ಮುಂಬಯಿ : ಡಾಲರ್ ಎದುರು ರೂಪಾಯಿ ಉತ್ತಮ ಚೇತರಿಕೆ ಕಾಣುತ್ತಿರುವುದರಿಂದ ಭಾರೀ ಪ್ರಮಾಣದಲ್ಲಿ ವಿದೇಶೀ ಬಂಡವಾಳ ಒಳಹರಿದು ಬರುತ್ತಿರುವ ಹಿನ್ನೆಲೆಯಲ್ಲಿ ಮುಂಬಯಿ ಶೇರು ಇಂದು ಶುಕ್ರವಾರದ ವಹಿವಾಟನ್ನು, ನಿರಂತರ ಮೂರನೇ ದಿನದ ಮುನ್ನಡೆಯಾಗಿ, 269.44 ಅಂಕಗಳ ಏರಿಕೆಯೊಂದಿಗೆ, 36,076.72 ಅಂಕಗಳ ಮಟ್ಟದಲ್ಲಿ ಕೊನೆಗೊಳಿಸಿತು.
ಇದೇ ರೀತಿ ರಾಷ್ಟ್ರೀಯ ಶೇರು ಪೇಟೆಯ ನಿಫ್ಟಿ ಸೂಚ್ಯಂಕ 80.10 ಅಂಕಗಳ ಮುನ್ನಡೆಯನ್ನು ದಾಖಲಿಸಿ ದಿನದ ವಹಿವಾಟನ್ನು 10,859.90 ಅಂಕಗಳ ಮಟ್ಟದಲ್ಲಿ ಕೊನೆಗೊಳಿಸಿತು.
ವಾರದ ನೆಲೆಯಲ್ಲಿ ಹೇಳುವುದಾದರೆ ಸೆನ್ಸೆಕ್ಸ್ ಈ ವಾರ 334.65 ಅಂಕಗಳನ್ನು ಸಂಪಾದಿಸಿದೆ. ನಿಫ್ಟಿ 105.90 ಅಂಕಗಳನ್ನು ಸಂಪಾದಿಸಿದೆ.
ಇಂದಿನ ವಹಿವಾಟಿನಲ್ಲಿ ಅತೀ ದೊಡ್ಡ ಗೇನರ್ ಎನಿಸಿಕೊಂಡ ಸನ್ ಫಾರ್ಮಾ, ಬಜಾಜ್ ಫಿನಾನ್ಸ್, ವೇದಾಂತ, ಎಸ್ ಬ್ಯಾಂಕ್, ಐಸಿಐಸಿಐ ಬ್ಯಾಂಕ್, ಎಚ್ ಡಿ ಎಫ್ ಸಿ, ಟಾಟಾ ಮೋಟರ್, ಎಚ್ ಸಿ ಎಲ್ ಟೆಕ್, ಇಂಡಸ್‌ಇಂಡ್ ಬ್ಯಾಂಕ್ ಮತ್ತು ಎಕ್ಸಿಸ್ ಬ್ಯಾಂಕ್ ಶೇರುಗಳು ಶೇ.2.98ರ ಏರಿಕೆಯನ್ನು ಕಂಡವು.
ಅದೇ ವೇಳೆ ಎಸ್ ಬ್ಯಾಂಕ್, ಐಸಿಐಸಿಐ ಬ್ಯಾಂಕ್, ಬ್ಯಾಂಕ್ ಆಫ್ ಬರೋಡ, ಎಸ್‌ಬಿಐ, ಕೋಟಕ್ ಬ್ಯಾಂಕ್ ಶೇರುಗಳು ಶೇ.2ರ ಏರಿಕೆಯನ್ನು ದಾಖಲಿಸಿದವು.
ಡಾಲರ್ ಎದುರು ರೂಪಾಯಿ ಇಂದು 37 ಪೈಸೆಗಳ ಮುನ್ನಡೆಯನ್ನು ಕಂಡು 69.98 ರೂ. ಮಟ್ಟಕ್ಕೆ ಏರಿತು.
ಮುಂಬಯಿ ಶೇರು ಪೇಟೆಯಲ್ಲಿ ಇಂದು ಒಟ್ಟು 2,794 ಕಂಪೆನಿಗಳು ವಹಿವಾಟಿಗೆ ಒಳಪಟ್ಟವು; ಈ ಪೈಕಿ 1,586 ಕಂಪೆನಿಗಳು ಮುನ್ನಡೆ ಸಾಧಿಸಿದವು; 1,052 ಕಂಪೆನಿಗಳು ಹಿನ್ನಡೆಗೆ ಗುರಿಯಾದವು; 156 ಕಂಪೆನಿಗಳ ಶೇರು ಧಾರಣೆಯಲ್ಲಿ ಯಾವುದೇ ವ್ಯತ್ಯಾಸ ಕಂಡು ಬರಲಿಲ್ಲ.