Advertisement

18 ರಿಂದ 24 ತಿಂಗಳುಗಳಲ್ಲಿ BSNL 4ಜಿ ಸೇವೆ ಪೂರ್ಣ : ಸಂಜಯ್ ಧೋತ್ರೆ

10:27 AM Mar 18, 2021 | Team Udayavani |

ನವ ದೆಹಲಿ : ಸರ್ಕಾರಿ ಸ್ವಾಮ್ಯದ ಭಾರತ್ ಸಂಚಾರ್ ನಿಗಮ್ ಲಿಮಿಟೆಡ್ (BSNL) ತನ್ನ 4 ಜಿ ವೈರ್‌ ಲೆಸ್ ಸೇವೆಯ ಮುಂದಿನ 18 ರಿಂದ 24 ತಿಂಗಳುಗಳಲ್ಲಿ ಪೂರ್ಣಗೊಳ್ಳಲಿದೆ ಎಂದು ನಿರೀಕ್ಷಿಸುತ್ತಿದೆ ಎಂದು ಸಂವಹನ ರಾಜ್ಯ ಸಚಿವ ಸಂಜಯ್ ಧೋತ್ರೆ ಬುಧವಾರ(ಮಾ.17) ಮಾಹಿತಿ ನೀಡಿದ್ದಾರೆ.

Advertisement

ಇನ್ನು, ಬಿ ಎಸ್‌ ಎನ್‌ ಎಲ್ ಅನ್ನು ಖಾಸಗೀಕರಣಗೊಳಿಸುವ ಯಾವುದೇ ಯೋಜನೆ ಸರ್ಕಾರಕ್ಕೆ ಇಲ್ಲ ಎಂದು ಸಚಿವರು ಲೋಕಸಭೆಗೆ ಲಿಖಿತ ರೂಪದಲ್ಲಿ ಉತ್ತರ ನೀಡಿದ್ದಾರೆ.

ಓದಿ :  ಕುಸ್ತಿ ಕೂಟದಲ್ಲಿ ಒಂದು ಅಂಕದಿಂದ ಸೋಲು: ಮನನೊಂದ ಗೀತಾ ಪೋಗಟ್ ಸಹೋದರಿ ಆತ್ಮಹತ್ಯೆ!

ಬಿ ಎಸ್ ಎನ್ ಎಲ್ ಮುಂಬರುವ 4 ಜಿ ಟೆಂಡರ್ ನಲ್ಲಿ ಭಾಗವಹಿಸಲು ಆಸಕ್ತಿ ಹೊಂದಿರುವ ಭಾರತೀಯ ಟೆಲಿಕಾಂ ಇಕ್ವಿಪ್ ಮೆಂಟ್ಸ್ ಉತ್ಪಾದಕರಿಂದ ಪೂರ್ವ ನೋಂದಣಿ ಅಥವಾ ಪರಿಕಲ್ಪನೆಯ ಪುರಾವೆ (ಪಿಒಸಿ) ಕೋರಿ ಜನವರಿ 1 ರಂದು ಬಿ ಎಸ್ ಎನ್ ಎಲ್ ಇನ್ವೈಟೆಡ್ ಎಕ್ಸ್ಪ್ರೆಷನ್ ಆಫ್ ಇಂಟ್ರೆಸ್ಟ್ (ಇಒಐ)ನ್ನು ಆಹ್ವಾನಿಸಿತ್ತು ಎಂದು ಧೋತ್ರೆ ಹೇಳಿದ್ದಾರೆ.

“ಈ ನಿಟ್ಟಿನಲ್ಲಿ 2017 ರ ಸಾಮಾನ್ಯ ಹಣಕಾಸು ನಿಯಮಗಳ ಕಾಯ್ದೆ  144 (xi) ಒಳಗೊಂಡಂತೆ ಸರ್ಕಾರದ ಅನ್ವಯವಾಗುವ ನಿಯಮಗಳು / ಮಾರ್ಗಸೂಚಿಗಳು / ಸಾರ್ವಜನಿಕ ಖರೀದಿ ಆದೇಶಗಳನ್ನು ಬಿ ಎಸ್ ಎನ್ ಎಲ್ ಅನುಸರಿಸುತ್ತದೆ” ಎಂದು ಧೋತ್ರೆ ಮಾಹಿತಿ ನೀಡಿದ್ದಾರೆ.

Advertisement

ಓದಿ :  ಬಿಜೆಪಿ ಸಂಸದನ ನಿವಾಸದ ಬಳಿ 15 ಕಡೆ ಕಚ್ಚಾ ಬಾಂಬ್ ದಾಳಿ: ಮೂವರಿಗೆ ಗಾಯ

Advertisement

Udayavani is now on Telegram. Click here to join our channel and stay updated with the latest news.

Next