ಸಾಂಬಾ: ರಾಮ್ ಘರ್ ಸೆಕ್ಟರ್‌ನ ಭಾರತ ಪಾಕಿಸ್ತಾನ ಅಂತರಾಷ್ಟ್ರೀಯ ಗಡಿಯಲ್ಲಿ ಬೃಹತ್ ಸುರಂಗವನ್ನು ಬಿಎಸ್‌ಎಫ್ ಪಡೆಗಳು ಪತ್ತೆ ಹಚ್ಚಿವೆ. ಉಗ್ರರು ಭಾರತದೊಳಗೆ ನುಸುಳಲು ಈ ಸುರಂಗವನ್ನು ಬಳಸಿಕೊಳ್ಳುತ್ತಿದ್ದರು ಎಂದು ಹೇಳಲಾಗಿದೆ.
ಫತ್ವಾಲ್ ಪೋಸ್ಟ್ ಬಳಿ ಭೂಮಿಯಲ್ಲಿ ಕೊರೆದಿರುವುದು ಕಂಡು ಬಂದ ಹಿನ್ನಲೆಯಲ್ಲಿ ಮಣ್ಣನ್ನು ಅಗೆದು ನೋಡಿದಾಗ ಬೃಹತ್ ಸರಂಗ ಪತ್ತೆಯಾಗಿದೆ. ಗಡಿಯಿಂದ 20 ಮೀಟರ್ ಈಚೆಗೆ ಸುರಂಗ ಪತ್ತೆಯಾಗಿದ್ದು ತಲಾ 2.5 ಅಡಿ ಉದ್ದ ಮತ್ತು ಅಗಲ ಹೊಂದಿತ್ತು.
ಭಾರತದತ್ತ ಕೊರೆಯಲಾಗಿದ್ದ ಸುರಂಗ ಸಕಾಲದಲ್ಲಿ ಪತ್ತೆ ಹಚ್ಚುವ ಮೂಲಕ ಉಗ್ರರ ಭಾರಿ ಒಳನುಸುಳುವಿಕೆಯನ್ನು ತಡೆದಂತಾಗಿದೆ.
ಜೆಸಿಬಿ ಯಂತ್ರಗಳನ್ನು ಬಳಸಿ ಸುರಂಗವನ್ನು ಮುಚ್ಚಲಾಗಿದ್ದು ಸœಳದಲ್ಲಿ ಇನ್ನೂ ಹೆಚ್ಚಿನ ಪರಿಶೀಲನೆ ಮುಂದುವರಿಸಲಾಗಿದೆ. ಬಿಎಸ್‌ಎಫ್ ಪಡೆಗಳು ಗಡಿಯುದ್ದಕ್ಕೂ ಹದ್ದಿನ ಕಣ್ಣಿರಿಸಿವೆ.
ಪಾಕ್ ಸೈನಿಕರೊಂದಿಗೆ ಧ್ವಜ ಸಭೆ ನಡೆಸಿ ಸುರಂಗ ಕೊರೆಯಲಾಗಿರುವ ವಿಚಾರವನ್ನು ಗಮನಕ್ಕೆ ತರುವುದಾಗಿ ಬಿಎಸ್‌ಎಫ್ ಅಧಿಕಾರಿಗಳು ತಿಳಿಸಿದ್ದಾರೆ.