ಜಮ್ಮು: ಗಡಿಯಲ್ಲಿ ಸುರಂಗ ಕೊರೆದು ಭಾರತದ ಒಳಕ್ಕೆ ನುಸುಳುವ ಹಾಗೂ ಭಾರತದ ನೆಲದಲ್ಲಿ ವಿಧ್ವಂಸಕ ಕೃತ್ಯ ವೆಸಗುವ ಪಾಕಿಸ್ಥಾನದ ಸಂಚನ್ನು ಭಾರತೀಯ ಯೋಧರು ವಿಫಲಗೊಳಿಸಿದ್ದಾರೆ.
ಜಮ್ಮುವಿನ ಅರ್ನಿಯಾ ವಲಯದಲ್ಲಿ ಅಂತಾರಾಷ್ಟ್ರೀಯ ಗಡಿ ರೇಖೆಗೆ ತಾಗಿ 14 ಅಡಿ ಉದ್ದದ ಸುರಂಗವೊಂದನ್ನು ಕೊರೆದು ಭಾರತದ ಒಳಕ್ಕೆ ನುಸುಳುವ ಸಂಚು ರೂಪಿಸಿದ್ದನ್ನು ಭಾರತೀಯ ಗಡಿ ಭದ್ರತಾ ಪಡೆ (ಬಿಎಸ್‌ಎಫ್) ಪತ್ತೆ ಮಾಡಿದೆ.
“ಸುರಂಗದಲ್ಲಿ ಇರಿಸಲಾಗಿದ್ದ ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಳ್ಳಲಾಗಿದೆ. ಇದು ನಿರ್ಮಾಣ ಹಂತದ ಸುರಂಗ ಮಾರ್ಗವಾಗಿದೆ. ದಮನ್‌ಗೆ ಹತ್ತಿರದ ವಿಕ್ರಮ್ ಮತ್ತು ಪಟೇಲ್ ಸೇನಾ ನೆಲೆ ನಡುವಿನ ಸ್ಥಳದಲ್ಲಿ ಸುರಂಗ ಕೊರೆಯಲಾಗು ತ್ತಿತ್ತು’ ಎಂದು ಅಧಿಕಾರಿಗಳು ಹೇಳಿದ್ದಾರೆ.
ಸುರಂಗ ಕೊರೆಯುತ್ತಿರುವ ಬಗ್ಗೆ ಅನು ಮಾನ ಮೂಡಿದ ಹಿನ್ನೆಲೆಯಲ್ಲಿ, ಈ ಕುರಿತು ಪರಿಶೀಲಿಸಿದಾಗ ಇದು ಖಚಿತಪಟ್ಟಿದ್ದರಿಂದ ಶೋಧ ಕಾರ್ಯ ನಡೆಸಲಾಯಿತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಕದನ ವಿರಾಮ ಉಲ್ಲಂಘನೆ: ಇದೇ ವೇಳೆ, ಗಡಿಯಲ್ಲಿ ಶನಿವಾರ ಭಾರತೀಯ ಸೇನೆ ಕದನ ವಿರಾಮ ಉಲ್ಲಂ ಸಿದೆ ಎಂದು ಪಾಕಿಸ್ತಾನ ಆರೋಪಿಸಿದೆ. ಭಾರತೀಯ ಸೇನಾಪಡೆ ನಡೆಸಿದ ಗುಂಡಿನ ದಾಳಿಗೆ ನಮ್ಮ ಒಬ್ಬ ಯೋಧ ಸೇರಿದಂತೆ ಮೂವರು ಮೃತಪಟ್ಟು, ಹಲವು ನಾಗರಿಕರು ಗಾಯಗೊಂಡಿದ್ದಾರೆ ಎಂದು ಪಾಕ್ ಹೇಳಿದೆ. ಆದರೆ, ಗಡಿಯಲ್ಲಿ ತಾನು ನಡೆಸಿದ ಗುಂಡಿನ ದಾಳಿಯ ಬಗ್ಗೆ ಮಾತ್ರ ಪಾಕ್ ಚಕಾರವೆತ್ತಿಲ್ಲ.
ವಿಶ್ವಸಂಸ್ಥೆಗೆ ದೂರು: ಇನ್ನೊಂದೆಡೆ, “ಭಾರತವು ಕಾಶ್ಮೀರದಲ್ಲಿ ಮಾನವ ಹಕ್ಕು ಉಲ್ಲಂಘನೆ ಮಾಡುತ್ತಿದೆ. ನಮ್ಮ ಉನ್ನತ ಸೇನಾ ಅಧಿಕಾರಿಗಳು ಈ ಬಗ್ಗೆ ಮಾಹಿತಿ ನೀಡಿದ್ದಾರೆ. ಈ ಕುರಿತ ದಾಖಲೆಗಳನ್ನು ವಿಶ್ವಸಂಸ್ಥೆಗೆ ಒಪ್ಪಿಸಲಾಗಿದೆ’ ಎಂದು ಪಾಕ್ ಪ್ರಧಾನಿ ಶಾಹಿದ್ ಖಖಾನ್ ಅಬ್ಟಾಸಿ ಹೇಳಿದ್ದಾರೆ.