement
Advertisement

Udayavani is now on Telegram. Click here to join our channel and stay updated with the latest news.

Next