ಹೊಸದಿಲ್ಲಿ : ಸರಕಾರಿ ಒಡೆತನದ ಟೆಲಿಕಾಂ ಸಂಸ್ಥೆ ಬಿಎಸ್‌ಎನ್‌ಎಲ್ ಈದ್ ಉಲ್ ಫಿತರ್ ಹಬ್ಬದ ಆಚರಣೆ ಪ್ರಯುಕ್ತ ಈದ್ ಮುಬಾರಕ್ ಎಸ್‌ಟಿವಿ 786 ಎಂಮ ವಿಶೇಷ ಯೋಜನೆಯೊಂದನ್ನು ಆರಂಭಿಸಿದೆ.
ಈ ವಿಶೇಷ ಯೋಜನೆಯಲ್ಲಿ ಅಪರಿಮಿತ ವಾಯ್ಸ ಕಾಲಿಂಗ್, ರೋಮಿಂಗ್, ದಿನಕ್ಕೆ 100 ಎಸ್‌ಎಂಎಸ್ ಮೆಸೇಜ್‌ಗಳು ಮತ್ತು 3ಜಿ/4ಜಿ ಡಾಟಾ ದಿನಕ್ಕೆ 2 ಜಿಬಿ ದೊರಕಲಿದೆ. ಈ ಯೋಜನೆಯ ವ್ಯಾಲಿಡಿಟಿ150 ದಿನಗಳಾಗಿರುತ್ತದೆ.
ಉಚಿತ ವಾಯ್ಸ ಕಾಲ್‌ಗಳು ದಿಲ್ಲಿ ಮತ್ತು ಮುಂಬಯಿ ಟೆಲಿಕಾಂ ಸರ್ಕಲ್‌ಗಳಗಳಲ್ಲಿ ಕೂಡ ಲಭ್ಯವಿರುತ್ತದೆ.
ಪರಿಮಿತ ಅವಧಿಯ ವಿಶೇಷ ರೀಜಾರ್ಜ್ ಪ್ಲಾನ್ ಜೂನ್ 12ರಂದು ಆರಂಭಗೊಂಡಿದ್ದು ಜೂನ್ 26ರ ವರೆಗೆ ಚಾಲ್ತಿಯಲ್ಲಿರುತ್ತದೆ.
ಈಚೆಗೆ ಬಿಎಸಎನ್‌ಎಲ್, ಐಪಿಎಲ್ ಕ್ರಿಕೆಟ್ ಪಂದ್ಯಾವಳಿಯ ಲಾಭವನ್ನು ತನ್ನ ವಿಶೇಷ ಯೋಜನೆಯ ಮೂಲಕ ಹೊಡೆದುಕೊಂಡಂತೆ ಈಚೆಗೆ ಫಿಪಾ ವಿಶ್ವಕಪ್ 2018 ಪ್ಲಾನ್ ಪ್ರಕಟಿಸಿದೆ. ಫಿಫಾ ರೀಚಾರ್ಜ್ ಪ್ಯಾಕ್‌ನಲ್ಲಿ ದಿನವಹಿ 4ಜಿಬಿ ಯ 3ಜಿ/4ಜಿ ಕೊಡುಗೆ ಇದೆ.ಆದರೆ ಫ್ರೀ ವಾಯ್ಸ ಕಾಲ್ ಮತ್ತು ಎಸ್‌ಎಂಎಸ್ ಲಾಭಗಳು ಇರುವುದಿಲ್ಲ.