Advertisement

ಕಣ್ಣಿಗೆ ಕಂಡರೂ ಕಿವಿಗೆ ಕೇಳಿಸುತ್ತಿಲ್ಲ! ಆಲೂರು- ಹರ್ಕೂರು: BSNL‌ ಬಳಕೆದಾರರು ಹೈರಾಣು

03:58 AM Mar 13, 2021 | Team Udayavani |

ಆಲೂರು : ನೆಟ್ ವರ್ಕ್‌ ತೋರಿಸುತ್ತಿದೆ. ಆದರೆ ಕರೆ ಮಾಡಲು ಹೋದರೆ ಕರೆ ಹೋಗಲ್ಲ. ಆಚೆ ಕಡೆಯಿಂದ ಕರೆ ಮಾಡಿದಾಗಲೂ ನಾಟ್‌ ರೀಚೆಬಲ್‌ ಅಥವಾ ಸ್ವಿಚ್‌ ಆಫ್‌ ಅಂತ ಬರುತ್ತಿದೆ.

Advertisement

ಇನ್ನು ಅಂತರ್ಜಾಲ ಬಳಸಿ, ಸಾಮಾಜಿಕ ಜಾಲತಾಣಗಳಲ್ಲಿ ಒಂದು ಚಿತ್ರ ಡೌನ್‌ಲೋಡ್‌ ಮಾಡಬೇಕಾದರೆ 1 ಗಂಟೆಗೂ ಹೆಚ್ಚು ಸಮಯ ತೆಗೆದುಕೊಳ್ಳುತ್ತದೆ.

ಇದು ಆಲೂರು, ಹರ್ಕೂರು ಭಾಗದ ಸಾವಿರಾರು ಮಂದಿ ಬಿಎಸ್ಸೆನ್ನೆಲ್‌ ಮೊಬೈಲ್‌ ಬಳಕೆದಾರರು ಕಳೆದ 10-12 ದಿನಗಳಿಂದ ಅನುಭವಿಸುತ್ತಿರುವ ಹೊಸ ಸಮಸ್ಯೆ. ಈ ಬಗ್ಗೆ ಸಂಬಂಧಪಟ್ಟ ಬಿಎಸ್ಸೆನ್ನೆಲ್‌ ಸಿಬಂದಿಯಲ್ಲಿ ಕೇಳಿದರೆ ನಮಗೂ ಏನು ಸಮಸ್ಯೆ ಎಂಬು ದು ಗೊತ್ತಿಲ್ಲ. ಪರಿಶೀಲಿಸಿ ಹೇಳುತ್ತೇವೆ ಎಂದು ಸಮಜಾಯಿಸಿ ಕೊಡುತ್ತಾರಷ್ಟೇ.

ಎಲ್ಲೆಲ್ಲ ಸಮಸ್ಯೆ?
ಪ್ರಮುಖವಾಗಿ ಆಲೂರು ಸುತ್ತಮುತ್ತಲಿ ನಲ್ಲಿ ಬಿಎಸ್ಸೆನ್ನೆಲ್‌ ಬಳಕೆದಾರರು ನೆಟ್ ವರ್ಕ್ ಸಮಸ್ಯೆಯಿಂದಾಗಿ ಭಾರೀ ತೊಂದರೆ ಎದುರಿಸುತ್ತಿದ್ದಾರೆ. ಇದಲ್ಲದೆ ಹರ್ಕೂರು, ಮುತ್ತಬೇರು, ಹೇರೂರಿನ ಕೆಲವು ಭಾಗದವರು ಸೇರಿದಂತೆ ಸಾವಿರಕ್ಕೂ ಹೆಚ್ಚು ಮಂದಿ ನೆಟ್ ವರ್ಕ್‌ ಇಲ್ಲದೆ ಸಮಸ್ಯೆ ಎದುರಿಸುವಂತಾಗಿದೆ. ಈ ಭಾಗದಲ್ಲಿ ಬೇರೆ ಬೇರೆ ಕಂಪೆನಿಗಳ ಸಿಮ್‌ ಬಳಕೆದಾರರಿದ್ದರೂ, ಗ್ರಾಮೀಣ ಭಾಗವಾಗಿರುವುದರಿಂದ ಬಿಎಸ್ಸೆನ್ನೆಲ್‌ ಬಳಕೆದಾರರೇ ಹೆಚ್ಚು ಮಂದಿಯಿದ್ದಾರೆ.

ಹಿಂದೆ ಕರೆಂಟ್‌ ಇಲ್ಲದಾಗ ಮಾತ್ರ ನೆಟ್ ವರ್ಕ್ ಸಮಸ್ಯೆಯಿತ್ತು. ಆದರೆ ಈಗ ಕರೆಂಟ್‌ ಇದ್ದರೂ ಒಂದೇ, ಇಲ್ಲದಿದ್ದರೂ ಈ ನೆಟ್ ವರ್ಕ್‌ ಸಮಸ್ಯೆಯಿದೆ. ಈಗ ಇದರ ನಿರ್ವಹಣೆಯನ್ನು ಬೇರೆಯವರಿಗೆ ವಹಿಸಿಕೊಡಲಾಗಿದ್ದು, ಅದರ ಬಳಿಕ ಕೆಲವು ದಿನಗಳಿಂದ ನೆಟ್ ವರ್ಕ್‌ ತೋರಿಸುತ್ತಿದ್ದರೂ, ಕರೆ ಹೋಗುತ್ತಿಲ್ಲ ಎನ್ನುವುದಾಗಿ ಆ ಭಾಗದ ಜನರು ದೂರಿದ್ದಾರೆ.

Advertisement

ದೂರು ಕೊಟ್ಟಿದ್ದೇವೆ
ನೆಟ್ ವರ್ಕ್ ತೋರಿಸುತ್ತಿದೆ. ಆದರೆ ಕರೆ ಮಾಡಿದಾಗ ಕರೆ ಹೋಗಲ್ಲ. ಬೇರೆಯವರು ನಮಗೆ ಕರೆ ಮಾಡಿದರೂ ಸ್ವಿಚ್‌ ಆಫ್‌ ಅಥವಾ ನಾಟ್‌ ರೀಚೆಬಲ್‌ ಬರುತ್ತಿದೆ. ನಾವು ಈಗ ಕರೆ ಮಾಡಬೇಕಾದರೆ ಬೇರೆ ಕಡೆಗೆ ಹೋಗಿ ಮಾಡಬೇಕಿದೆ. ಈ ಬಗ್ಗೆ ದೂರು ಕೊಟ್ಟಿದ್ದೇವೆ. ನಾವು ವರ್ಷ, 6 ತಿಂಗಳುಗಳದ್ದು ರೀಚಾರ್ಜ್‌ ಮಾಡಿಸಿದ್ದೇವೆ. ಈಗ ಬೇರೆ ಸಿಮ್‌ಗೆ ಬದಲಾಯಿಸುವುದಾದರೂ ಹೇಗೆ?
– ಪ್ರಶಾಂತ್‌ ಕುಲಾಲ್‌ ಆಲೂರು, ಬಿಎಸ್ಸೆನ್ನೆಲ್‌ ಬಳಕೆದಾರರು

ಶೀಘ್ರ ಪರಿಹಾರ
ಆಲೂರು ಹಾಗೂ ಗುಡ್ಡೆಯಂಗಡಿಯಲ್ಲಿ ಬಿಎಸ್ಸೆನ್ನೆಲ್‌ ನೆಟ್ ವರ್ಕ್‌ ಸಮಸ್ಯೆ ಬಗ್ಗೆ ದೂರು ಬಂದಿದೆ. ಒಎಫ್‌ಸಿಯಲ್ಲಿ ಸಮಸ್ಯೆ ಇರುವುದರಿಂದ ಕರೆ ಕಡಿತ ಆಗುತ್ತಿದೆ. ಆದಷ್ಟು ಶೀಘ್ರ ಸರಿಪಡಿಸಲಾಗುವುದು.
– ರಾಮಚಂದ್ರ, ಬಿಎಸ್ಸೆನ್ನೆಲ್‌ ಎಜಿಎಂ, ಕುಂದಾಪುರ

Advertisement

Udayavani is now on Telegram. Click here to join our channel and stay updated with the latest news.

Next