Advertisement

ಬಿಎಸ್ಸೆನ್ನೆಲ್‌ನಲ್ಲಿ ವಿಆರ್‌ಎಸ್‌ ಜಾರಿ

09:49 AM Nov 08, 2019 | Hari Prasad |

ಹೊಸದಿಲ್ಲಿ: ಸರಕಾರಿ ಸ್ವಾಮ್ಯದ ಬಿಎಸ್‌ಎನ್‌ಎಲ್‌ ಸಂಸ್ಥೆಯು ತನ್ನ ಉದ್ಯೋಗಿಗಳಿಗೆ ಸ್ವಯಂ ನಿವೃತ್ತಿ (ವಿ.ಆರ್‌.ಎಸ್‌.) ಯೋಜನೆಯನ್ನು ಜಾರಿಗೊಳಿಸಿದೆ. ವಿ.ಆರ್‌.ಎಸ್‌. ಆಯ್ಕೆಗೆ ನ.4ರಿಂದ ಡಿ.3ರವರೆಗೆ ಅವಕಾಶವಿದ್ದು, ಸಂಸ್ಥೆಯ ಸುಮಾರು 70,000ದಿಂದ 80,000 ಉದ್ಯೋಗಿಗಳು ಇದರ ಲಾಭ ಪಡೆಯಬಹುದು ಎಂದು ನಿರೀಕ್ಷಿಸಲಾಗಿದೆ. ಇದರಿಂದ ಸಂಸ್ಥೆಗೆ 7,000 ಕೋಟಿ ರೂ.ಗಳಷ್ಟು ವೇತನ ಉಳಿಯಲಿದೆ.

Advertisement

ಈ ಯೋಜನೆಯನ್ನು ಪ್ರಕಟಿಸಿದ ಬಿಎಸ್‌ಎನ್‌ಎಲ್‌ ಮುಖ್ಯಸ್ಥ ಪಿ.ಕೆ. ಪುರ್ವಾರ್‌, ಕೇಂದ್ರ ಸರಕಾರದಿಂದ ಈವರೆಗೆ ಜಾರಿಯಾಗಿರುವ ವಿ.ಆರ್‌.ಎಸ್‌ಗಳಲ್ಲೇ ಇದು ಅತ್ಯಂತ ಲಾಭಕರ ಎಂದಿದ್ದಾರೆ.

ಪರಿಹಾರ: ಸಂಸ್ಥೆಯ ನಿಯಮಿತ ಹಾಗೂ ಕಾಯಂ ಉದ್ಯೋಗಿಗಳಿಗೆ ಅಥವಾ ಬಿಎಸ್‌ಎನ್‌ಎಲ್‌ನಿಂದ ಬೇರೆ ಇಲಾಖೆಗಳಿಗೆ ಡೆಪ್ಯೂಟೇಷನ್‌ ಮೇರೆಗೆ ವರ್ಗಾವಣೆಯಾದ ಸಿಬಂದಿಗೂ ಇದು ಅನ್ವಯ. 50 ವರ್ಷ ಅಥವಾ ಅದಕ್ಕಿಂತ ಹೆಚ್ಚು ವಯಸ್ಸಿನ ಉದ್ಯೋಗಿಗಳು ಇದಕ್ಕೆ ಅರ್ಹರು. ವಿಆರ್‌ಎಸ್‌ ಪಡೆಯುವವರು ಈವರೆಗೆ ಸಲ್ಲಿಸಿರುವ ಒಟ್ಟು ವರ್ಷಗಳ ಸೇವೆಗೆ ಅನುಗುಣವಾಗಿ ಪ್ರತಿ ವರ್ಷಕ್ಕೆ 35 ದಿನಗಳ ವೇತನ, ಬಾಕಿ ಇರುವ ಸೇವಾವಧಿಗೆ ಅನುಗುಣವಾಗಿ ಪ್ರತಿ ವರ್ಷಕ್ಕೆ 25 ದಿನಗಳ ವೇತನ ನೀಡಲಾಗುತ್ತದೆ.

Advertisement

Udayavani is now on Telegram. Click here to join our channel and stay updated with the latest news.

Next