Advertisement
ಸಾರ್ವಜನಿಕ ಉದ್ದಿಮಗಳ ಇಲಾಖೆ, ಕೈಗಾರಿಕೆ ಮತ್ತು ಸಾರ್ವಜನಿಕ ಉದ್ದಿಮೆ ಸಚಿವಾಲಯ ಪ್ರತಿ ವರ್ಷ ಜಂಟಿಯಾಗಿ ತಯಾರಿಸುವ ಕೇಂದ್ರೋದ್ಯಮಗಳ ಹಣಕಾಸು ಸಾಧನೆಗೆ ಸಂಬಂಧಿಸಿದ ವರದಿಯಿಂದ ಈ ಮಾಹಿತಿ ತಿಳಿದುಬಂದಿದೆ.
ನಷ್ಟದಲ್ಲಿರುವ ಒಟ್ಟಾರೆ 70 ಕಂಪನಿಗಳಲ್ಲಿ 10 ಕಂಪನಿಗಳ ನಷ್ಟದ ಪ್ರಮಾಣವೇ ಶೇ.97.04ರಷ್ಟು ಇದೆ. ಇನ್ನೂ ಆದಾಯ ಗಳಿಸಿರುವ ಒಎನ್‌ಜಿಸಿ, ಇಂಡಿಯನ್ ಆಯಿಲ್ ಮತ್ತು ಎನ್‌ಟಿಪಿಸಿ ಕ್ರಮವಾಗಿ ಶೇ.15.3ರಷ್ಟು, ಶೇ.9.68ರಷ್ಟು ಹಾಗೂ 6.73ರಷ್ಟು ಲಾಭಾಂಶ ಮಾಡಿಕೊಂಡಿವೆ.
Related Articles
ಎಕ್ಸಿಸ್, ಕಸ್ಟಮ್ ಸುಂಕ, ಜಿಎಸ್‌ಟಿ, ಕಾರ್ಪೊರೇಟ್ ತೆರಿಗೆ, ಲಾಭಾಂಶ, ಸಾಲದ ಮೇಲಿನ ಬಡ್ಡಿದರ ಮತ್ತು ಇತರೆ ಸುಂಕ ಮತ್ತು ತೆರಿಗೆಗಳಿಂದ ಸರಕಾರದ ಬೊಕ್ಕಸಕ್ಕೆ 2018-19ರಲ್ಲಿ 3,68,803 ಕೋಟಿ ರೂ. ಬಂದಿದೆ. 2017-18ರಲ್ಲಿ 3,52,361 ಕೋಟಿ ರೂ. ಬಂದಿತ್ತು. ಇದಕ್ಕೆ ಹೋಲಿಸಿದರೆ ಆದಾಯದ ಮೊತ್ತದಲ್ಲಿ ಶೇ.4.67ರಷ್ಟು ಏರಿಕೆಯಾಗಿದೆ.
Advertisement
348 ಕೇಂದ್ರೋದ್ಯಮಗಳುಕೇಂದ್ರೋದ್ಯಮಗಳ ಮಾಹಿತಿಯಲ್ಲಿ 348 ಕಂಪನಿಗಳಿವೆ. ಇದರಲ್ಲಿ 249 ಕಾರ್ಯಚರಣೆ ನಡೆಸುತ್ತಿವೆ. 86 ನಿರ್ಮಾಣ ಹಂತದಲ್ಲಿವೆ. 13 ಮುಚ್ಚುವ ಹಂತದಲ್ಲಿವೆ ಎಂದು ತಿಳಿಸಿದೆ.