Advertisement

BSNL; ಅಕ್ಟೋಬರ್‌ನಿಂದ ಬಿಎಸ್‌ಎನ್‌ಎಲ್‌ 4ಜಿ ಸೇವೆ ಪ್ರಾರಂಭ?

08:33 PM Aug 20, 2024 | Team Udayavani |

ನವದೆಹಲಿ: 4ಜಿ ಪರೀಕ್ಷಾರ್ಥ ಪ್ರಯೋಗ ಮುಗಿಸಿರುವ ಸರ್ಕಾರಿ ಸ್ವಾಮ್ಯದ ಬಿಎಸ್‌ಎನ್‌ಎಲ್‌ ಅಕ್ಟೋಬರ್‌ನಿಂದ ದೇಶಾದ್ಯಂತ 4ಜಿ ಸೇವೆ ಒದಗಿಸಲು ಸಜ್ಜಾಗಿದೆ.

Advertisement

“ತೃಪ್ತಿಕರ ಫ‌ಲಿತಾಂಶಗಳ ಹಿನ್ನೆಲೆಯಲ್ಲಿ 24,000 4ಜಿ ಟವರ್‌ಗಳನ್ನು ಸ್ಥಾಪಿಸಲಾಗಿದೆ. ಗ್ರಾಹಕರಿಗೆ 4ಜಿ ಸಿಮ್‌ ವಿತರಿಸುವ ಕಾರ್ಯಕ್ಕೆ ಚಾಲನೆ ನೀಡಲಾಗಿದೆ’ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಖಾಸಗಿ ಟೆಲಿಕಾಂ ಸಂಸ್ಥೆಗಳು 5ಜಿ ಸೇವೆ ಒದಗಿಸುತ್ತಿರುವ ಸಂದರ್ಭದಲ್ಲಿ, ತಂತ್ರಜ್ಞಾನ ಪೂರೈಕೆಯಲ್ಲಿ ವಿಳಂಬ ನೀತಿಯಿಂದಾಗಿ ಬಿಎಸ್‌ಎನ್‌ಎಲ್‌ ಮಾರುಕಟ್ಟೆ ಪಾಲು ಏ.2024ರ ಅಂತ್ಯಕ್ಕೆ 7.46% ಕ್ಕೆ ಕುಸಿದಿದೆ.

Advertisement

Udayavani is now on Telegram. Click here to join our channel and stay updated with the latest news.

Next