Advertisement

ಒಂಟೆಗಳ ಮೇಲೆ ಯೋಧರ ಯೋಗ ಪ್ರದರ್ಶನ : ವ್ಯಾಪಕ ವಿರೋಧ

01:39 PM Jun 23, 2021 | Team Udayavani |

ಜೋಧ್‌ಪುರ (ರಾಜಸ್ಥಾನ): ಅಂತಾರಾಷ್ಟ್ರೀಯ ಯೋಗ ದಿನದ ಸಂದರ್ಭದಲ್ಲಿ ಬಿಎಸ್‌ಎಫ್ ಸಹಾಯಕ ತರಬೇತಿ ಕೇಂದ್ರದ ಸೈನಿಕರು ಒಂಟೆಗಳ ಮೇಲೆ ಮಾಡಿದ ಯೋಗ ಪ್ರದರ್ಶನಕ್ಕೆ ವ್ಯಾಪಕ ವಿರೋಧ ವ್ಯಕ್ತವಾಗುತ್ತಿದೆ.

Advertisement

ಜವಾನರು ಒಂಟೆಗಳ ಮೇಲೆ ಹಲವಾರು ಯೋಗ ವ್ಯಾಯಾಮಗಳನ್ನು ಮಾಡಿ ಶಕ್ತಿ ಮತ್ತು ಏಕಾಗ್ರತೆ ಪ್ರದರ್ಶಿಸಿದ್ದರು. ಒಂಟೆಗಳು ಸಹ ತಮ್ಮ ಬೋಧಕರೊಂದಿಗೆ ಯೋಗ ವ್ಯಾಯಾಮವನ್ನು ಪ್ರದರ್ಶಿಸಿದ್ದವು.

ಯೋಧರ ಈ ಯೋಗಾಸನದ ಫೋಟೊಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ. ಕೆಲವೊಂದಿಷ್ಟು ಜನರು ಮೆಚ್ಚುಗೆ ವ್ಯಕ್ತಪಡಿಸಿದ್ದರೆ, ಇನ್ನ ಕೆಲವರು ಟೀಕಿಸಿದ್ದಾರೆ. ನಿಮಗೆ ಯೋಗ ಮಾಡಲು ಬೇರೆ ಯಾವ ಸ್ಥಳವು ಸಿಗಲಿಲ್ಲವೆ ಎಂದು ಆಕ್ರೋಶದಿಂದ ಪ್ರಶ್ನಿಸುತ್ತಿದ್ದಾರೆ.

 

Advertisement

ಈ ರೀತಿ ಯೋಗ ಮಾಡಿದ ಸೈನಿಕರ ವಿರುದ್ಧ ಪ್ರಧಾನಿ ಮೋದಿಯವರು ಕಠಿಣ ಕ್ರಮ ಕೈಗೊಳ್ಳಬೇಕೆಂದು ನೆಟ್ಟಿಗರು ಆಗ್ರಹಿಸಿದ್ದಾರೆ.

ಇನ್ನು ಜೂನ್ 21 ರಂದು ವಿಶ್ವ ಯೋಗ ದಿನದ ನಿಮಿತ್ತ ಎಲ್ಲೆಡೆ ಯೋಗ ಮಾಡಲಾಯಿತು. ಆದರೆ, ಬಿಎಸ್ ಎಫ್ ಯೋಧರು ಮಾಡಿರುವ ಯೋಗ ವಿವಾದಕ್ಕೆ ಕಾರಣವಾಗಿದೆ. ಇವರ ವಿರುದ್ಧ ಕ್ರಮ ಜರುಗಿಸಬೇಕೆಂದು ಎಲ್ಲೆಡೆಯಿಂದ ಆಗ್ರಹಗಳು ಕೇಳಿ ಬರುತ್ತಿವೆ.

Advertisement

Udayavani is now on Telegram. Click here to join our channel and stay updated with the latest news.

Next