ಮುಂಬಯಿ : ಮುಂಬಯಿ ಶೇರು ಮಾರುಕಟ್ಟೆಯ ಸೆನ್ಸೆಕ್ಸ್ ಸೂಚ್ಯಂಕ ಇಂದು ಗುರುವಾರದ ವಹಿವಾಟನ್ನು 212 ಅಂಕಗಳ ಜಿಗಿತದೊಂದಿಗೆ ಮೂರು ತಿಂಗಳ ಗರಿಷ್ಠ ಮಟ್ಟವಾಗಿ 34,713.60 ಅಂಕಗಳ ಎತ್ತರವನ್ನು ತಲುಪಿ ಹೊಸ ಭರವಸೆಯೊಂದಿಗೆ ಕೊನೆಗೊಳಿಸಿತು.
ರಾಷ್ಟ್ರೀಯ ಶೇರು ಮಾರುಕಟ್ಟೆಯ ನಿಫ್ಟಿ ಸೂಚ್ಯಂಕ 47.25 ಅಂಕಗಳ ಜಿಗಿತವನ್ನು ದಾಖಲಿಸಿ ದಿನದ ವಹಿವಾಟನ್ನು 10,617.80 ಅಂಕಗಳ ಮಟ್ಟಕ್ಕೇರಿತು.
ಡಾಲರ್ ಎದುರು ರೂಪಾಯಿ ಬಲವರ್ಧನೆಯ ನಡುವೆ ಎಫ್ಎಂಸಿಜಿ, ಐಟಿ, ಬ್ಯಾಂಕಿಂಗ್ ಮತ್ತು ಕನ್ಸೂಮರ್ ಡ್ನೂರೇಬಲ್ಸ್ ಶೇರುಗಳು ಇಂದಿನ ವಹಿವಾಟಿನಲ್ಲಿ ಉತ್ತಮ ಖರೀದಿಯನ್ನು ಕಂಡವು.
ಎಪ್ರಿಲ್ ತಿಂಗಳ ವಾಯಿದೆ ವಹಿವಾಟು ಚುಕ್ತಾ ದಿನವಾದ ಇಂದು ವಹಿವಾಟುದಾರರು ಶಾರ್ಟ್ ಕವರಿಂಗ್ ನಡೆಸುವ ಅನಿವಾರ್ಯತೆಗೆ ಗುರಿಯಾದದ್ದು ಕೂಡ ಸೆನ್ಸೆಕ್ಸ್ ಜಿಗಿತಕ್ಕೆ ಪೂರಕವಾಯಿತು. ಇಂದು ಎಸ್ ಬ್ಯಾಂಕ್ ಉತ್ತಮ ತ್ತೈಮಾಸಿಕ ಫಲಿತಾಂಶ ಪ್ರಕಟಿಸಿತು. ಪರಿಣಾವಾಗಿ ಅದರ ಶೇರು ಧಾರಣೆ ಶೇ.8.26ರಷ್ಟು ಏರಿತು.
ನಿನ್ನೆ ಬುಧವಾರ ದೇಶೀಯ ಸಾಂಸ್ಥಿಕ ಹೂಡಿಕೆದಾರರು 435.98 ಕೋಟಿ ರೂ. ಮೌಲ್ಯದ ಶೇರುಗಳನ್ನು ಖರೀದಿಸಿದರು. ಅದೇ ವೇಳೆ ವಿದೇಶೀ ಹೂಡಿಕೆದಾರರು 304.79 ಕೋಟಿ ರೂ. ಮೌಲ್ಯದ ಶೇರುಗಳನ್ನು ಮಾರಾಟಮಾಡಿದರು.