Advertisement

BSF: ಗಡಿರಕ್ಷಣೆಗೆ ಬಿಎಸ್‌ಎಫ್ ‘ಬೀ’

10:44 PM Nov 05, 2023 | Pranav MS |

ಕೋಲ್ಕತ್ತಾ: ಭಾರತ ಹಾಗೂ ಬಾಂಗ್ಲಾ ಗಡಿಯಲ್ಲಿ ನಡೆಯುತ್ತಿರುವ ಒಳನುಸುಳುವಿಕೆ, ಜಾನುವಾರುಗಳ ಕಳ್ಳತನ, ಮಾದಕವಸ್ತುಗಳ ಕಳ್ಳಸಾಗಣೆಗಳ ಕಡಿವಾಣಕ್ಕೆ ಭಾರತೀಯ ಗಡಿ ಭದ್ರತಾಪಡೆ (ಬಿಎಸ್‌ಎಫ್) ಹೊಸ ಯೋಜನೆ ರೂಪಿಸಿದ್ದು, ಗಡಿಬೇಲಿಗಳಲ್ಲಿ ಜೇನುಸಾಕಾಣಿಕೆಗೆ ಮುಂದಾಗಿದೆ. ಇತ್ತೀಚೆಗಷ್ಟೇ ನಾದಿಯಾ ಜಿಲ್ಲೆಯ ಗಡಿಭಾಗದಲ್ಲಿ ಈ ಪ್ರಯೋಗವನ್ನು ಬಿಎಸ್‌ಎಫ್ನ 32ನೇ ಬೆಟಾಲಿಯನ್‌ ಕೈಗೊಂಡಿತ್ತು. ಇದೀಗ ಪಶ್ಚಿಮ ಬಂಗಾಳದ ಜತೆಗೆ ಹಂಚಿಕೊಂಡಿರುವ ಸಂಪೂರ್ಣ 2,217 ಕಿ.ಮೀ.ಗಡಿ ಭಾಗದಲ್ಲೂ ಇದೇ ಕ್ರಮ ಅನುಸರಿಸಲು ಯೋಜಿಸಲಾಗಿದೆ. ಕೇಂದ್ರಸರ್ಕಾರ ಆಯುಷ್‌ ಸಚಿವಾಲಯ ಈ ಸಂಬಂಧಿಸಿದಂತೆ ಬಿಎಸ್‌ಎಫ್ ಜೊತೆಗೆ ಕೈಜೋಡಿಸಿದ್ದು “ವೈಬ್ರೆಂಟ್‌ ವಿಲೇಜ್‌ ಪ್ರೋಗ್ರಾಮ್‌’ ಅನ್ವಯ ಔಷಧಿಗುಣವುಳ್ಳ ಗಿಡಗಳನ್ನು ಬಿಎಸ್‌ಎಫ್ಗೆ ನೀಡಿದೆ. ಅವುಗಳನ್ನು ಗಡಿ ಬೇಲಿಗಳ ಪಕ್ಕ ನೆಟ್ಟು, ಬೇಲಿಗಳಿಗೆ ಜೇನು ಪೆಟ್ಟಿಗಗಳನ್ನ ಅಳವಡಿಸಲಾಗುತ್ತದೆ. ಗಡಿ ಪ್ರದೇಶದ ಸ್ಥಳೀಯ ಜೇನು ಸಾಕಣೆಗಾರರಿಗೆ ಲಭ್ಯವಾಗುವಂತೆ ಬಿಎಸ್‌ಎಫ್ ನೋಡಿಕೊಳ್ಳಲಿದೆ. ಈ ಮೂಲಕ ಗಡಿ ಬೇಲಿಗಳಲ್ಲಿ ಜೇನು ಸಾಕಾಣಿಕೆಯೂ ಆಗುತ್ತದೆ. ಜತೆಗೆ ಗಡಿ ನುಸುಳುವಿಕೆಯಂಥ ಅಪರಾಧಗಳಿಗೂ ಕಡಿವಾಣ ಬೀಳಲಿದೆ ಎಂದು ಬಿಎಸ್‌ಎಫ್ ಹೇಳಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next