Advertisement

ಐಎಸ್‌ಐ ಮೋಹಕ ಬಲೆ

06:00 AM Sep 22, 2018 | Team Udayavani |

ಹೊಸದಿಲ್ಲಿ: ಫೇಸ್‌ಬುಕ್‌ನಲ್ಲಿ ಪಾಕಿಸ್ಥಾನದ ಐಎಸ್‌ಐ ಬೀಸಿದ “ಮೋಹಕ ಬಲೆ’ಗೆ (ಹನಿ ಟ್ರ್ಯಾಪ್‌) ಬಿದ್ದ ಬಿಎಸ್‌ಎಫ್ ಯೋಧನ ಹಾಗೆ ಇನ್ನೂ ಅನೇಕರು ಐಎಸ್‌ಐನ ಬಲೆಗೆ ಬಿದ್ದಿದ್ದಾರೆಂದು ಉತ್ತರ ಪ್ರದೇಶದ ಉಗ್ರ ನಿಗ್ರಹ ದಳದ (ಎಟಿಎಸ್‌) ಪೊಲೀಸ್‌ ಮಹಾ ನಿರ್ದೇಶಕ ಆಸಿಮ್‌ ಅರುಣ್‌ ತಿಳಿಸಿದ್ದಾರೆ. 

Advertisement

“”ಯೋಧರು, ಗಡಿ ಪ್ರಾಂತ್ಯಗಳ ನಿರುದ್ಯೋಗಿ ಯುವಕರು, ಸೇನೆಗೆ ಸೇರುವ ಇಚ್ಛೆಯುಳ್ಳವರೇ ಇವರ ಟಾರ್ಗೆಟ್‌. ಸಾಮಾಜಿಕ ಜಾಲತಾಣಗಳಲ್ಲಿ ನಕಲಿ ಅಕೌಂಟ್‌ಗಳ ಮೂಲಕ ಇಂಥವರ ಸ್ನೇಹ ಬೆಸೆಯುವ ಇವರು ಆನಂತರ ಸಲುಗೆ ಬೆಳೆಸಿ ಅವರಿಗೆ ಬೇಕಾದ ಮಾಹಿತಿಯನ್ನು ಪಡೆಯುತ್ತಾರೆ. ಇಂಥ ನಕಲಿ ಅಕೌಂಟ್‌ಗಳು ಬಹುಪಾಲು ಯುವತಿಯರ ಹೆಸರಲ್ಲಿರುತ್ತವೆ. ನಿರುದ್ಯೋಗಿಗಳು ಮಾಹಿತಿ ಹಂಚಿಕೊಂಡರೆ ಮಾಸಿಕ 4,000 ರೂ. ವೇತನ ನೀಡುವ ಆಮಿಷ ಒಡ್ಡಲಾಗುತ್ತದೆ” ಎಂದು ಅರುಣ್‌ ತಿಳಿಸಿದ್ದಾರೆ.  

ಇದಕ್ಕೆ ಉದಾಹರಣೆಯೆಂಬಂತೆ, “”ಸೈನ್ಯಕ್ಕೆ ಸೇರುವ ಆಸೆಯಿದ್ದ ವ್ಯಕ್ತಿಯೊಬ್ಬನೊಂದಿಗೆ 2 ವರ್ಷಗಳ ಹಿಂದೆಯೇ ಯುವತಿ ಹೆಸರಲ್ಲಿ ಸ್ನೇಹ ಸಂಪಾದಿಸಲಾಗಿತ್ತು. ಆತನನ್ನು ಮದುವೆ ಯಾಗುವುದಾಗಿಯೂ ನಂಬಿಸಲಾಗಿತ್ತು. ಹಾಗಾಗಿ, ಈ ಯುವಕ ಸೈನ್ಯಕ್ಕೆ ಸೇರಿದ ನಂತರ ತಾನು ಪಡೆಯುತ್ತಿದ್ದ ತರಬೇತಿಯ ಫೋಟೋಗಳನ್ನು ಹಂಚಿಕೊಂಡಿದ್ದ. ಇದು ಗೊತ್ತಾಗಿ ಆತನನ್ನು ಕೆಲಸದಿಂದ ವಜಾಗೊಳಿಸ ಲಾಯಿತು” ಎಂದು ಅರುಣ್‌ ತಿಳಿಸಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next