ಮುಂಬಯಿ: ಬಿಎಸ್‌ಕೆಬಿ ಅಸೋಸಿಯೇಶನ್ ಗೋಕುಲ ಸಂಸ್ಥೆಯ ವತಿಯಿಂದ 69ನೇ ಗಣರಾಜ್ಯೋತ್ಸವ ಸಂಭ್ರಮವು ಜ. 26 ರಂದು ನೆರೂಲ್ ಪೂರ್ವದ ಸೀವುಡ್‌ನ ಆಶ್ರಯದ ವಿ. ಎಚ್. ಸೋಮೇಶ್ವರ್ ಸಭಾಗೃಹದಲ್ಲಿ ವೈವಿಧ್ಯಮಯ ಕಾರ್ಯಕ್ರಮ ಗಳೊಂದಿಗೆ ಜರಗಿತು.
ಪ್ರಾತ:ಕಾಲ ಸಂಘದ ನೂರಾರು ಕಿರಿ-ಹಿರಿಯ ಸದಸ್ಯರ ಒಗ್ಗೂಡುವಿಕೆಯಲ್ಲಿ ಧ್ವಜಾರೋಹಣ, ಧ್ವಜವಂದನೆ, ರಾಷ್ಟ್ರಗೀತೆ, ವಿವಿಧ ದೇಶ ಭಕ್ತಿ ಗೀತೆಗಳಿಗೆ ನೃತ್ಯಾಭಿನಯ ಕಾರ್ಯಕ್ರಮಗಳಿಗೆ ಬಿಎಸ್‌ಕೆಬಿಎ ಉಪಾಧ್ಯಕ್ಷ ವಾಮನ್ ಹೊಳ್ಳ ಅವರು ಚಾಲನೆ ನೀಡಿದರು. ನಂತರ ಗೋಪಾಲಕೃಷ್ಣ ಪಬ್ಲಿಕ್ ಟ್ರಸ್ಟ್ ಮತ್ತು ಬಿಎಸ್‌ಕೆಬಿ ಅಸೋಸಿಯೇಶನ್ ಇವುಗಳ ಸಹಯೋಗದಲ್ಲಿ ಶ್ರೀ ಮಧ್ವ ನವಮಿ ಆಚರಿಸಲಾಯಿತು. ಅಲಂಕೃತ ಮಂಟಪದಲ್ಲಿ ಶ್ರೀ ಗೋಪಾಲಕೃಷ್ಣ ದೇವರು ಹಾಗೂ ಶ್ರೀ ಮಧ್ವಾಚಾರ್ಯರ ಭಾವಚಿತ್ರ ಪ್ರತಿಷ್ಠಾಪನೆಗೊಳಿಸಿ ಗೋಕುಲ ಭಜನಾ ಮಂಡಳಿ ಶ್ರೀ ಮನ್ಮಧ್ವಾಚಾರ್ಯ ವಿರಚಿತ ದ್ವಾದಶ ಸ್ತೋತ್ರ ಪಠನೆ ಹಾಗೂ ಭಜನೆ ನೆರವೇರಿತು. ಬಾಲಾಲಯ ಅರ್ಚಕ ಕೃಷ್ಣಪ್ರಸಾದ ಕೆದಿಲಾಯ ಪೂಜೆ, ಮಂಗಳಾರತಿಗೈದು ತೀರ್ಥ ಪ್ರಸಾದ ವಿತರಿಸಿ ಹರಸಿದರು.
ಬಿಎಸ್‌ಕೆಬಿಎ ಅಧ್ಯಕ್ಷ ಡಾ| ಸುರೇಶ್ ಎಸ್. ರಾವ್ ಕಟೀಲು ಅಧ್ಯಕ್ಷತೆಯಲ್ಲಿ ಸಭಾ ಕಾರ್ಯಕ್ರಮ ನಡೆಯಿತು. ಸಮಾರಂಭದಲ್ಲಿ ಐದು ದಶಕಗಳಿಂದ ಸಂಘದ ಗೌರವ ಲೆಕ್ಕಪತ್ರ ಪರಿಶೋಧಕರಾಗಿ ಸೇವೆ ಸಲ್ಲಿಸಿದ ಸಿಎ ಸುಬ್ಬ ರಾವ್ ದಂಪತಿಯನ್ನು ಶಾಲು ಹೊದಿಸಿ, ಸ್ಮರಣಿಕೆ , ಸನ್ಮಾನ ಪತ್ರ, ಫಲ ಪುಷ್ಪಗಳನ್ನಿತ್ತು ಸಮ್ಮಾನಿಸಿ ಅಭಿನಂದಿಸಲಾಯಿತು. ಬಿಎಸ್‌ಕೆಬಿಎ ಸಂಸ್ಥೆಯ ಸೇವೆ ಮಾಡಿರುವ ಬಗ್ಗೆ ತನಗೆ ಅಪಾರ ತೃಪ್ತಿಯಿದೆ ಎಂದು ಸಮ್ಮಾನಕ್ಕೆ ಉತ್ತರವಾಗಿ ಸುಬ್ಬರಾವ್ ಕೃತಜ್ಞತೆಯನ್ನು ವ್ಯಕ್ತಪಡಿಸಿದರು.
ಡಾ| ಸುರೇಶ್ ರಾವ್ ಅವರು ಸುಬ್ಬರಾವ್ ಅವರನ್ನು ಅಭಿನಂದಿಸಿ ಮಾತನಾಡಿ, 93 ವರ್ಷದ ಚಾಣಕ್ಯ ಸುಬ್ಬರಾವ್. ಈ ಇಳಿವಯಸ್ಸಿನಲ್ಲಿಯೂ ತಮ್ಮ ಕೆಲಸವನ್ನು ಅತಿ ನಿಷ್ಠೆಯಿಂದ ಮಾಡುತ್ತಿದ್ದಾರೆ. ಮನಸ್ಸು ಮಾಡಿದರೆ ಏನನ್ನೂ ಸಾಧಿಸಲು ಸಾಧ್ಯ ಎಂಬ ನೀತಿ ಪಾಠವನ್ನು ಇಂದಿನ ಜನಾಂಗಕ್ಕೆ ತಿಳಿಸಿಕೊಟ್ಟಿದ್ದಾರೆ. ಅವರು 5 ದಶಕಗಳಿಂದ ಗೋಕುಲಕ್ಕೆ ಮಾಡಿರುವ ಸೇವೆಯ ಋಣ ತೀರಿಸಲಿಕ್ಕೆ ನಮ್ಮಿಂದ ಅಸಾಧ್ಯ. ದೇವರು ಅವರಿಗೆ ಆಯುರಾರೋಗ್ಯವನ್ನಿತ್ತು ಇನ್ನೂ ಹೆಚ್ಚಿನ ಸೇವೆ ಮಾಡುವಂತೆ ಅನುಗ್ರಹಿಸಲಿ ಎಂದು ಹಾರೈಸಿದರು.
ಉಪಾಧ್ಯರುಗಳಾದ ವಾಮನ್ ಹೊಳ್ಳ, ಶೈಲಿನಿ ರಾವ್, ಕಾರ್ಯದರ್ಶಿ ಎ. ಪಿ. ಕೆ ಪೋತಿ, ಜತೆ ಕಾರ್ಯದರ್ಶಿಗಳಾದ ಚಿತ್ರಾ ಮೇಲ್ಮನೆ, ಪಿ. ಸಿ. ಎನ್. ರಾವ್, ಕೋಶಾಧಿಕಾರಿ ಸಿಎ ಹರಿದಾಸ್ ಭಟ್, ಜತೆ ಕೋವಾಧಿಕಾರಿ ಕುಸುಮ್ ಶ್ರೀನಿವಾಸ್, ಆಶ್ರಯ ಸಂಚಾಲಕಿ ಚಂದ್ರಾವತಿ ರಾವ್ ಇನ್ನಿತರರು ಉಪಸ್ಥಿತರಿದ್ದು ಕಳೆದ ಶೈಕ್ಷಣಿಕ ಸಾಲಿನ ವೃತ್ತಿಪರ ಶಿಕ್ಷಣದಲ್ಲಿ ಅತ್ಯುನ್ನತ ಅಂಕಗಳನ್ನು ಗಳಿಸಿದ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಗೌರವಿಸಿದರು.
ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಹಿಂದಿ ಚಿತ್ರಗೀತೆಗಳ ಆಧಾರಿತ ಹಾಡುಗಳ ನೃತ್ಯಾವಳಿ “ಬಾಲಿವುಡ್ ಮಿಕ್ಸ$cರ್’ ಹಮ್ಮಿಕೊಳ್ಳಲಾಗಿತ್ತು. ಗೀತಾಲಕ್ಷಿ¾à ಸಾಂಸ್ಕೃತಿಕ ಕಾರ್ಯಕ್ರಮ ನಿರೂಪಿಸಿದರು. ಅನಂತ ಪಿ. ಪೋತಿ ಸ್ವಾಗತಿಸಿದರು. ಚಂದ್ರಾವತಿ ರಾವ್ ಮತ್ತು ಹರಿದಾಸ್ ಭಟ್ ಕಾರ್ಯಕ್ರಮ ನಿರೂಪಿಸಿದರು. ಅಶೋಕ್ ಮೇಲ್ಮನೆ ಸುಬ್ಬರಾವ್ ಅವರ ಸಿದ್ಧಿ-ಸಾಧನೆಗಳನ್ನು ವಿವರಿಸಿದರು. ಚಿತ್ರಾ ಮೇಲ್ಮನೆ ಸಮ್ಮಾನಪತ್ರ ವಾಚಿಸಿದರು. ಇಂದ್ರಾಣಿ ರಾವ್ ಪ್ರತಿಭಾವಂತರ ಯಾದಿ ವಾಚಿಸಿದರು. ಪಿ. ಸಿ. ಎನ್ ರಾವ್ ವಂದಿಸಿದರು.